Advertisement

ಶ್ರೀ ರಾಮುಲು ಸಿರುಗುಪ್ಪದಲ್ಲಿ ನಿಲ್ಲುತ್ತಾರೆ ಅನ್ನೋದು ಸುಳ್ಳು : ಸುರೇಶ್ ಬಾಬು

06:57 PM Jan 05, 2023 | Team Udayavani |

ಕುರುಗೋಡು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆರೋಪ ಮಾಡಲು ಬೇರೆ ಕಾರಣಗಳು ಇಲ್ಲದೆ ಇರುವುದರಿಂದ ರಾಜ್ಯದ ಜನತೆಯನ್ನು ದಾರಿ ತಪ್ಪಿಸಿ ಮುಂದೆ ಅಧಿಕಾರ ಪಡಿಯಲು ಪ್ರತಿ ಕಾರ್ಯಕ್ರಮದಲ್ಲಿ ಬಿಜೆಪಿ 40%ಸರಕಾರ ಎಂದು ಆರೋಪಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಟಿ. ಎಚ್. ಸುರೇಶ್ ಬಾಬು ಹೇಳಿದರು.

Advertisement

ಸಮೀಪದ ಎಮ್ಮಿಗನೂರು ಗ್ರಾಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸದ್ಯ ಅವರಿಗೆ ಆರೋಪ ಮಾಡುವುದಕ್ಕೆ ಬೇರೆ ದಾರಿ ಇಲ್ಲ ಆದ್ದರಿಂದ ಸರಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಅವರ ಒಂದು ಆರೋಪ ಸತ್ಯಕ್ಕೆ ದೂರವಾದ ಮಾತು. ಹಿಂದೆ ಕಾಂಗ್ರೆಸ್, ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ ಏನು ನಡೆದಿದೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ ಎಂದು ಟಾಂಗ್ ನೀಡಿದರು.

ಬೇರೆ ಪಕ್ಷ ಅನ್ನೋದು ಬಿಟ್ಟು ನನ್ನ ಅವಧಿಯಲ್ಲಿ ಏನು ಅಭಿವೃದ್ಧಿ ಕಾರ್ಯಗಳು ನಡೆದಿವೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿದ ಯೋಜನೆಗಳನ್ನು ಮುಂದಿಟ್ಟು ಕೊಂಡು ಜನರ ಮುಂದೆ ಹೋಗಿ ರಾಜಕೀಯ ಮಾಡುವ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಕಂಪ್ಲಿ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಪರ ಜನರು ವಾಲಿದ್ದಾರೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಅದರಲ್ಲಿ ಯಾವುದೇ ಅನುಮಾನ ವಿಲ್ಲ ಎಂದರು.

ರಾಜಕೀಯ ಬಂದಾಗ ಕೆಲ ಕಾರ್ಯಕರ್ತರಲ್ಲಿ ಅಸಮಾಧಾನ ಆಗೋದು ಸಾಮಾನ್ಯ ಆದ್ದರಿಂದ ಪಕ್ಷದಿಂದ ಹೊರಗಡೆ ಹೋಗುತ್ತಾರೆ. ಬಿಜೆಪಿ ಪಕ್ಷದಿಂದ ಕೆಲವ್ರು ಹೋದ್ರೆ ಕಾಂಗ್ರೆಸ್ ನವರು ಕೂಡ ನಮ್ಮ ಪಕ್ಷಕ್ಕೆ ಬಂದಿದ್ದಾರೆ ಇವೆಲ್ಲ ಸಾಮನ್ಯ. ರಾಜ್ಯದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಲ್ಲಿ ಯಾವುದೇ ಫೈಟ್ ಇರಲ್ಲ. ನಮ್ಮ ಪಕ್ಷ ಸಿಸ್ಟಮೇಟಿಕ್ ಪಕ್ಷ ಆದ್ದರಿಂದ ಒಬ್ಬರಿಗೆ ಆದ್ಯತೆ ಕೊಡುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳ ನಡುವೆ ಫೈಟ್ ಜಾಸ್ತಿ ಅದರಲ್ಲಿ ಸಿಸ್ಟಮೇಟಿಕ್ ಇಲ್ಲ ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ವ್ಯಂಗ್ಯವಾಡಿದರು.

ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಿರುವುದರಿಂದ ಬಿಜೆಪಿ ಪಕ್ಷಕ್ಕೆ ಲಾಭ ಮತ್ತು ನಷ್ಟ ಎರಡು ಇಲ್ಲ, ಬಿಜೆಪಿ ಪಕ್ಷ ತನ್ನದೇ ಅದ ಆಶಯಗಳಂತೆ ಮುನ್ನಡೆಯಲಿದೆ. ಬಿಜೆಪಿ ಪಕ್ಷದಲ್ಲಿ ಏನು ಆಗಬೇಕು ಅದು ಆಗುತ್ತದೆ ಎಂದರು.

Advertisement

ಸಚಿವ ಶ್ರೀರಾಮುಲು ಆಗಲಿ ಅಥವಾ ನಾವು ಆಗಲಿ ಇನ್ನೂ ಬಿಜೆಪಿ ಪಕ್ಷದವರು ಯಾರೇ ಆಗಲಿ ಇಂತಹ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ಹೇಳಲಾಗುವುದಿಲ್ಲ ಹೈಕಮಾಂಡ್ ಏನು ಸೂಚನೆ ನೀಡುತ್ತೋ ಅದರಂತೆ ಕೆಲಸ ಮಾಡಲಾಗುವುದು. ಶ್ರೀ ರಾಮುಲು ಅವರು ಸಿರುಗುಪ್ಪದಲ್ಲಿ ನಿಲ್ಲುತ್ತಾರೆ, ಇನ್ನೊಂದು ಕ್ಷೇತ್ರದಲ್ಲಿ ನಿಲ್ಲುತ್ತಾರೆ ಅನ್ನೋದು ಸುಳ್ಳು ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next