Advertisement

ಬಿಜೆಪಿಯಿಂದ ಸಮುದಾಯ ಗುರುತಿಸುವ ಕೆಲಸವಾಗಿದೆ

10:21 PM Sep 06, 2019 | Lakshmi GovindaRaju |

ದೇವನಹಳ್ಳಿ: ಸಮಾಜದ ಹಿರಿಯ ಮುಖಂಡ ಗೋವಿಂದ ಕಾರಜೋಳರಿಗೆ ಉಪಮುಖ್ಯಮಂತ್ರಿ ಜೊತೆಗೆ ಸಮಾಜ ಕಲ್ಯಾಣ ಮತ್ತು ಲೋಕೋಪಯೋಗಿ ಸಚಿವ ಸ್ಥಾನ ನೀಡಿ, ಸಮುದಾಯ ಗುರುತಿಸಿರುವ ಸಿಎಂ ಯಡಿಯೂರಪ್ಪಗೆ ಸಮುದಾಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ ಎಂದು ಜಿಲ್ಲಾ ಮಾದಿಗ ದಂಡೋರ ಅಧ್ಯಕ್ಷ ಜಿ. ಮಾರಪ್ಪ ತಿಳಿಸಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಮಾದಿಗ ದಂಡೋರ ವತಿಯಿಂದ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬಿಜೆಪಿ ಸರ್ಕಾರ ಇದ್ದಾಗ ನ್ಯಾಯ ಮುರ್ತಿ ಎ.ಜೆ. ಸದಾಶಿವ ಆಯೋಗ ರಚಿಸಿ, ಅನುದಾನ ಬಿಡುಗಡೆಗೊಳಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸದಾಶಿವ ವರದಿಯನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಕೇಂದ್ರಕ್ಕೆ ಕಳುಹಿಸಬೇಕು.

ಬಹಳಷ್ಟು ದಿನಗಳಿಂದ ಸದಾಶಿವ ವರದಿ ಕನಸನ್ನು ಸಮುದಾಯ ಹೊತ್ತಿದೆ. ಸಾಕಷ್ಟು ಹೋರಾಟ ಮಾಡಲಾಗಿದೆ. ಸಮುದಾಯವನ್ನು ಗುರುತಿಸಿ ಇರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಜಗಜೀವನ್‌ ಭವನಗಳು ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರ ಇದ್ದಾಗ ಹೆಚ್ಚಿನ ಅನುಕೂಲವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ರಾಜ್ಯ ಮಾದಿಗ ದಂಡೋರ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಹಿರಿಯ ಮುಖಂಡ ಗೋವಿಂದ ಕಾರಜೋಳರಿಗೆ ಡಿಸಿಎಂ ಪಟ್ಟ ನೀಡಿರುವುದು ಸಂತಸ ತಂದಿದೆ. ಸಮುದಾಯವನ್ನು ಗುರುತಿಸುವ ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ. ಕಾರಜೋಳ, ಸಂಸದ ಎ.ನಾರಾಯಣಸ್ವಾಮಿ, ರಮೇಶ್‌ ಜಿಣಜಿಣಗಿ, ಶಾಸಕಿ ರೂಪಾ ಸೇರಿದಂತೆ ಹಲವರನ್ನು ಕರೆಸಿ ಸಮಾವೇಶ ನಡೆಸಲಾಗುವುದು. ದಿನಾಂಕ ವನ್ನು ನಿಗದಿ ಪಡಿಸಲಾಗುವುದು.

ಕೆಲವರು ಸದಾಶಿವ ವರದಿಯನ್ನು ಅವೈಜ್ಞಾನಿಕ ಎನ್ನುವರು ಅವರಿಗೆ ಜಾತಿ ಯಲ್ಲಿ ಎಷ್ಟು ಜನಸಂಖ್ಯೆಯಲ್ಲಿ ಇದ್ದಾರೆ. ಎಷ್ಟು ಬಡಜನರು ಸರ್ಕಾರಿ ಉದ್ಯೋಗದಲ್ಲಿ ಇದ್ದಾರೆ ಎಂಬುದು ಸೇರಿ ಹೀಗೆ ಹಲವಾರು ಸಮೀಕ್ಷೆಗಳನ್ನು ಮಾಡಿ, ಇಲ್ಲಿಂದಲೇ ಉತ್ತರ ನೀಡುತ್ತೇವೆ. ಕಾಂಗ್ರೆಸ್‌, ಜೆಡಿಎಸ್‌ ಸರಿಯಾದ ರೀತಿಯಲ್ಲಿ ಗುರುತಿಸಿರಲಿಲ್ಲ. ಸರ್ಕಾರ, ಸದಾಶಿವ ವರದಿಯನ್ನು ತಿರಸ್ಕಾರ ಮಾಡಿಕೊಂಡೇ ಬಂದಿದೆ.

Advertisement

ಆದರೆ ಬಿಜೆಪಿ ಸರ್ಕಾರದಲ್ಲಿ ಸದಾಶಿವ ಅನುಷ್ಠಾನವಾಗುವುದು ಎಂಬ ಆಶಾಭಾವನೆ ಇದೆ. 15 ಕೋಟಿ ಖರ್ಚು ಮಾಡಿ ಸದಾಶಿವ ವರದಿ ಮಾಡಿದ್ದಾರೆ ಎಂದು ಹೇಳಿದರು. ತಾಲೂಕು ಪ್ರಧಾನ ಕಾರ್ಯದರ್ಶಿ ಮುನಿರಾಜು, ಮುಖಂಡರಾದ ಎಂ.ಎನ್‌.ರಾಜಣ್ಣ, ಕುಮಾರ್‌, ವೇಣುಗೋಪಾಲ್‌, ಗೋಪಾಲ್‌, ಮಾರಪ್ಪ, ಶ್ರೀನಿವಾಸ್‌, ನರಸಿಂಹ ಮೂರ್ತಿ, ಮುನಿರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next