Advertisement

ಜಾನಪದದ ಮಹತ್ವ ಅರಿವು ಅಗತ್ಯ

05:21 PM Aug 28, 2022 | Team Udayavani |

ರಾಮನಗರ: ವಿದ್ಯಾರ್ಥಿಗಳು ಜಾನಪದ ಮತ್ತು ಅದರ ಮಹತ್ವ ಅರ್ಥ ಮಾಡಿಕೊಳ್ಳಬೇಕಾದ ತುರ್ತು ಹಿಂದೆಂದಿ ಗಿಂತಲೂ ಈಗ ಅಗತ್ಯವಿದೆ. ಅವರಿಗೆ ಅರಿವು ಮೂಡಿಸು ವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಎಂ.ಲಿಂಗಪ್ಪ ತಿಳಿಸಿದರು.

Advertisement

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಬಿಡದಿ ಜ್ಞಾನವಿಕಾಸ ವಿದ್ಯಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನಾಚರಣೆ ಹಾಗೂ ಬಿಡದಿ ಹೋಬಳಿ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜನಪದ ಜನರ ಬಾಯಿಂದ ಬಾಯಿಗೆ ಹರಿದು ಬಂದದ್ದು, ಅದರ ನಾಶ ಆಗೋದು ಅಷ್ಟೊಂದು ಸುಲಭವಲ್ಲ. ನಮ್ಮ ಸಮೂಹ ಎಲ್ಲರೂ ಜವಾಬ್ದಾರಿ ವಹಿಸಿ ಜನಪದದ ಉಳಿವಿಗೆ ಶ್ರಮಿಸಬೇಕಿದೆ. ಆಧುನಿಕ ಕಾಲಮಾನಕ್ಕೆ ತಕ್ಕಂತೆ ಬದಲಾಗುತ್ತಿರುವ ಜಾನಪದ ಸಾಹಿತ್ಯ ಸಂಸ್ಕೃತಿಯ ಎಲ್ಲ ನೆಲೆಗಳಲ್ಲೂ ವ್ಯಾಪಿಸುವ ಅವಶ್ಯಕತೆಯಿದೆ ಎಂದರು.

ಕಲಾವಿದರನ್ನು ಗುರುತಿಸಿ ಪ್ರೊತ್ಸಾಹ: ರಾಮನಗರ ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ. ನಾಗೇಶ್‌ ಮಾತನಾಡಿ, ಸಮಾಜದ ಪ್ರತಿಯೊಬ್ಬರಲ್ಲೂ ಜಾನಪದ ಸಾಹಿತ್ಯದ ಪ್ರೀತಿ ಹುಟ್ಟಿಸುವ ಕಾರ್ಯವಾಗಬೇಕಾಗಿದೆ. ಆ ಕೆಲಸವನ್ನು ಪರಿಷತ್ತು ನಿರ್ವಹಿಸುವ ಗುರುತರ ಹೊಣೆಗಾರಿಕೆ ಹೊಂದಿದೆ ಎಂದ ಅವರು, ಜಾನಪದ ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್‌ ಕೂಡ ಅದರ ಉಳಿವಿಗೆ ಯೋಜನೆಗಳನ್ನ ರೂಪಿಸಿ ಕಾರ್ಯಕ್ರಮಗಳ ಮುಖಾಂತರ ಕಲಾವಿದರನ್ನ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಜಾನಪದ ವಿದ್ವಾಂಸ ಭೈರೇಗೌಡ ಮಾತನಾಡಿ, ಎಲ್ಲಾ ಪ್ರಕ್ರಿಯೆಗಳಿಗೂ ತಾಯಿ ಬೇರೆನಿ ಸಿಕೊಂಡಿರುವ ಜಾನಪದಕ್ಕೊಂದು ದಿನ ವಿಶ್ವ ಜಾನಪದ ದಿನಾಚರಣೆಯಾದರೆ ಅದಕಿನ್ನೂ ಯುನೆಸ್ಕೋ ಮತ್ತು ವಿಶ್ವಸಂಸ್ಥೆಯ ಅನುಮೋದನೆ ದೊರೆಯದಿರುವುದು ವಿಷಾದದ ಸಂಗತಿ ಎಂದರು.

ನೇಮಕಾತಿ ಪತ್ರ ವಿತರಣೆ: ಬಿಡದಿ ಹೋಬಳಿ ಘಟಕದ ಅಧ್ಯಕ್ಷ ಚಂದ್ರಶೇಖರ್‌ ಮತ್ತು ಕಾರ್ಯದರ್ಶಿಗಳನ್ನಾಗಿ ಮಾದೇಶ್‌ ಮತ್ತು ಕೆ.ಟಿ ರವಿಕುಮಾರ್‌ಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಕಸಾಪ ಕೋಶಾಧ್ಯಕ್ಷ ನಂಜುಂಡಿ ಬಾನಂದೂರು, ಬಿಡದಿ ಹೋಬಳಿ ಘಟಕದ ನಿ.ಪೂ. ಅಧ್ಯಕ್ಷ ಯೋಗಾನಂದ್‌, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಮಹದೇವ್‌ ಲಕ್ಕಸಂದ್ರ, ಜೆವಿಐಟಿ ಸಂಸ್ಥೆ ನಿರ್ದೇಶಕ ಗಂಗಣ್ಣ, ರಾಮನಗರ ತಾ.ಕಸಾಪ ಸಂಚಾಲಕ ಗಿರೀಶ್‌ ರಾಮನಹಳ್ಳಿ, ಕೆ. ಲೋಕೇಶ್‌, ಬಿ.ಟಿ.ರಾಜೇಂದ್ರ ಹಾಗೂ ಮತ್ತಿತರರು ಇದ್ದರು.

Advertisement

ಜಾನಪದ ನಮ್ಮ ಪೂರ್ವಿಕರು ನಮಗೆ ಬಳುವಳಿಯಾಗಿ ನೀಡಿರುವ ಸಂಪತ್ತು. ಜಾನಪದ ಉಳಿಸುವ ನಿಟ್ಟಿನಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಹಲವು ಯೋಜನೆಗೆ ಚಿಂತಿಸುತ್ತಿದ್ದು, ಕಲಾವಿದರನ್ನ ಪ್ರೋತ್ಸಾಹಿಸಿ ಉತ್ತೇಜನ ನೀಡುವ ಮೂಲಕ ಜನಪದದ ಉಳುವಿಗೆ ಶ್ರಮಿಸುತ್ತೇನೆ. ಬಿ.ಟಿ ನಾಗೇಶ್‌, ಕಸಾಪ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next