Advertisement

ಬಗರಹುಕುಂ ರೈತರಿಗೆ ಹಕ್ಕು ಪತ್ರ ನೀಡಿ

12:48 PM Feb 05, 2022 | Team Udayavani |

ಚಿಂಚೋಳಿ: ತಾಲೂಕಿನಲ್ಲಿ 20-30 ವರ್ಷಗಳಿಂದ ಬಗರಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಹಕ್ಕು ಪತ್ರ ನೀಡಬೇಕೆಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಮುಖಂಡರು ಶಾಸಕ ಡಾ| ಅವಿನಾಶ ಜಾಧವಗೆ ಮನವಿ ಪತ್ರ ಸಲ್ಲಿಸಿದರು.

Advertisement

ತಾಲೂಕಿನಲ್ಲಿ ಅನೇಕ ವರ್ಷಗಳಿಂದ ರೈತರು ಸರ್ಕಾರಿ ಜಮೀನು ಮತ್ತು ಅರಣ್ಯ ಜಮೀನು ಸಾಗುವಳಿ ಮಾಡುತ್ತಾ ಬರುತ್ತಿದ್ದು, ಅನೇಕ ಕುಟುಂಬಗಳು ಸರ್ಕಾರಿ ಜಮೀನು ಸಾಗುವಳಿ ಮಾಡಿಕೊಂಡು ಉಪಜೀವನ ಸಾಗಿಸುತ್ತಿವೆ. ಅಲ್ಲದೇ ರೈತರು ಫಾರಂ 50,53 ಹಾಗೂ 57 ಅರ್ಜಿಗಳನ್ನು ತುಂಬಿ ಅನೇಕ ವರ್ಷಗಳೇ ಕಳೆದಿವೆ. ಆದರೆ ಅರ್ಜಿಗಳನ್ನು ಪರಿಶೀಲಿಸಿ ರೈತರಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ಕಂದಾಯ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ಬಹುಜನ ಸಮಾಜ ಪಕ್ಷದ ಅಧ್ಯಕ್ಷ ವೈಜನಾಥ ಮಿತ್ರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದರು. ಪಕ್ಷದ ಮುಖಂಡರಾದ ಗೌತಮ ಬೊಮ್ಮನಳ್ಳಿ, ಸುಶೀಲಕುಮಾರ ಬೊಮ್ಮನಳ್ಳಿ, ರಮೇಶ ಮಸಾನಿ, ವೆಂಕಟೇಶ ತಲಾರಿ, ಸೂರ್ಯಕಾಂತ ಬೀರನಳ್ಳಿ, ರಘುವೀರ ಕೊಡಂಬಲ, ಚಂದ್ರಶೇಖರ ಖೈತಾಪುರ, ವೈಜನಾಥ ದೊಡ್ಡಮನಿ, ಸುಭಾಷ, ನರಸಿಂಹಲು, ನಾಗಪ್ಪ ತಳವಾರ, ಶರಣಪ್ಪ ಹಸರಗುಂಡಗಿ, ದಿಲೀಪ ಬೊಮ್ಮನಳ್ಳಿ, ಬಿಚ್ಚಪ್ಪ ತಲಾರಿ, ರಾಮಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next