ಬೆಂಗಳೂರು : ಮುಂದಿನ ತಿಂಗಳು ಜುಲೈ 15ರಂದು ನಸುಕಿನ 2.15ರ ವೇಳೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಚಂದ್ರಯಾನ -2 ಅಭಿಯಾನವನ್ನು ಆರಂಭಿಸಲಿದೆ.
ಚಂದ್ರಯಾನ -2 ಅಭಿಯಾನ ದ ದಿನಾಂಕವನ್ನು ಇಂದು ಪ್ರಕಟಿಸಿದ ಇಸ್ರೋ ಅಧ್ಯಕ್ಷ ಡಾ.ಕೆ ಶಿವನ್ ಅವರು “ನಾವು ಸೆ.6 ಅಥವಾ ಸೆ.7ರಂದು, ಅಂದರೆ ಚಾಂದ್ರಮಾನ ದಿನ ಆರಂಭವಾಗುವ ಸಂದರ್ಭದಲ್ಲಿ, ಚಂದ್ರನಲ್ಲಿ ಇಳಿಯಲಿದ್ದೇವೆ. ಒಂದು ಪೂರ್ತಿ ಚಾಂದ್ರಮಾನ ದಿನ ಲ್ಯಾಂಡರ್ ಮತ್ತು ರೋವರ್ ಕಾರ್ಯಾಚರಣೆ ಕೈಗೊಳ್ಳಲಿದೆ ಮತ್ತು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಿದೆ’ ಎಂದು ಹೇಳಿದರು.
ಚಂದ್ರಯಾನ 2 ಅಭಿಯಾನದ ಖರ್ಚು, ಮುಖ್ಯವಾಗಿ ಸ್ಯಾಟಲೈಟ್ ಭಾಗ, ವಿದೇಶಿ ಸಂಸ್ಥೆಗಳ ಬೆಂಬಲ ಮತ್ತು ಪರ್ಯಟನೆ ಉದ್ದೇಶ ಸೇರಿದಂತೆ, ಒಟ್ಟು 603 ಕೋಟಿ ರೂ. ಆಗಲಿದೆ ಎಂದು ಡಾ. ಶಿವನ್ ತಿಳಿಸಿದರು.
ಇದೇ ವೇಳೆ ಇಸ್ರೋ ಬೆಂಗಳೂರಿನಲ್ಲಿನ ಚಂದ್ರಯಾನ 2ರ ಲ್ಯಾಂಡರ್ ಮತ್ತು ಆರ್ಬಿಟರ್, ಅದರ ಸ್ಯಾಟೈಲೆಟ್ ಇಂಟಿಗ್ರೇಶನ್ ಮತ್ತು ಪರೀಕ್ಷಾ ವ್ಯವಸ್ತೆಗಳ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಿತು.