Advertisement

3 ಉಪಗ್ರಹಗಳನ್ನು ಹೊತ್ತ ಇಸ್ರೋ ಹೊಸ ರಾಕೆಟ್ ಯಶಸ್ವಿ ಉಡಾವಣೆ; ವಿಡಿಯೋ ನೋಡಿ

09:57 AM Feb 10, 2023 | Team Udayavani |

ಶ್ರೀಹರಿಕೋಟ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶುಕ್ರವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನದ (ಎಸ್‌ಎಸ್‌ಎಲ್‌ವಿ) ಎರಡನೇ ಆವೃತ್ತಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.

Advertisement

ಎಸ್ಎಸ್ಎಲ್ ವಿ-ಡಿ2 ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 9:18 ಕ್ಕೆ ಮೂರು ಉಪಗ್ರಹಗಳೊಂದಿಗೆ ಆಕಾಶಕ್ಕೆ ಹಾರಿತು, ಇದರಲ್ಲಿ ಭಾರತದಾದ್ಯಂತ 750 ವಿದ್ಯಾರ್ಥಿನಿಯರು ಅಭಿವೃದ್ಧಿಪಡಿಸಿದ ಉಪಗ್ರಹವೂ ಸೇರಿದೆ.

ಇದನ್ನೂ ಓದಿ:ಜಡೇಜಾಗೆ ಸಿರಾಜ್ ನೀಡಿದ್ದೇನು?ವೈರಲ್ ವಿಡಿಯೋದಲ್ಲಿ ಇರುವುದೇನು? ಸ್ಪಷ್ಟನೆ ಕೊಟ್ಟ ಟೀಂಇಂಡಿಯಾ

ಮೂರು ಉಪಗ್ರಹಗಳೆಂದರೆ ಇಸ್ರೋದ ಇಒಎಸ್-07, ಯುಎಸ್ ಮೂಲದ ಸಂಸ್ಥೆ ಅಂಟಾರಿಸ್ ಜಾನಸ್-1 ಮತ್ತು ಚೆನ್ನೈ ಮೂಲದ ಸ್ಪೇಸ್ ಸ್ಟಾರ್ಟ್ ಅಪ್ ಸ್ಪೇಸ್ ಕಿಡ್ಸ್ ನ ಆಜಾದಿ ಸ್ಯಾಟ್ -2.

ಕಳೆದ ಆಗಸ್ಟ್ 9 ರಂದು ಎಸ್ಎಸ್ಎಲ್ ವಿ ಯ ಮೊದಲ ಪರೀಕ್ಷಾರ್ಥ ಹಾರಾಟ ನಡೆಸಲಾಗಿತ್ತು. ಆದರೆ ಅದು ಭಾಗಶಃ ವಿಫಲವಾಗಿತ್ತು. ರಾಕೆಟ್ ಅದರ ಉಪಗ್ರಹ ಪೇಲೋಡ್ ಅನ್ನು ಅವುಗಳ ಉದ್ದೇಶಿತ ಕಕ್ಷೆಯಲ್ಲಿ ಸೇರಿಸಲು ವಿಫಲವಾಗಿತ್ತು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next