Advertisement

ಮಾಸ್ಟರ್ ಪ್ಲ್ಯಾನ್‌ ಅಳವಡಿಸಿ ರಸ್ತೆ ನಿರ್ಮಿಸುವುದು ಸೂಕ್ತ

05:57 PM Mar 25, 2022 | Niyatha Bhat |

ಮುದ್ದೇಬಿಹಾಳ: ಪಟ್ಟಣದ ಬಸವೇಶ್ವರ ವೃತ್ತದಿಂದ ಇಂದಿರಾ ವೃತ್ತದವರೆಗೆ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ಬಜಾರ್‌ನ ಕೆಲ ವ್ಯಾಪಾರಸ್ಥರು ತಕರಾರು ತೆಗೆದಿದ್ದಾರೆ. ಈ ಕುರಿತ ತಮ್ಮ ಅಳಲನ್ನು ಬುಧವಾರ ಮಾಜಿ ಸಚಿವ ಸಿ.ಎಸ್‌.ನಾಡಗೌಡ ಅವರ ಬಳಿ ತೋಡಿಕೊಂಡಿದ್ದು ಮಾಸ್ಟರ್‌ ಪ್ಲ್ಯಾನ್‌ ಅನ್ವಯ ಕಾಮಗಾರಿ ನಡೆಸಿ ರಸ್ತೆ ಅಗಲೀಕರಣ ಮಾಡುವುದು ಸೂಕ್ತ. ಆದರೆ ಮೂಲ ಅತಿಕ್ರಮಣದಾರರನ್ನು ರಕ್ಷಿಸಲು ಮತ್ತು ರಸ್ತೆ ಬದಿ ವ್ಯಾಪಾರ ಮಾಡುವ ಬಡವರನ್ನು ಒಕ್ಕಲೆಬ್ಬಿಸಲು ತಂತ್ರಗಾರಿಕೆ ಬಳಸಲಾಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು.

Advertisement

ವ್ಯಾಪಾರಸ್ಥರ ಅಳಲು ಆಲಿಸಿದ ಮೇಲೆ ಅವರ ಸಮ್ಮುಖವೇ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಎಸ್‌.ನಾಡಗೌಡ, ನನ್ನ ದೃಷ್ಟಿಯಲ್ಲಿ ಸಿಸಿ ರಸ್ತೆಗಳು ಎಂದರೆ ಕ್ರೆಡಿಟ್‌ ಕಾರ್ಡಿಂಗ್‌ ರಸ್ತೆಗಳಿದ್ದಂತೆ. ಯಾವಾಗ ಬೇಕಾದರೂ ಕಾರ್ಡ್‌ ಹಾಕಿ ಹಣ ತರಬಹುದು ಎಂದು ಲೇವಡಿ ಮಾಡಿದರು. ಪಿಡಬ್ಲೂಡಿಯಿಂದ ಪ್ರಾಮ್ಸಿ (ಪಿಆರ್‌ಎಎಂಸಿ-ಪ್ಲಾ್ನಿಂಗ್‌ ಮತ್ತು ರೋಡ್‌ ಅಸೆಟ್‌ ಮ್ಯಾನೆಜ್‌ಮೆಂಟ್‌ ಸೆಂಟರ್‌) ಯೋಜನೆ ಅಡಿ ಈ ಕೆಲಸ ಮಾಡಲಾಗುತ್ತಿದೆ. ಇದು ಅಪಘಾತಗಳ ಸಂಖ್ಯೆ ಹೆಚ್ಚಾಗಿರುವ ಕಡೆ ವೃತ್ತದಿಂದ ವೃತ್ತಕ್ಕೆ ಸಂಪರ್ಕಿಸುವ ರಸ್ತೆಯಾಗಿದೆ. ನಾನು ಶಾಸಕನಾಗಿದ್ದಾಗ ಆಗಿನ ಪಿಡಬ್ಲೂಡಿ ಎಇಇ ದೇಶಪಾಂಡೆ ಅವರ ಮೂಲಕ ಸರ್ಕಾರಕ್ಕೆ ಈ ರಸ್ತೆ ಅಭಿವೃದ್ಧಿಗೆ ಡಿಪಿಆರ್‌ ಸಲ್ಲಿಸಲಾಗಿತ್ತು. ಆದರೆ ಆಕ್ಸಿಡೆಂಟ್‌ ರೇಟ್‌ ಝೀರೋ ಇದೋದರಿಂದ ಪ್ರಾಮ್ಸಿ ಅಡಿ ಇದನ್ನು ಕೈಗೆತ್ತಿಕೊಳ್ಳಲು ಬರೊಲ್ಲ ಎಂದು ಆಗ ಸರ್ಕಾರದ ಕಾರ್ಯದರ್ಶಿಯವರು ನಿರಾಕರಿಸಿದ್ದರು ಎಂದು ನಾಡಗೌಡರು ನೆನಪಿಸಿಕೊಂಡರು.

ಆದರೆ ಈಗ ಈ ರಸ್ತೆಗೆ ಅನುಮೋದನೆ ನೀಡಲಾಗಿದೆ. ಆದರೆ ನಿಯಮಗಳು ಫಾಲೋ ಅಪ್‌ ಆಗ್ತಿಲ್ಲ. ರಸ್ತೆ ಅಗಲೀಕರಣ ಆಗುತ್ತಿಲ್ಲ. ಅತಿಕ್ರಮಣ ತೆರವುಗೊಳ್ಳುತ್ತಿಲ್ಲ. ಡಬ್ಬಿ ಅಂಗಡಿ, ಚರಂಡಿ ಆಚೆ ಕಡೆ ಇರುವವರಿಗೆ ತೊಂದರೆ ಮಾಡಲಾಗುತ್ತಿದೆ. ಮೂಲ ಅತಿಕ್ರಮಣದಾರರ ಬಗ್ಗೆ ಚಕಾರ ಎತ್ತುತ್ತಿಲ್ಲ. ಈ ರಸ್ತೆಯ ಕೆಳಗೆ ಒಳಚರಂಡಿಗಾಗಿ ಹಾಕಿರುವ ಮಣ್ಣಿನಿಂದ ಮಾಡಿದ ಸ್ಟೋನ್‌ ಏರ್‌ ಪೈಪ್‌ಗ್ಳಿವೆ. ಒಳಚರಂಡಿ ಪೂರ್ಣ ಮುಕ್ತಾಯಗೊಂಡಿಲ್ಲ. ಇವುಗಳ ಮೇಲೆ ಮಶಿನ್‌ ಓಡಾಡಿಸಿದಾಗ ಒಳಗೆ ಕ್ರಾಕ್‌ ಆಗಿ ಮೇಲಿನ ಸಿಸಿ ಸಮಸ್ಯೆಗೊಳಗಾಗುತ್ತದೆ. ಸಂಗಮೇಶ್ವರ ನಗರದಲ್ಲಿ ಇಂಥದ್ದೇ ಘಟನೆ ನಡೆದಾಗ ನಿರ್ಮಿಸಿದ್ದ ಸಿಸಿ ರಸ್ತೆ ಅಗೆದು ಹೊಸದಾಗಿ ಮಾಡಿದರು ಎಂದು ತಿಳಿಸಿದರು.

ಪಟ್ಟಣಕ್ಕೆ 24×7 ಕುಡಿವ ನೀರಿನ ಯೋಜನೆ ಇನ್ನೂ ಫಾಲೊಅಪ್ ಆಗಿಲ್ಲ. 24×7 ಯೋಜನೆ ಬಂದಾಗ ಮತ್ತೇ ಸಿಸಿ ರೋಡ್‌ ಅಗೆದು, ರೋಡ್‌ ಕತ್ತರಿಸಬೇಕು. ಆ ರಸ್ತೆಯಲ್ಲಿ ಅಷ್ಟೊಂದು ಹೆವಿ ಟ್ರಾಫಿಕ್‌ ಇಲ್ಲ. ಸಣ್ಣ ವಾಹನಗಳು ತಿರುಗಾಡುತ್ತವೆ. 20-30 ಲಕ್ಷ ಖರ್ಚು ಮಾಡಿ ಪಾಟ್‌ ಹೋಲ್‌ ತುಂಬಿ ದುರಸ್ತಿ ಮಾಡಿದ್ದರೆ ಮುಂದಿನ 5 ವರ್ಷ ನಡೆಯುತ್ತಿತ್ತು. ಅಷ್ಟರೊಳಗೆ ಯುಜಿಡಿ, 24×7 ಯೋಜನೆ ಪೂರ್ಣಗೊಂಡ ಮೇಲೆ ಪ್ರಾಮ್ಸಿ ಅಡಿ ಈ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಮಾಡಬಹುದಿತ್ತು. ಆಗ ಸರ್ಕಾರಕ್ಕೂ ಹೊರೆ ಆಗುತ್ತಿರಲಿಲ್ಲ. ಆದರೆ ಆ ನಿಟ್ಟಿನಲ್ಲಿ ಚಿಂತನೆ ನಡೆಸದೆ ಅವಸರವಸರವಾಗಿ ಕೆಲಸ ಮಾಡಲಾಗುತ್ತಿದೆ. ಜನರ ಹಣದ ನೆಪದಲ್ಲಿ ಉದ್ಯೋಗ ಮಾಡಿಕೊಂಡಿರುವುದನ್ನು ನಾನು ಟೀಕಿಸುತ್ತೇನೆ ಎಂದರು. ‌

ಪಟ್ಟಣದಲ್ಲಿ ಸಿಮೆಂಟ್‌ ಕಾಂಕ್ರಿಟ್‌ ರಸ್ತೆ ಹೆಸರಿನಲ್ಲಿ ಅವೈಜ್ಞಾನಿಕ ಕೆಲಸಗಳು ನಡೆಯುತ್ತಿವೆ. ಬೀದಿ ಬದಿ ವ್ಯಾಪಾರ ಮಾಡುವ ಬಡವರನ್ನು ಬಲವಂತವಾಗಿ ಒಕ್ಕಲೆಬ್ಬಿಸಲಾಗುತ್ತಿದೆಯೇ ಹೊರತು ಮಾಸ್ಟರ್‌ ಪ್ಲ್ಯಾನ್‌ ಅನ್ವಯಿಸಿ ಎಲ್ಲರನ್ನೂ ಸಮನಾಗಿ ಕಂಡು ಅತಿಕ್ರಮಣ ತೆರವುಗೊಳಿಸುವ ಕಾರ್ಯ ನಡೆಯುತ್ತಿಲ್ಲ.  -ಸಿ.ಎಸ್‌.ನಾಡಗೌಡ, ಮಾಜಿ ಸಚಿವರು

Advertisement
Advertisement

Udayavani is now on Telegram. Click here to join our channel and stay updated with the latest news.

Next