ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೇ 26ರಂದು ಶ್ರೀಹರಿಕೋಟಾದಿಂದ ಓಷಿಯನ್‌ಸ್ಯಾಟ್-3 ಮೂಲಕ ಪಿಎಸ್‌ಎಲ್‌ವಿ-ಸಿ54/ ಇಒಎಸ್-06 ಮತ್ತು 8 ನ್ಯಾನೋ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ.
Advertisement
ನ.26ರ ಶನಿವಾರ ಬೆಳಗ್ಗೆ 11.56ಕ್ಕೆ ಸರಿಯಾಗಿ ಈ ಎಲ್ಲ ಉಪಗ್ರಹಗಳನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಲಿದೆ.
ಓಷಿಯನ್‌ಸ್ಯಾಟ್-3 ಮಾತ್ರವಲ್ಲದೇ 8 ನ್ಯಾನೋ ಉಪಗ್ರಹಗಳು (ಭೂತಾನ್‌ನ ಭೂತಾನ್‌ಸ್ಯಾಟ್, ಪಿಕ್ಸೆಲ್‌ನ ಆನಂದ್, ಧ್ರುವ ಸ್ಪೇಸ್‌ನ 2 ಥೈಬೋಲ್ಟ್ ಉಪಗ್ರಹಗಳು ಮತ್ತು ಸ್ಪೇಸ್‌ಫ್ಲೈಟ್ ಯುಎಸ್‌ಎಯ 4 ಸ್ಯಾಟಲೈಟ್‌ಗಳು) ಕೂಡ ಕಕ್ಷೆಯತ್ತ ಪ್ರಯಾಣ ಬೆಳೆಸಲಿವೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.