ಶ್ರೀಹರಿಕೋಟಾ: ಕೋವಿಡ್-19 ಸಾಂಕ್ರಾಮಿಕ ಆರಂಭವಾದ ನಂತರದಿಂದ ಇದೇ ಮೊದಲ ಬಾರಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಪಗ್ರಹ ಉಡಾವಣೆ ಮಾಡಿದೆ.
ಆಂಧ್ರದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಭೂ-ವೀಕ್ಷಣೆ ಉಪಗ್ರಹ EOS-01 ಹಾಗೂ ಇನ್ನಿತರೆ 9 ವಿದೇಶಿ ಉಪಗ್ರಹಗಳನ್ನು ನಭಕ್ಕೆ ಹೊತ್ತು ಸಾಗಿದ ಪಿಎಸ್‌ಎಲ್‌ವಿ ರಾಕೆಟ್ ಯಶಸ್ವಿಯಾಗಿ ಎಲ್ಲ 10 ಉಪಗ್ರಹಗಳನ್ನೂ ಕಕ್ಷೆಗೆ ಸೇರಿಸಿದೆ.
EOS-01 ಉಪಗ್ರಹವು ಭಾರತದ ಕೃಷಿ, ಅರಣ್ಯ ಹಾಗೂ ವಿಪತ್ತು ನಿರ್ವಹಣೆಯ ಕ್ಷೇತ್ರಕ್ಕೆ ಸಹಾಯ ಮಾಡಲಿರುವುದು ವಿಶೇಷ. ಇನ್ನು ಇದೇ ವೇಳೆಯಲ್ಲೇ ಅಮೆರಿಕ, ಲಿಥುವೇನಿಯಾ ಮತ್ತು ಲುಕ್ಸೆಂಬರ್ಗ್‌ನ 9 ಗ್ರಾಹಕ ಉಪಗ್ರಹಗಳನ್ನೂ ಯಶಸ್ವಿಯಾಗಿ ನಿರ್ದಿಷ್ಟ ಕಕ್ಷೆಗಳಿಗೆ ಸೇರಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.
ಇದನ್ನೂ ಓದಿ:ಬಿಹಾರದಲ್ಲಿ ಮಹಾಘಟಬಂಧನ್ ಗೆ ‘ಜೈ’ ಎಂದ ಜನತೆ ?: ಚುನಾವಣೋತ್ತರ ಸಮೀಕ್ಷೆ ಪ್ರಕಟ
1999ರಿಂದ ಭಾರತ 319 ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ನಭಕ್ಕೆ ಸೇರಿಸಿದೆ. ಕಳೆದ ಐದು ವರ್ಷಗಳಲ್ಲೇ ಇಸ್ರೋ 26 ರಾಷ್ಟ್ರಗಳ ಉಪಗ್ರಹಗಳನ್ನು ಉಡಾವಣೆ ಮಾಡಿ 1,245 ಕೋಟಿ ಆದಾಯ ಗಳಿಸಿದೆ.