ಮುಂಬಯಿ: ಪ್ರಸಕ್ತ ವಿತ್ತೀಯ ವರ್ಷದಲ್ಲಿ ದೇಶ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಂಪೆನಿಗಳಲ್ಲಿ ನೇಮಕ ಪ್ರಕ್ರಿಯೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ. 40 ಕಡಿಮೆಯಾಗುವ ಸಾಧ್ಯತೆ ಇದೆ. ಕಳೆದ ವಿತ್ತೀಯ ವರ್ಷದಲ್ಲಿ ಪ್ರಮುಖ ಕಂಪೆನಿಗಳು 2,50,000 ಮಂದಿಯನ್ನು ನೇಮಿಸಿ ಕೊಂಡಿದ್ದವು ಎಂದು ಎಕ್ಸ್‌ಫೆನೋ ಸಂಸ್ಥೆ ಅಧ್ಯಯನದಲ್ಲಿ ತಿಳಿಸಿದೆ.
ಪ್ರಸಕ್ತ ವರ್ಷ 50 ಸಾವಿರದಿಂದ 1 ಲಕ್ಷದ ವರೆಗೆ ಮಾತ್ರ ವಿವಿಧ ಹಂತಗಳಿಗೆ ಸಿಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಸಾಧ್ಯತೆಯನ್ನೂ ಅದರಲ್ಲಿ ಉಲ್ಲೇಖಿಸಲಾಗಿದೆ.
ಪ್ರಸಕ್ತ ವಿತ್ತೀಯ ವರ್ಷದ ಮೊದಲ ತ್ತೈಮಾಸಿಕದಲ್ಲಿ ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಹೊಂದಿರುವ ಒಟ್ಟು ಉದ್ಯೋಗಿ ಗಳ ಪೈಕಿ 21, 838 ಮಂದಿ ಕಡಿಮೆ ಯಾಗಿದ್ದಾರೆ.
ಜಗತ್ತಿನ ಪ್ರಮುಖ ಐಟಿ ಕಂಪೆನಿಗಳಾದ ಆ್ಯಕ್ಸೆಂಚರ್, ಕಾಪ್‌ಜೆಮಿನಿ ಮತ್ತು ಕಾಗ್ನಿಜೆಂಟ್‌ಗಳು ದೇಶದಲ್ಲಿ ಹೊಂದಿರುವ ಉದ್ಯೋಗಿಗಳ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಹೊಸ ಪ್ರಾಜೆಕ್ಟ್ ಗಳು ಸಿಗದೇ ಇರುವದ ರಿಂದಲೂ ಈ ಬದಲಾವಣೆ ಉಂಟಾಗಿದೆ. ಜತೆಗೆ ಕೆಲ ಕಂಪೆನಿ ಗಳು ಕಡಿಮೆ ಲಾಭ ಹೊಂದಿರುವುದರಿಂದಲೂ ನೇಮಕ ಪ್ರಕ್ರಿಯೆಗೆ ತಡೆಯಾಗಿದೆ.