Advertisement
ಗೌರಿ ಹಬ್ಬದ ದಿನವಾದ ಗುರುವಾರ ಹಾಸನ ಜಿಲ್ಲಾ ವಾಣಿಜ್ಯ ಇಲಾಖೆ ಕಮೀಷನರ್ ಭರತೇಶ್ ಅವರು ಏಕಾಏಕಿ ಪಟ್ಟಣಕ್ಕೆ ಆಗಮಿಸಿ ಕೆಲಅಂಗಡಿಗಳಿಗೆದಾಳಿಮಾಡಿದವಿಷಯ ತಿಳಿದಮುಖ್ಯ ರಸ್ತೆಯ ಚಿನ್ನ ಬೆಳ್ಳಿ, ಜವಳಿ ವರ್ತಕರು ಹಾಗೂ ಇನ್ನಿತರೆ ಅಂಗಡಿ ಮಾಲಿಕರು, ಅಧಿಕಾರಿಗಳ ದಾಳಿಗೆ ಬೆದರಿ ಏಕಾಏಕಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಕೆಲವೇ ನಿಮಿಷಗಳಲ್ಲಿಕಣ್ಮರೆ ಆದರು.
Related Articles
ಕೋವಿಡ್ ಆರ್ಭಟದಲ್ಲಿ ವ್ಯಾಪಾರ ವಹಿವಾಟು ಇಲ್ಲದೆ ವರ್ತಕರು ಬಸವಳಿದು ಕುಳಿತು ಜೀವನ ನಡೆಸುವುದೇ ಕಷ್ಟವಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳಾದ ತಾವುಗಳು ಏಕಾಏಕಿ ಪಟ್ಟಣಕ್ಕೆ ಆಗಮಿಸಿದ್ದು ಬಹುತೇಕ ವರ್ತಕರು ಅಂಗಡಿ ಮುಂಗಟ್ಟು ಮುಚ್ಚಿದ್ದಾರೆ ಎಂದು ಅವರಿಗೆ ಮನವರಿಕೆ ಮಾಡಿಕೊಟ್ಟರೆಂದು ಗೊತ್ತಾಗಿದೆ. ಆಗ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಪಟ್ಟಣದಲ್ಲಿನ ಕೆಲ ವರ್ತಕರು ಜಿಎಸ್‌ಟಿ ನೋಂದಣಿ ಮಾಡಿಸದೆ ವಹಿವಾಟು ನಡೆಸುತ್ತಿದ್ದಾರಾ, ಅಥವಾ ಗ್ರಾಹಕರಿಗೆ ಬಿಲ್ ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ತಾವು ಬಂದಿರುವುದಾಗಿ ಮಾಹಿತಿ ನೀಡಿದರು.
Advertisement
ತೊಂದರೆ ನೀಡುವಉದ್ದೇಶವಿಲ್ಲ: ಸ್ಪಷ್ಟನೆ
ಹಬ್ಬದ ದಿನಗಳಾದ ವ್ಯಾಪಾರ ವಹಿವಾಟಿಗೆ ತೊಂದರೆ ನೀಡಬೇಕೆಂಬ ಉದ್ದೇಶ ನಮ್ಮದಲ್ಲ. ನಮಗೂನಮ್ಮ ಮೇಲಿನ ಅಧಿಕಾರಿಗಳ ಸೂಚನೆ ಮೇರೆಗೆ ಬಂದಿದ್ದೇವೆ. ತಾವು ಮುಂದಿನ ವಾರ ಪಟ್ಟಣಕ್ಕೆ ಆಗಮಿಸಿ ವರ್ತಕರಲ್ಲಿನ ಜಿಎಸ್‌ಟಿಮತ್ತಿತರೆ ತನಿಖೆ ಮಾಡುವುದಾಗಿ ವರ್ತಕ ರಲ್ಲಿ ಅರಿವು ಮೂಡಿಸುತ್ತೇವೆಂದರು. ಇನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳು ಪಟ್ಟಣದಿಂದ ಹೊರಹೋಗುತ್ತಿದ್ದಂತೆ ಮುಚ್ಚಿದ್ದ ಅಂಗಡ ಮುಂಗಟ್ಟುಗಳು ಪುನಃ ತೆರೆದು ವರ್ತಕರು ತಮ್ಮ ವಹಿವಾಟು ನಡೆಸಿದರು.