Advertisement
ಜು.17ರಿಂದ ದೇಶದ ಪಶ್ಚಿಮ ಕರಾವಳಿಯಲ್ಲಿ ಭಾರೀ ಮಳೆಯಾದರೆ, ಈಶಾನ್ಯ ಭಾರತದಲ್ಲಿ ವರುಣನಬ್ಬರ ಕಡಿಮೆಯಾಗಲಿದೆ ಎಂದೂ ಇಲಾಖೆ ತಿಳಿಸಿದೆ. ಇದೇ ವೇಳೆ, ದಿಲ್ಲಿಯಲ್ಲಿ ಯಮುನಾ ನದಿಯ ಪ್ರವಾಹ ರವಿವಾರ ಬೆಳಗ್ಗೆ ಸ್ವಲ್ಪಮಟ್ಟಿಗೆ ಇಳಿಮುಖವಾಗಿದೆ. ಆದರೆ ಸಂಜೆ ಅನಂತರ ರಾಷ್ಟ್ರ ರಾಜಧಾನಿಯಲ್ಲಿ ಮಳೆಯಾಗಿರುವ ಕಾರಣ, ಸದ್ಯ ಕ್ಕಂತೂ ನಿರಾಳ ಎನ್ನುವಂಥ ಸ್ಥಿತಿ ಬಂದಿಲ್ಲ.
Related Articles
Advertisement
ದ.ಕೊರಿಯಾದಲ್ಲಿ ಪ್ರವಾಹ: ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆಯಿಂದಾಗಿ ದಿಢೀರ್ ಪ್ರವಾಹ ಉಂಟಾ ಗಿದೆ. ಸುರಂಗವೊಂದರಲ್ಲಿ ನೀರು ತುಂಬಿಕೊಂಡು 15 ವಾಹನಗಳು ಸಿಲುಕಿದ್ದು, ಒಳಗಿದ್ದ 9 ಮಂದಿಯ ಮೃತದೇಹಗಳನ್ನು ರವಿವಾರ ಹೊರತೆಗೆ¿ ು ಲಾಗಿದೆ. ಇನ್ನೂ ಹಲವರು ಸುರಂಗದಲ್ಲಿ ಸಿಲುಕಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜು.9ರಿಂದ ಈವರೆಗೆ ಮಳೆ, ಪ್ರವಾಹಕ್ಕೆ 37 ಮಂದಿ ಬಲಿಯಾಗಿದ್ದಾರೆ. ಸಾವಿರಾರು ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.
ಕುಸಿಯುವ ಭೀತಿಯಲ್ಲಿ ಗಡಿ ಸೇತುವೆಉತ್ತರಾಖಂಡದ ಚಮೋಲಿಯಲ್ಲಿ ಭಾರತ-ಚೀನ ಗಡಿ ಪ್ರದೇಶದಲ್ಲಿರುವ ಸೇತುವೆಯೊಂದು ಅಪಾಯದಂಚಿನಲ್ಲಿದೆ. ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿಯುತ್ತಿರುವ ಕಾರಣ, ಜೋಶಿಮಠ ಸೇರಿದಂತೆ ಹಲವು ಗ್ರಾಮಗಳನ್ನು ಸಂಪರ್ಕಿಸುವ ಸೇತುವೆಯು ಜು.10ರಂದು ಭಾಗಶಃ ಕೊಚ್ಚಿ ಹೋಗಿತ್ತು. ಆದರೆ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ)ಯ ಯೋಧರು ಹ್ಯೂಮ್ ಪೈಪ್‌ಗ್ಳನ್ನು ಅಳವಡಿಸಿ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದರು. ಆದರೆ ನೀರಿನ ಹರಿವು ಹೆಚ್ಚಿರುವ ಕಾರಣ ಹಾಗೂ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಂಭವವಿದ್ದು ಸೇತುವೆ ಅಪಾಯದಲ್ಲಿದೆ ಎಂದು ಬಿಆರ್‌ಒ ತಿಳಿಸಿದೆ. ರಾಜಸ್ಥಾನದಲ್ಲಿ ಅಸಾಮಾನ್ಯ ಮಳೆ
ರಾಜಸ್ಥಾನದ 33 ಜಿಲ್ಲೆಗಳ ಪೈಕಿ 15ರಲ್ಲಿ ಈ ಬಾರಿ ಅಸಾಮಾನ್ಯ ಮಳೆಯಾಗಿದ್ದು, ಜು.15ರವರೆಗೆ ವಾಡಿಕೆಗಿಂತ ಶೇ.80.9ರಷ್ಟು ಹೆಚ್ಚು ಮಳೆ ಸುರಿದಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 146.39 ಮಿ.ಮೀ. ಮಳೆಯಾಗುತ್ತದೆ. ಆದರೆ ಈ ಬಾರಿ 264.75 ಮಿ.ಮೀ. ಮಳೆಯಾಗಿದೆ. ಅಲ್ಲದೇ ರಾಜಸ್ಥಾನದ ಒಂದೇ ಒಂದು ಜಿಲ್ಲೆಯಲ್ಲೂ ಮಳೆ ಕೊರತೆ ಕಂಡುಬಂದಿಲ್ಲ.