Advertisement

ಮಾರ್ಚ್‌ನಲ್ಲಿ ಸಾರ್ಕ್‌ ಉಪಗ್ರಹ, ಎಪ್ರಿಲ್‌ನಲ್ಲಿ GSAT-19: ಇಸ್ರೋ

03:18 PM Feb 15, 2017 | Team Udayavani |

ಶ್ರೀಹರಿಕೋಟ, ಆಂಧ್ರ ಪ್ರದೇಶ : ಈ ವರ್ಷ ಮಾರ್ಚ್‌ ಮತ್ತು ಎಪ್ರಿಲ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಎರಡು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲು ಉದ್ದೇಶಿಸಿದೆ. ಇವುಗಳಲ್ಲಿ ಒಂದು ಸಾರ್ಕ್‌ ಸದಸ್ಯ ರಾಷ್ಟ್ರಗಳ ಉಪಯೋಗಕ್ಕೆ ಮೀಸಲಿರುತ್ತದೆ ಎಂದು ಇಸ್ರೋ ಅಧ್ಯಕ್ಷ ಎ ಎಸ್‌ ಕಿರಣ್‌ ಕುಮಾರ್‌ ಇಂದಿಲ್ಲಿ ಪತ್ರಕರ್ತರಿಗೆ ತಿಳಿಸಿದರು.

Advertisement

ಜಿಎಸ್‌ಎಲ್‌ವಿ ಮಾರ್ಕ್‌ 2 ಸಾರ್ಕ್‌ ಉಪಗ್ರಹವನ್ನು ಒಯ್ಯಲಿದೆ; ಜಿಎಸ್‌ಎಲ್‌ವಿ ಮಾರ್ಕ್‌ 3 ಜಿಸ್ಯಾಟ್‌-19 ಉಪಗ್ರಹವನ್ನು ಒಯ್ಯಲಿದೆ ಎಂದವರು ಹೇಳಿದರು. 

2014ರ ನವೆಂಬರ್‌ನಲ್ಲಿ ನವೆಂಬರ್‌ನಲ್ಲಿ ನೇಪಾಲದಲ್ಲಿ ನಡೆದಿದ್ದ ಸಾರ್ಕ್‌ ಸಮ್ಮೇಳನದಲ್ಲಿ ಭಾರತವು ಸಾರ್ಕ್‌ ಸದಸ್ಯ ರಾಷ್ಟ್ರಗಳ ಉಪಯೋಗಕ್ಕಾಗಿ ಸಾರ್ಕ್‌ ಉಪಗ್ರಹವನ್ನು ಕಕ್ಷೆಗೆ ಕಳುಹಿಸುವ ಯೋಜನೆ ಹೊಂದಿರುವುದಾಗಿ ಪ್ರಕಟಿಸಿದ್ದರು. 

ಪಾಕಿಸ್ಥಾನವು ಈಗ ಈ ಯೋಜನೆಯಿಂದ ಹೊರಗುಳಿದಿರವುದರಿಂದ ಸಾರ್ಕ್‌ ಉಪಗ್ರಹಕ್ಕೆ ದಕ್ಷಿಣ ಏಶ್ಯ ಉಪಗ್ರಹವೆಂದು ಕರೆಯಲಾಗುತ್ತಿದೆ. 

ಪಿಎಸ್ ಎಲ್ ವಿ-ಸಿ37 ಉಪಗ್ರಹ ವಾಹಕದ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬುಧವಾರ ಬೆಳಗ್ಗೆ ಏಕಕಾಲಕ್ಕೆ ಅಮೆರಿಕದ 96, ಭಾರತದ 4 ಸೇರಿದಂತೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next