Advertisement

ಯಾವುದೇ ವೃತ್ತಿಯನ್ನು ಅವಹೇಳನ ಮಾಡುವುದು ಸರಿಯಲ್ಲ: ಸಚಿವ ಸುಧಾಕರ್‌

08:16 PM Apr 10, 2022 | Team Udayavani |

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೇರಿ ನಾವೆಲ್ಲರೂ ಹೊಟ್ಟೆ ಪಾಡಿಗಾಗಿಯೇ ಕೆಲಸ ಮಾಡುವುದು. ಯಾವುದೇ ವೃತ್ತಿಯನ್ನು ಅವಹೇಳನ ಮಾಡುವುದು ಸರಿಯಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಹೇಳಿದರು.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಚಕರು ಹಾಗೂ ನಾವು ಎಲ್ಲರೂ ಹೊಟ್ಟೆಪಾಡಿಗಾಗಿ ಕೆಲಸ ಮಾಡುತ್ತಿರುವುದು. ಬದುಕು ಕಟ್ಟಿಕೊಳ್ಳಲು ಒಂದು ವೃತ್ತಿ ಬೇಕಲ್ಲ. ಆಯಾ ವೃತ್ತಿಯಲ್ಲಿ ಅವರ ಬದುಕಿರುತ್ತದೆ ಎಂದು ಕುಮಾರಸ್ವಾಮಿ ಹೇಳಿಕೆಗೆ ಟಾಂಗ್‌ ನೀಡಿದರು.

ಅರ್ಚಕರ ವೃತ್ತಿಯಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕೇಳಿಕೊಳ್ಳುತ್ತಾರೆ. ಅದು ಅವರ ವೃತ್ತಿಯ ವಿಶೇಷ. ಯಾವ ವೃತ್ತಿ ಬಗ್ಗೆಯೂ ಕೇವಲವಾಗಿ ಮಾತನಾಡಬಾರದು. ಅವರು ಮಾಡುವ ಕೆಸಲದಲ್ಲಿ ಅವರದ್ದೇ ಆದ ಗೌರವವಿರುತ್ತದೆ ಎಂದರು.

ನಮ್ಮ ರಾಜ್ಯದ ಜನ ಶಾಂತಿಪ್ರಿಯರು. ಸಾಮರಸ್ಯವನ್ನು ಕದಡುವಂತಹ ಕೆಲಸವನ್ನು ಯಾರೂ ಮಾಡಬಾರದು. ಸಾಮರಸ್ಯ ಕದಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಅಲ್ಲದೇ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ. ಯಾವುದೇ ಧರ್ಮದವರು ಯಾವುದೇ ವೃತ್ತಿ ನಂಬಿ ಬದುಕು ಸಾಗಿಸುವವರ ಮೇಲೆ ಅಕ್ರಮಣ ಮಾಡುವುದು, ಅವರ ಬದುಕು ಹಾಳು ಮಾಡುವಂತಹ ಕೆಲಸವನ್ನು ಯಾರೂ ಮಾಡಬಾರದು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next