ಅಹ್ಮದಾಬಾದ್: ಸೌರಮಂಡಲದಿಂದ ಹೊರಗೆ ಗ್ರಹವೊಂದು ನಕ್ಷತ್ರವನ್ನು ಸುತ್ತುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ)ಯ ಅಹ್ಮದಾಬಾದ್‌ನ ಪ್ರೊ| ಅಭಿಜಿತ್ ಚಕ್ರವರ್ತಿ ನೇತೃತ್ವದ ತಂಡವು ಈ ಗ್ರಹಮಂಡಲವನ್ನು ಪತ್ತೆ ಹಚ್ಚಿದೆ. ಇದಕ್ಕೆ ಯೂರೋಪ್ ಹಾಗೂ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳೂ ಸಾಥ್ ನೀಡಿದ್ದಾರೆ.
“2020ರ ಡಿಸೆಂಬರ್‌ನಿಂದ 2021ರ ಮಾರ್ಚ್‌ವರೆಗೆ ಸಂಶೋಧನೆ ಮಾಡಿ ಈ ಮಂಡಲವನ್ನು ಗುರುತಿಸಲಾಗಿದೆ. ಇದರಲ್ಲಿರುವ ಗ್ರಹವು ನಕ್ಷತ್ರಕ್ಕೆ ಅತೀ ಸಮೀಪದಲ್ಲಿ ಅಂದರೆ ಸೂರ್ಯನಿಂದ ಬುಧನಿಗಿರುವ ಅಂತರದ 10ನೇ ಒಂದು ಭಾಗದಷ್ಟು ದೂರದಲ್ಲಿ ಇದೆ. ಅದೇ ಕಾರಣಕ್ಕೆ ಗ್ರಹವು ಕೇವಲ 3.2 ದಿನಗಳಲ್ಲಿ ನಕ್ಷತ್ರವನ್ನು ಸುತ್ತಿ ಬರುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್ ಯಾವ ಅಭಿವೃದ್ಧಿಯನ್ನೂ ಮಾಡಿಲ್ಲ: ಜೆಪಿ ನಡ್ಡಾ
ಈ ಗ್ರಹವು ಗುರು ಗ್ರಹದ ಶೇ. 70ರಷ್ಟು ತೂಕ ಹೊಂದಿದೆ. ಹಾಗೆಯೇ ಇದರ ತ್ರಿಜ್ಯವು ಗುರು ಗ್ರಹಕ್ಕಿಂತ 1.4 ಪಟ್ಟು ಹೆಚ್ಚಿದೆ. ಇದು ಭೂಮಿಯಿಂದ 725 ಜ್ಯೋರ್ತಿವರ್ಷ ದೂರವಿದೆ’ ಎಂದು ವಿಜ್ಞಾನಿಗಳು ತಿಳಿಸಿ ದ್ದಾರೆ. ಅಲ್ಲದೆ ಇದು ನಮ್ಮ ಸೂರ್ಯ ನಿಗಿಂತ 1.5 ಪಟ್ಟು ಹೆಚ್ಚು ದೊಡ್ಡದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಹಾಟ್ ಜುಪಿಟರ್: ಈ ರೀತಿಯಲ್ಲಿ ನಕ್ಷತ್ರಕ್ಕೆ ತೀರಾ ಹತ್ತಿರವಾಗಿ ಸುತ್ತುವ ಸುಮಾರು 10 ಗ್ರಹಗಳು ಈಗಾಗಲೇ ಪತ್ತೆಯಾಗಿವೆ. ನಕ್ಷತ್ರಕ್ಕೆ ಸನಿಹದಲ್ಲಿರುವುದರಿಂದಾಗಿ ಈ ಗ್ರಹದಲ್ಲಿ 2000ಕೆ ಉಷ್ಣಾಂಶ ಇರುವುದಾಗಿ ಅಂದಾಜಿಸಲಾಗಿದೆ. ಈ ರೀತಿ ನಕ್ಷತ್ರಕ್ಕೆ ತುಂಬಾ ಹತ್ತಿರವಾಗಿ ಸುತ್ತುವ ಗ್ರಹಗಳಿಗೆ “ಹಾಟ್ ಜುಪಿಟರ್’ ಎಂದು ಕರೆಯಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.