ಬಾಹ್ಯಾಕಾಶ ವೀಕ್ಷಕ ಉಪಗ್ರಹ ಇದು. ಪಿಎಸ್‌ಎಲ್‌ವಿ ರಾಕೆಟ್ ಈ ನೌಕೆಯನ್ನು ಬಾಹ್ಯಾಕಾಶಕ್ಕೆ ಹೊತ್ತೂಯ್ಯಲಿದೆ. ನಮ್ಮ ಸೌರವ್ಯೂಹದ ಕೇಂದ್ರವಾದ ನಕ್ಷತ್ರ ಸೂರ್ಯನ ಅಧ್ಯಯನ ನಡೆಸಿ ವಿಶೇಷ ಮಾಹಿತಿಗಳನ್ನು ಆದಿತ್ಯ ಒದಗಿಸಲಿದೆ. ಸೌರ ಚಟುವಟಿಕೆಗಳ ವಿವರಗಳನ್ನು ಅರಿಯುವುದು, ಬಾಹ್ಯಾಕಾಶ ಹಾಗೂ ಭೂಮಿಯ ವಾತಾವರಣದ ಮೇಲೆ ಸೌರ ಚಟುವಟಿಕೆಗಳ ಪ್ರಭಾವವನ್ನು ತಿಳಿಯುವುದು ಮೂಲ ಉದ್ದೇಶ.
Advertisement
ಭೂಮಿಯಿಂದ ಸುಮಾರು 15 ಲಕ್ಷ ಕಿ.ಮೀ. ದೂರದಲ್ಲಿ ಆದಿತ್ಯ -ಎಲ್1 ನೌಕೆಯನ್ನು ಸ್ಥಾಪಿಸಲಾಗುತ್ತದೆ. ಈ ಸ್ಥಾನದಲ್ಲಿ ಭೂಮಿ ಮತ್ತು ಸೂರ್ಯ- ಎರಡರ ಗುರುತ್ವಾಕರ್ಷಣೆಯ ಸೆಳೆತ ಸಮಾನವಾಗಿದ್ದು, ನೌಕೆ ಸ್ಥಿರವಾಗಿರಲು ಸಾಧ್ಯ. ಇಂಥ ಸ್ಥಾನಗಳಿಗೆ ಲ್ಯಾಗ್‌ರೇಂಜ್ ಪಾಯಿಂಟ್ (ಎಲ್1) ಎಂದು ಹೆಸರು. ಇದರಿಂದ ನೌಕೆಗೆ ಸೂರ್ಯನ ಮೇಲೆ ಸತತ ಕಣ್ಣಿಡಲು ಸಾಧ್ಯವಾಗಲಿದೆ.ಈ ನೌಕೆಯಲ್ಲಿ 7 ಪೇಲೋಡ್‌ಗಳಿರುತ್ತವೆ. ಎಲ್ಲವೂ ಸೂರ್ಯನ ಫೊಟೊಸ್ಪಿಯರ್, ಕ್ರೊಮೊಸ್ಪಿಯರ್ ಮತ್ತು ಕರೊನಾವನ್ನು ಅಧ್ಯಯನ ಮಾಡಲಿವೆ. ಎಲೆಕ್ಟ್ರೊ ಮ್ಯಾಗ್ನೆಟಿಕ್, ಪಾರ್ಟಿಕಲ್, ಮ್ಯಾಗ್ನೆಟಿಕ್ ಫೀಲ್ಡ್ ಡಿಟೆಕ್ಟರ್‌ಗಳನ್ನು ಬಳಸಿ ಅಧ್ಯಯನ ನಡೆಸಲಾಗುತ್ತದೆ.
ಇದರೊಂದಿಗೆ ಸೂರ್ಯನ ಅಧ್ಯಯನಕ್ಕೆ ಬಾಹ್ಯಾಕಾಶ ನೌಕೆಗಳನ್ನು ಕಳುಹಿಸಿರುವ ಜಗತ್ತಿನ ಕೆಲವೇ ದೇಶಗಳ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ. ಜಪಾನ್ ಸಖ್ಯದಲ್ಲಿ ಚಂದ್ರಯಾನ-4
ಇಸ್ರೋ 2024-25ನೇ ಸಾಲಿನಲ್ಲಿ ಜಪಾನ್‌ನ ಬಾಹ್ಯಾಕಾಶ ಸಂಸ್ಥೆ, ಜಕ್ಸಾ ಜತೆಗೆ ಚಂದ್ರಯಾನ-4ನ್ನು ಕೈಗೆತ್ತಿಕೊಳ್ಳಲು ಮುಂದಾಗಿದೆ. ಇದಕ್ಕೆ ಲ್ಯೂಪೆಕ್ಸ್ ಎಂದು ಹೆಸರಿಸಲಾಗಿದೆ. ಚಂದ್ರನ ಧ್ರುವ ಭಾಗದಲ್ಲಿ ಇರುವ ನೀರಿನ ಅಂಶವನ್ನು ಬಳಕೆ ಮಾಡಲು ಸಾಧ್ಯವೇ ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸಲಾಗುತ್ತದೆ. ಈಗ ಬಳಸಿದ್ದಕ್ಕಿಂತ ಸುಧಾರಿತ ತಂತ್ರಜ್ಞಾನ ಬಳಕೆ ಮಾಡಲು ಈ ಎರಡು ಬಾಹ್ಯಾಕಾಶ ಸಂಸ್ಥೆಗಳು ಮುಂದಾಗಿವೆ. ಅಲ್ಲಿ ಗಣಿಗಾರಿಕೆ ನಡೆಸುವ ನಿಟ್ಟಿನಲ್ಲಿ ಚಂದ್ರನ ಮೇಲ್ಮೆ„ಯನ್ನು ಅಗೆಯುವ ಸಾಮರ್ಥ್ಯ ಇರುವ ಸಲಕರಣೆಗಳ ಸೇರ್ಪಡೆಗೆ ಚಿಂತನೆ ನಡೆಸಲಾಗುತ್ತಿದೆ.
Related Articles
ಚಂದ್ರನ ದಕ್ಷಿಣ ಪಥದಲ್ಲಿ ಇಳಿದ ಮಾರನೇ ದಿನ, ಗುರುವಾರ ರೋವರ್ ಯಶಸ್ವಿಯಾಗಿ ಒಂದು ಹಂತದ ಸುತ್ತಾಟ ನಡೆಸಿದೆ. ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದೆ. ರೋವರ್ 500 ಮೀಟರ್ ವರೆಗೆ ಪ್ರಯಾಣ ಮಾಡುವ ಸಾಮರ್ಥ್ಯ ಹೊಂದಿದೆ. ಒಂದು ಚಂದ್ರನ ದಿನ ಅಂದರೆ 14 ದಿನಗಳ ವರೆಗೆ ಅದು ಕೆಲಸ ಮಾಡಲಿದೆ.
Advertisement
ವೈಜ್ಞಾನಿಕ ಸಂಶೋಧನೆಗೆ ಅವಕಾಶಚಂದ್ರನ ದಕ್ಷಿಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಜ್ಞಾನಿಕ ಸಂಶೋಧನೆಗೆ ಅವಕಾಶಗಳು ಇವೆ. ಹೀಗಾಗಿ ಅಲ್ಲಿಗೆ ತೆರಳುವ ಆಯ್ಕೆ ಮಾಡಲಾಯಿತು. ಅಲ್ಲಿ ನೀರು ಮತ್ತು ಖನಿಜಗಳು ಇವೆಯೇ ಎಂಬ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಲು ಇದರಿಂದ ಅನುಕೂಲವಾಗಲಿದೆ. ಮುಂದಿನ 14 ದಿನಗಳ ಕಾಲ ರೋವರ್ ಸಂಶೋಧನೆ ನಡೆಸಲಿದೆ. ಇದು ನಮ್ಮ ಪ್ರಯೋಗಕ್ಕೆ ನೆರವಾಗಲಿದೆ ಎಂದು ಎಸ್. ಸೋಮನಾಥ್ ಹೇಳಿದರು. ಎಲ್ಲವೂ ಸಕ್ರಿಯ
ಲ್ಯಾಂಡರ್‌ನಲ್ಲಿ ಇರುವ ಐಎಲ್‌ಎಸ್‌ಎ, ರಂಭಾ (ಆರ್‌ಎಎಂಬಿಎಚ್‌ಎ), ಚೇಸ್ಟ್ (ಸಿಎಚ್‌ಎಎಸ್‌ಟಿಇ) ಪೇಲೋಡ್‌ಗಳನ್ನು ಗುರುವಾರ ಆನ್ ಮಾಡಲಾಗಿದೆ. ರೋವರ್ ಸಂಚರಿಸಲು ಆರಂಭಿಸಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.