ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ತನ್ನ ಪಿಎಸ್‌ಎಲ್‌ವಿ-ಸಿ55 ರಾಕೆಟ್ ಮೂಲಕ ಸಿಂಗಾಪುರದ 2 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
ಇಸ್ರೋದ ವಾಣಿಜ್ಯ ವಿಭಾಗದ ನ್ಯೂಸ್ಪೇಸ್ ಇಂಡಿಯಾ ಲಿ. ಮೂಲಕ ಈ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳಿಸಲಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶನಿವಾರ ಪಿಎಸ್‌ಎಲ್‌ವಿ ಮೂಲಕ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇದು ಪಿಎಸ್‌ಎಲ್‌ವಿಯ 57ನೇ ಉಡಾವಣೆಯಾಗಿದ್ದು, ಮತ್ತೂಮ್ಮೆ ತನ್ನ ವಿಶ್ವಾಸಾರ್ಹತೆ ಸಾಬೀತು ಪಡಿಸಿದೆ ಎಂದು ಇಸ್ರೋ ಮುಖ್ಯಸ್ಥರಾದ ಎಸ್.ಸೋಮನಾಥ್ ತಿಳಿಸಿದ್ದಾರೆ.
ಇನ್ನು ಪಿಎಸ್‌ಎಲ್‌ವಿ ಕೊಂಡೊಯ್ದ 2 ಉಪಗ್ರಹಗಳ ಪೈಕಿ ಒಂದನ್ನು ಭೂವೀಕ್ಷಣೆಗೆ ಹಾಗೂ ಮತ್ತೂಂದನ್ನು ತಂತ್ರಜ್ಞಾನ ಪ್ರಾತ್ಯಕ್ಷಿಕೆ ಒದಗಿಸಲೆಂದು ಅಭಿವೃದ್ಧಿಪಡಿಸಲಾಗಿದೆ. ಕಾರ್ಯಾಚರಣೆಯು ಇಸ್ರೋದ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿದಿದ್ದು, ಮುಂಬ ರಲಿರುವ ಚಂದ್ರಯಾನ-3 ಹಾಗೂ ಸೌರ ಮಿಷನ್ ಆದಿತ್ಯ ಎಲ್-1 ಕಾರ್ಯಾಚರಣೆಗಳಿಗೂ ಸಹಕಾರಿಯಾಗಲಿದೆ.