Advertisement
ಇಸ್ರೋದ ಅತಿ ಭಾರದ ರಾಕೆಟ್ಎಲ್ವಿಎಂ3 ಅಥವಾ ಲಾಂಚ್ ವೆಹಿಕಲ್ ಮಾರ್ಕ್ 3 ಎನ್ನುವುದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅತ್ಯಂತ ಭಾರದ ರಾಕೆಟ್ ಆಗಿದೆ. ಇದನ್ನು ಈ ಹಿಂದೆ “ಜಿಎಸ್‌ಎಲ್‌ವಿ ಎಂಕೆ 3′ ಎಂದು ಕರೆಯಲಾಗುತ್ತಿತ್ತು.
ಬ್ರಿಟನ್‌ನ ಒನ್‌ವೆಬ್ ಸಂಸ್ಥೆಯ 36 ಬ್ರಾಡ್‌ಬ್ಯಾಂಡ್ ಸಂವಹನಾ ಉಪಗ್ರಹಗಳನ್ನು ಎಲ್‌ವಿಎಂ3 ಮೂಲಕ ಅ.23ರಂದು ಉಡಾವಣೆ ಮಾಡಲಾಗುತ್ತದೆ. ಇದಾದ ಬಳಿಕ 2023ರ ಜನವರಿಯಲ್ಲಿ ಮತ್ತೆ ಇದೇ ಸಂಸ್ಥೆಯ 36 ಸ್ಯಾಟಲೈಟ್‌ಗಳನ್ನು ಎಲ್‌ವಿಎಂ3 ರಾಕೆಟ್ ಕಕ್ಷೆಗೆ ಸೇರಿಸಲಿದೆ. ಹಲವು ಪ್ರಥಮಗಳು
– ಇದು ಇಸ್ರೋದ ಅತಿ ಭಾರದ ಎಲ್‌ವಿಎಂ3 ರಾಕೆಟ್‌ನ ಮೊದಲ ವಾಣಿಜ್ಯಿಕ ಉಡಾವಣೆ
– ಇದೇ ಮೊದಲ ಬಾರಿಗೆ 6 ಟನ್ ತೂಕದ ಪೇಲೋಡ್ ಹೊತ್ತು ಭಾರತದ ರಾಕೆಟ್‌ನ ಪಯಣ
– ತನ್ನ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಮೊದಲ ಬಾರಿಗೆ ಭಾರತದ ರಾಕೆಟ್ ಬಳಸುತ್ತಿರುವ ಒನ್‌ವೆಬ್
– ಭೂಮಿಯ ಕೆಳ ಕಕ್ಷೆ(ಎಲ್‌ಇಒ)ಯಲ್ಲಿ ಉಪಗ್ರಹ ಉಡಾವಣೆಗೆ ಜಿಎಸ್‌ಎಲ್‌ವಿ ಎಂಕೆ 3 ಬಳಕೆ
Related Articles
ಎಲ್ಲಿಂದ ಉಡಾವಣೆ? – ಆಂಧ್ರಪ್ರದೇಶದ ಶ್ರೀಹರಿಕೋಟಾ
ಅ.23ರಂದು ಉಡಾವಣೆಗೊಳ್ಳಲಿರುವ ಉಪಗ್ರಹಗಳು- 36
ಮುಂದಿನ ಜನವರಿಯಲ್ಲಿ ಉಡಾವಣೆಯಾಗುವ ಉಪಗ್ರಹಗಳು- 36
ಒನ್‌ವೆಬ್ ಕಂಪನಿ ಈವರೆಗೆ ಉಡಾವಣೆ ಮಾಡಿರುವ ಒಟ್ಟು ಉಪಗ್ರಹ- 428
Advertisement