Advertisement

ದುರುಗಮ್ಮನಹಳ್ಳ ಒತ್ತುವರಿ ತೆರವಿಗೆ ಸೂಚನೆ

04:01 PM Jan 30, 2021 | Team Udayavani |

ಗಂಗಾವತಿ: ನಗರದ ಮಧ್ಯೆ ಹರಿದಿರುವ ದುರುಗಮ್ಮನ ಹಳ್ಳದ ಸುತ್ತಲಿನ ಪ್ರದೇಶ ಒತ್ತುವರಿಯಾಗಿದ್ದು, ಅಮೃತ ಸಿಟಿ ಯೋಜನೆ ಕಾಮಗಾರಿಗೆ ಅಡ್ಡಿಯಾಗಿ ಪರಿಣಮಿಸಿದೆ. 2015ರಲ್ಲಿ ಕೇಂದ್ರ ಸರಕಾರ ಗಂಗಾವತಿ ನಗರಕ್ಕೆ ಅಮೃತಸಿಟಿ ಯೋಜನೆಯನ್ನು ಮಂಜೂರಿ ಮಾಡಿದ್ದು, ನಗರದ ರಸ್ತೆ ಹಳ್ಳ ಚರಂಡಿ ಪಾರ್ಕ್‌ ಫುಟ್‌ಪಾತ್‌ ರಸ್ತೆ ಮಾರ್ಕೆಟ್‌ ಗಳ ಅಭಿವೃದ್ಧಿಪಡಿಸಲು ನಗರಸಭೆ ಕ್ರಿಯಾಯೋಜನೆ ರೂಪಿಸಿದೆ.

Advertisement

ದುರುಗಮ್ಮಹಳ್ಳಕ್ಕೆ ಎರಡು ಬದಿಯಲ್ಲಿ ತಡೆಗೋಡೆ, ವಾಹನಗಳ ಪಾರ್ಕಿಂಗ್‌ ಮತ್ತು ಹಳ್ಳದ ಎರಡು ಬದಿಯಲ್ಲಿ ರಸ್ತೆ ನಿರ್ಮಿಸಲು 18 ಕೋಟಿ ರೂ. ಗಳನ್ನು ಅಮೃತಸಿಟಿ ಯೋಜನೆಯಲ್ಲಿ ಮೀಸಲಿರಿಸಲಾಗಿದೆ. ಈಗಾಗಲೇ ಕಾಮಗಾರಿ ಅವ ಧಿ ಮುಗಿಯುತ್ತಾ ಬಂದರೂ ಶಿವೆ ಟಾಕೀಸ್‌ ಮುಂಭಾಗದಲ್ಲಿ ಮಾತ್ರ ಸೈಡ್‌ ವಾಲ್‌ ಪಾರ್ಕಿಂಗ್‌ ನಿರ್ಮಿಸಲಾಗಿದೆ.

ಕೊಪ್ಪಳ ರಸ್ತೆಯ ನಗರಯೋಜನಾ ಪ್ರಾ ಕಾರದ ಕಚೇರಿ ಹಿಂಭಾಗದಿಂದ ಎಸ್‌ಬಿಎಚ್‌ ಬ್ಯಾಂಕ್‌ ವರೆಗೆ ಹಳ್ಳವನ್ನು ಒತ್ತುವರಿ ಮಾಡಿದ ಕಾರಣ ನೀಡಿ ಅಮೃತಸಿಟಿ ಕಾಮಗಾರಿಯನ್ನು ನಿಲುಗಡೆ ಮಾಡಲಾಗಿದ್ದು, ಜಿಲ್ಲಾ  ಧಿಕಾರಿಗಳ ಸೂಚನೆ ಮೇರೆ  ಹಳ್ಳವನ್ನು ಒತ್ತುವರಿ ಮಾಡಿದವರ ವಿರುದ್ಧ ಕ್ರಮ ಕೈಗೊಂಡು ಒತ್ತುವರಿ ಕಟ್ಟಡಗಳನ್ನು ತೆರವು ಮಾಡಲು ಪೌರಾಯುಕ್ತ ಹಾಗೂ ಎಇಇ ನೇತೃತ್ವದಲ್ಲಿ ಹಳ್ಳಗಳನ್ನು ಒತ್ತುವರಿ ಸರ್ವೇ ಮಾಡಲಾಗುತ್ತಿದೆ.

ಅತಿಕ್ರಮ ಒತ್ತುವರಿ: ಶಿವೆ ಟಾಕೀಸ್‌ ಭಾಗದಲ್ಲಿ ಹಳ್ಳವನ್ನು ಒತ್ತುವರಿ ಮಾಡಲಾಗಿಲ್ಲ. ಎಸ್‌ಬಿಎಚ್‌ ಬ್ಯಾಂಕ್‌ನಿಂದ ಸಂದೀಪ್‌ ಟಾಕೀಸ್‌ ವರೆಗೆ  ಹಳ್ಳದ ಎರಡು ಬದಿಯನ್ನು ಖಾಸಗಿ ವ್ಯಕ್ತಿಗಳು ಮತ್ತು ಕೆಲವು ಸಂಘಸಮುದಾಯದವರು ಅತಿಕ್ರಮಣ  ಮಾಡಿಕೊಂಡು ಬೃಹತ್‌ ಕಟ್ಟಡ  ದೇಗುಲಗಳನ್ನು ನಿರ್ಮಿಸಿಕೊಂಡಿದ್ದಾರೆ.

ಇದಕ್ಕೆ ಪೂರಕ ಎನ್ನುವಂತೆ ನಗರಸಭೆಯ ಕೆಲವು ಅ ಧಿಕಾರಿಗಳು ಒತ್ತುವರಿಯಾಗಿರುವ ಹಳ್ಳದ ಜಾಗಕ್ಕೆ ದಾಖಲೆ ಸೃಷ್ಟಿ ಮಾಡಿಕೊಟ್ಟಿದ್ದಾರೆ ಎಂಬ ಮಾತು ಕೇಳಿಬಂದಿದೆ. ಒತ್ತುವರಿ ಜಾಗ ತೆರವಿಗೆ ನಗರಸಭೆಯ ಅ ಧಿಕಾರಿಗಳು ತೆರಳಿದರೆ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಮುಖಂಡರು ಅಧಿಕಾರಿಗಳ ಕಾರ್ಯಕ್ಕೆ ಅಡ್ಡಿಪಡಿಸುತ್ತಾರೆ.

Advertisement

ಇದನ್ನೂ ಓದಿ:ಪುತ್ತೂರು: ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಹೋದ ಮನೆ

ಇದರಿಂದ ನಿತ್ಯವೂ ಹಳ್ಳದ ಒತ್ತುವರಿ ಸಾಗಿದೆ. ಕಳೆದ ವರ್ಷ ಸಮಾನ ಮನಸ್ಕರು ಸಾರ್ವಜನಿಕರು ಮತ್ತು ಶಾಸಕರ ಅನುದಾನದಲ್ಲಿ ಇಡೀ ಹಳ್ಳವನ್ನು ಸ್ವತ್ಛ ಮಾಡಿ ಹೂಳು ತೆಗೆದು ಸ್ವತ್ಛತೆ ಮಾಡಿದ್ದರು. ಹಳ್ಳದಲ್ಲಿ ಉಳಿದ ತರಕಾರಿ ಮಾಂಸ ಆಸ್ಪತ್ರೆಯ ಅನುಪಯುಕ್ತ ವಸ್ತುಗಳನ್ನು ನಿರಂತರವಾಗಿ ಹಾಕುತ್ತಿದ್ದು, ಇದರಿಂದಇಡೀ ಹಳ್ಳ ಮಲೀನವಾಗಿದೆ. ಹಳ್ಳದ ಎರಡು ಬದಿಯ ಚರಂಡಿ ನೀರನ್ನು ನೇರವಾಗಿ ಹಳ್ಳಕ್ಕೆ ಬಿಡಲಾಗುತ್ತಿದೆ. ಶೌಚಾಲಯದ ನೀರನ್ನು ಸಹ ಹಳ್ಳಕ್ಕೆ ಹರಿಸಲಾಗುತ್ತಿದ್ದು, ಇವುಗಳನ್ನು ನಿಯಂತ್ರಿಸಲು ನಗರಸಭೆ ವಿಫಲವಾಗಿದೆ. ಚರಂಡಿ ನೀರನ್ನುಹಳ್ಳಕ್ಕೆ ಹರಿಸದೇ ಪ್ರತೇಕ ಚರಂಡಿಗಳ ಮೂಲಕ ನೀರನ್ನು ಶುದ್ಧೀಕರಿಸಿ ಹಳ್ಳಕ್ಕೆ ಬಿಡಲು ಯೋಜನೆ ಇದ್ದರೂ ಅನುಷ್ಠಾನವಾಗಿಲ್ಲ.

ಮೌಖೀಕ ಸೂಚನೆ: ಅಮೃತಸಿಟಿ ಯೋಜನೆಯಲ್ಲಿ ದುರುಗಮ್ಮನಹಳ್ಳಕ್ಕೆ ವಾಹನ ಪಾರ್ಕಿಂಗ್‌ ಹಾಗೂ ಸಂಚಾರಿ ರಸ್ತೆ ನಿರ್ಮಿಸಬೇಕಾಗಿರುವುದರಿಂದ ಒತ್ತುವರಿ ಮಾಡಿದವರು ಸ್ವಯಂ ತೆರವು ಮಾಡಿಕೊಳ್ಳುವಂತೆ ನಗರಸಭೆ ಅ ಧಿಕಾರಿಗಳು ಮೌಖೀಕ ಸೂಚನೆ ನೀಡಿದ್ದಾರೆ. ಎಸ್‌ಬಿಎಚ್‌ ಬ್ಯಾಂಕಿನ ಮುಂದಿರುವ ನಗರಸಭೆ ಜಾಗದಲ್ಲಿಕೆಲವರು ವಾಣಿಜ್ಯ ಮಳಿಗೆ ನಿರ್ಮಿಸಿಕೊಂಡು ನೆಲಬಾಡಿಗೆ ಪಾವತಿ ಮಾಡುತ್ತಿದ್ದು, ಇವರಿಗೂ ಸಹ ಮಳಿಗೆ ತೆರವು ಮಾಡುವಂತೆ ತಿಳಿಸಲಾಗಿದೆ.\

ಕೆ.ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next