Advertisement
ಮತ್ತೆ ಮತ್ತೆ ಸೀಟಿಗಾಗಿ ಪೈಪೋಟಿ ನಡೆಸುವ ರಾಜಕಾರಣಿಗಳ ಮಧ್ಯೆ ರಾಜೇಶ್ ನಾೖಕ್ ಅವರು ಅಪರೂಪವಾಗಿ ಕಂಡುಬರುತ್ತಿದ್ದು, ಬಹಳ ಹಿಂದೆಯೇ ಚುನಾವಣೆಗೆ ನಿಲ್ಲುವ ಅವಕಾಶ ಇದ್ದರೂ ಅದನ್ನು ನಯವಾಗಿ ತಿರಸ್ಕರಿಸಿದ್ದರು. 2013ರಲ್ಲಿ ಸ್ಪರ್ಧಿಸಿ ಸೋತ ಸಂದರ್ಭದಲ್ಲೂ ಇಡೀ ಕ್ಷೇತ್ರದಾದ್ಯಂತ ಪಾದಯಾತ್ರೆ ನಡೆಸಿ ಜನತೆಯ ಕಷ್ಟವನ್ನು ಆಲಿಸಿದ ಹೆಗ್ಗಳಿಕೆ ರಾಜೇಶ್ ನಾೖಕ್ ಅವರದ್ದಾಗಿದ್ದು, ಒಟ್ಟು ಮೂರು ಬಾರಿ ಪಾದಯಾತ್ರೆಯ ಮಾಡುವ ಮೂಲಕ ದೇಶದಲ್ಲೇ ಅಪರೂಪದ ಶಾಸಕರೆನಿಸಿಕೊಂಡಿದ್ದಾರೆ.
ಜಿಲ್ಲೆಯ ಮೊದಲ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಯನ್ನು ಬಂಟ್ವಾಳ ಕ್ಷೇತ್ರಕ್ಕೆ ತಂದು ಅನುಷ್ಠಾನ ಮಾಡಿದ ಹೆಗ್ಗಳಿಕೆ ರಾಜೇಶ್ ನಾೖಕ್ ಅವರದ್ದಾಗಿದೆ. ಜತೆಗೆ ಕೋಮುಗಲಭೆಗಳಿಂದ ತುಂಬಿದ ಬಂಟ್ವಾಳದಲ್ಲಿ ಶಾಂತಿಯ ವಾತಾವರಣ ನಿರ್ಮಿಸಿದ ಕೀರ್ತಿಯೂ ಅವರದ್ದಾಗಿದೆ. ಹೀಗಾಗಿ ಅವರು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಪೂಜಾರಿಯವರು ತಿಳಿಸಿದ್ದಾರೆ.