Advertisement
ಯಶವಂತಪುರದ ಧರ್ಮ ಸಂರಕ್ಷಣಾ ಸಮಿತಿ ವತಿಯಿಂದ ಭಾನುವಾರ ನಗರದ ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಭಾರತವನ್ನು ಪುಣ್ಯ ಭೂಮಿ ಎಂದುಕೊಂಡವರೆಲ್ಲರೂ ಹಿಂದೂಗಳೇ. ರಾಷ್ಟ್ರೀಯತೆ ಜಾತಿ ಆಧಾರದಲ್ಲಿ ನಿರ್ಧಾರವಾಗಿಲ್ಲ. ಭಾರತದೊಳಗಿದ್ದು, ಪಾಕಿಸ್ತಾನ್ ಜಿಂದಾಬಾಂದ್ ಎಂದು ಘೋಷಣೆ ಕೂಗುವ ಎಲ್ಲರೂ ದೇಶ ದ್ರೋಗಳೇ ಎಂದು ಕಿಡಿಕಾರಿದರು.
Related Articles
Advertisement
ಸ್ವಾತಂತ್ರ ದಿನಾಚರಣೆಯಂದು ದೇಶ ಇಬ್ಭಾಗವಾಗಿದ್ದು ಹಿಂದೂ ರಾಷ್ಟ್ರದ ದೀರ್ಘ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿದೆ. ಇದರ ಪರಿಣಾಮ ಸಿಂಧು ನದಿ, ವಿವೇಕಾನಂದರು ಹುಟ್ಟಿದ ಭೂಮಿ ಭಾರತದಲ್ಲಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ, ಸ್ಥಾನಮಾನಕ್ಕಾಗಿ ದೇಶವನ್ನು ತುಂಡರಿಸುವ ಪಾಪದ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಬಹುಸಂಖ್ಯಾತ ವಿರೋಧಿ ಟಿಪ್ಪುವಿನ ಜಯಂತಿ ಮಾಡುತ್ತಿದೆ. ಈಗ ಬಹಮನಿ ಉತ್ಸವ ಮಾಡಲು ಮುಂದಾಗಿದೆ. ಇಂತಹ ಸರ್ಕಾರವನ್ನು ಕಿತ್ತೂಗೆಯಬೇಕು. ಗೋಹತ್ಯೆ, ಲವ್ ಜಿಹಾದ್ ಮೂಲಕ ಹಿಂದೂಗಳ ಶ್ರದ್ಧೆಯನ್ನು ಭಂಗ ಮಾಡುವ ದುಷ್ಕೃತ್ಯ ನಡೆಯುತ್ತಿದೆ. ಹಿಂದೂಗಳು ಎಚ್ಚರವಾಗದೇ ಇದ್ದರೆ ಇದಕ್ಕೆಲ್ಲ ಉತ್ತರ ನೀಡಲು ಸಾಧ್ಯವಿಲ್ಲ ಎಂದರು.
ಒಕ್ಕಲಿಗ ಮಹಾಸಂಸ್ಥಾನದ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಕೊಳ್ಳೇಗಾಲ ವಿರಕ್ತ ಮಠದ ಶ್ರೀಕಂಠ ಸ್ವಾಮೀಜಿ, ಆಯುರಾಶ್ರಮದ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಉರಿಗದ್ದಿಗೇಶ್ವರ ಕ್ಷೇತ್ರದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಹಿಂದೂಧರ್ಮದಂತಹ ಶ್ರೇಷ್ಠ ಧರ್ಮ ಜಗತ್ತಿನಲ್ಲಿ ಇನ್ನೊಂದಿಲ್ಲ. ಅತ್ಮ ವಿಶ್ಲೇಷಣೆ ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ. ಇಲ್ಲಿ ದ್ವೇಷ, ಅಸೂಯೆ ಇಲ್ಲ. ಹಿಂದೂ ಮಕ್ಕಳಿಗೆ ಧರ್ಮದ ಬಗ್ಗೆ ಅಭಿಮಾನ ಬರುವಂತೆ ಮಾಡಬೇಕು.-ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಜ್ಞಾನ, ವಿಜ್ಞಾನ, ಜೀವನ, ಜೀವನ್ಮುಕ್ತಿ ಧರ್ಮದಿಂದಲೇ ಎಂಬುದನ್ನು ಜಗತ್ತಿಗೆ ತಿಳಿಸಿಕೊಟ್ಟಿರುವುದೇ ಹಿಂದೂಧರ್ಮ. ರಾಷ್ಟ್ರ, ಧರ್ಮ ಮತ್ತು ಪ್ರಕೃತಿಯನ್ನು ಉಳಿಸಲು ನಾವೆಲ್ಲ ಜಾಗೃತರಾಗಲೇಬೇಕು.
-ಶ್ರೀಕಂಠ ಸ್ವಾಮೀಜಿ ತಾಯಿ ಹಾಲು ಎರಡು ವರ್ಷ, ಹಸುವಿನ ಹಾಲು ಜೀವನಪೂರ್ತಿ. ಬರಡು ನೆಲದಲ್ಲಿ ಆದರ್ಶ ಸಂಘಟನೆ ಹುಟ್ಟಿದರೆ ಅದೇ ರಾಮರಾಜ್ಯ. ಭಾರತೀಯ ವೀರ ಪುರಷರ ಚರಿತ್ರೆಯನ್ನು ಮಕ್ಕಳಿಗೆ ಪಠ್ಯದ ಮೂಲಕ ತಿಳಿಸುತ್ತಿಲ್ಲ.
-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ದೇಶದಲ್ಲಿ ಈಗ ಇರುವ ಪರಿಸ್ಥಿತಿಯೇ ಮುಂದುವರಿದರೆ ಹಿಂದೂಗಳು ಎಷ್ಟು ವರ್ಷ ಬಹುಸಂಖ್ಯಾತರಾಗಿರಲು ಸಾಧ್ಯ? ರಾಜ್ಯ ಸರ್ಕಾರವೇ ವಿವಿಧ ರೀತಿಯಲ್ಲಿ ಅಲ್ಪಸಂಖ್ಯಾತರನ್ನು ಸೃಷ್ಟಿಸುತ್ತಿದೆ. ದೇಶಕ್ಕೆ ಸ್ವಾತಂತ್ರ ಬಂದಿದೆ. ಆದರೆ, ಹಿಂದೂಗಳಿಗೆ ಇನ್ನೂ ಸ್ವಾತಂತ್ರ ಸಿಕ್ಕಿಲ್ಲ.
-ವಿಶ್ವ ಸಂತೋಷ ಗುರೂಜಿ