Advertisement

ಲೆವೆಲ್‌ ಕ್ರಾಸಿಂಗ್‌ನಲ್ಲಿ ಇಸ್ರೋ ಎಚ್ಚರಿಕೆ ವ್ಯವಸ್ಥೆ

03:45 AM Jun 26, 2017 | Team Udayavani |

ಹೊಸದಿಲ್ಲಿ: ಮಾನವ ರಹಿತ ರೈಲ್ವೇ ಲೆವೆಲ್‌ಕ್ರಾಸಿಂಗ್‌ಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಇದೀಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮುಂದಾಗಿದೆ. 

Advertisement

ಈ ನಿಟ್ಟಿನಲ್ಲಿ ರೈಲ್ವೆ ಹಳಿ ದಾಟುವವರನ್ನು ಎಚ್ಚರಿಸಲು ಅದು ಹೊಸ ಮಾದರಿಯ ವ್ಯವಸ್ಥೆಯೊಂದನ್ನು ತಂದಿದೆ. ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಮುಂಬೈ ಮತ್ತು ಗುವಾಹಟಿ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಅಳವಡಿಸಲಾಗುತ್ತಿದೆ. ಮುನ್ನೆಚ್ಚರಿಕೆ ವ್ಯವಸ್ಥೆಯ ಈ ಸಾಧನಗಳಲ್ಲಿ ಇಸ್ರೋ ಅಭಿವೃದ್ಧಿಪಡಿಸಿದ ಇಂಟೆಗ್ರೇಟೆಡ್‌ ಚಿಪ್‌ಗ್ಳಿದ್ದು, ಅವುಗಳನ್ನು ರೈಲಿ® ‌ಎಂಜಿನ್‌ ಭಾಗದಲ್ಲಿ ಅಳವಡಿಸಲಾಗುತ್ತದೆ.

ರೈಲು ಲೆವೆಲ್‌ ಕ್ರಾಸಿಂಗ್‌ಗೆ ಬರುತ್ತಿದ್ದಂತೆಯೇ 500 ಮೀ. ಮೊದಲು, ಅಲ್ಲಿ ಅಳವಡಿಸಿರುವ ಸೈರನ್‌ ಮೊಳಗುವಂತೆ ಮಾಡುತ್ತದೆ. ಇದರಿಂದಾಗಿ ರೈಲು ಬರುವುದು ಮುಂಚಿತವಾಗಿಯೇ ತಿಳಿಯುತ್ತದೆ. ಸದ್ಯ ಪ್ರಾಯೋಗಿಕ ಮಾರ್ಗದಲ್ಲಿ 20 ಕಡೆ ಸೈರನ್‌ ಅಳವಡಿಸಲಾಗಿದೆ. ರೈಲು ಹತ್ತಿರ ಬರುತ್ತಿದ್ದಂತೆಯೇ ಶಬ್ದ ಜೋರಾಗುತ್ತಾ ಹೋಗುತ್ತದೆ. ಈ ವ್ಯವಸ್ಥೆ ಉಪಗ್ರಹ ಆಧಾರಿತವಾಗಿದ್ದು, ರೈಲು ಚಾಲಕನಿಗೂ ಎಚ್ಚರಿಕೆ ರವಾನಿಸುತ್ತದೆ. ದೇಶಾದ್ಯಂತ 10 ಸಾವಿರ ಲೆವೆಲ್‌ ಕ್ರಾಸಿಂಗ್‌ಗಳಿದ್ದು, ಶೇ.40ರಷ್ಟು ರೈಲು ಅಪಘಾತಗಳು ಇಲ್ಲೇ ಸಂಭವಿಸುತ್ತವೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next