Advertisement

ಇಸ್ರೋಗೆ ದೈತ್ಯ ಯಶಸ್ಸು; ಜಿಎಸ್ ಎಲ್ ವಿ ಮಾರ್ಕ್ 3 ಯಶಸ್ವಿ ಉಡ್ಡಯನ

05:35 PM Jun 05, 2017 | Team Udayavani |

ಹೈದರಾಬಾದ್: ಉಪಗ್ರಹ ಆಧರಿತ ಮತ್ತು ವೇಗದ ಅಂತರ್ಜಾಲ ಒದಗಿಸುವ ಭಾರತೀಯ ಬಾಹ್ಯಾಕಾಶ ಸಂಸ್ಥೆ ನಿರ್ಮಿಸಿದ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್(ಫ್ಯಾಟ್ ಬಾಯ್ ಉಡಾವಣೆಗೆ ಕ್ಷಣಗಣನೆ) ಉಡ್ಡಯನ ಯಶಸ್ವಿಯಾಗಿದೆ. ಈ ಮೂಲಕ ಇಸ್ರೋ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದಂತಾಗಿದೆ. ರಾಕೆಟ್ ಉಡಾವಣೆ ಸಂದರ್ಭದಲ್ಲಿ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು ಉಪಸ್ಥಿತರಿದ್ದರು.

Advertisement

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಸಂಜೆ 5.28ಕ್ಕೆ ನಭೋಮಂಡಲಕ್ಕೆ ಯಶಸ್ವಿಯಾಗಿ ನೆಗೆದಿದೆ. ದೈತ್ಯ ಸಾಮರ್ಥ್ಯದ ದೇಶದ ಚೊಚ್ಚಲ ರಾಕೆಟ್ ಇದಾಗಿದ್ದರಿಂದ ಇದನ್ನು ಫ್ಯಾಟ್ ಬಾಯ್ ಎಂದು ಕರೆಯಲಾಗುತ್ತಿದೆ.

6 ಟನ್‌ನಷ್ಟು ಭಾರ ಹೊಂದಿರುವ ಈ ರಾಕೆಟ್‌, ಯುರೋಪ್‌ ನಿರ್ಮಾಣದ ಅರಿಯೇನ್‌-6 ರಾಕೆಟ್‌ಗೆ ಹೋಲಿಕೆ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 15 ವರ್ಷಗಳ ಕಾಲ 300 ಕೋಟಿ ರೂಪಾಯಿ ವೆಚ್ಚದಲ್ಲಿ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ನಿರ್ಮಿಸಲಾಗಿದೆ.

ಭಾರತಕ್ಕೇನು ಲಾಭ?
– ಮಾನವ ಸಹಿತ ಸೌಲಭ್ಯದ ಅಥವಾ 4 ಟನ್‌ ಭಾರದ ಉಪಗ್ರಹ ಉಡಾವಣೆ ಸಾಮರ್ಥ್ಯದ ರಾಕೆಟ್‌ ಆಗಿದ್ದರಿಂದ ವಿದೇಶಿ ರಾಕೆಟ್‌ಗಳ ಅವಲಂಬನೆ ತಪ್ಪುತ್ತದೆ
– ಬೇರೆ ದೇಶಗಳಿಗೂ ಉಡಾವಣೆಗೆ ರಾಕೆಟ್‌ ಪೂರೈಕೆ ಸಾಧ್ಯ.
– ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪ್ರತಿಷ್ಠಿತ ರಾಷ್ಟ್ರಗಳ ಸಾಲಿಗೆ ಸೇರಿಕೊಳ್ಳಲಿದೆ.
– ಇನ್ನಷ್ಟು ಸಂಶೋಧನೆಗೆ ದಾರಿ ಮಾಡಿಕೊಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next