Advertisement

ಡೆಂಘೀ, ಮಲೇರಿಯಾ ತಡೆಗೆ ಇಸ್ರೋ ಯಂತ್ರ

11:55 AM Nov 06, 2017 | Team Udayavani |

ಬೆಂಗಳೂರು: ಡೆಂಘೀ, ಮಲೇರಿಯಾ ಮೊದಲಾದ ಮಾರಕ ರೋಗಗಳ ನಿಯಂತ್ರಣ ಹಾಗೂ ತಡೆಗಟ್ಟಬಹುದಾದ ವಿನೂತನ ಯಂತ್ರವನ್ನು ಇಸ್ರೋ ಅಭಿವೃದ್ಧಿಪಡಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಹೇಳಿದ್ದಾರೆ.

Advertisement

ಬಸವನಗುಡಿಯ ನ್ಯಾಷನಲ್‌ ಕಾಲೇಜಿನ ಆರನೇ ಘಟಿಕೋತ್ಸವದಲ್ಲಿ  ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ಅವರು, ದೂರ ಸಂವೇದಿ ಉಪಗ್ರಹ, ಜಾಗತಿಕ ನ್ಯಾವಿಗೇಶನ್‌ ಉಪಗ್ರಹ ವ್ಯವಸ್ಥೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಆಧಾರದಲ್ಲಿ  ಡೆಂಘೀ, ಮಲೇರಿಯಾ ಮೊದಲಾದ ಮಾರಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಯಂತ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.

ಪರಿಸರದ ಬದಲಾವಣೆ, ಸಮುದ್ರದಲ್ಲಿ ಆತಂಕದ ಮುನ್ಸೂಚನೆ ನೀಡುವ ತಂತ್ರಜ್ಞಾನದ ಅಭಿವೃದ್ಧಿ ಕೆಲಸವೂ ನಡೆಯುತ್ತಿದೆ. ಇದರಿಂದ ಸೂಕ್ಷ್ಮ ಜೀವಿಗಳಿಂದ ಹರಡುವ ಮಾರಕ ರೋಗಗಳು ಬರದಂತೆ ತಡೆಯಬಹುದು. ಈ ವಿಧಾನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದು ಎಂದು ಹೇಳಿದರು.

ಬೃಹತ್‌ ಉಡಾವಣಾ ನೌಕೆಗಳು, ಪುನರ್ಬಳಕೆಯ ಉಡಾವಣಾ ವಾಹನಗಳು, ಕ್ರೆಯೋಜೆನಿಕ್‌ ಎಂಜಿನ್‌ಗಳು, ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಯಾನ, ಅಂತರಿಕ್ಷ ಅನ್ವಯಗಳಿಗಾಗಿ ವಿವಿಧ ವಸ್ತುಗಳ ಅಭಿವೃದ್ಧಿ ಮತ್ತು ಬಳಕೆ ವಲಯಗಳಲ್ಲಿ ಅಭಿವೃದ್ಧಿ ಸಾಧಿಸಲು ಇಸ್ರೊ ಕಾರ್ಯೋನ್ಮುಖವಾಗಿದೆ ಎಂದರು.

11 ವಿದ್ಯಾರ್ಥಿಗಳಿಗೆ ಚಿನ್ನದ ಪದಕ
2011-12ರಿಂದ 2013-14ನೇ ಸಾಲಿನ ಅವಧಿಯಲ್ಲಿ ತೇರ್ಗಡೆಯಾದ 1,240ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ಮತ್ತು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ಸುಗುಣಾ, ಎಚ್‌.ಆರ್‌.ದಕ್ಷಿಣಾಮೂರ್ತಿ, ಸಿ.ಮಧುಸೂದನ, ಆರ್‌.ರೇಖಾ, ಬಿ.ವಂದನಾ, ಐಶ್ವರ್ಯ ವಿ.ಪಂಡಿತ್‌, ಎಸ್‌.ಸಂಜಯ್‌, ದಿಲೀಪ್‌ಕುಮಾರ್‌, ಆರ್‌.ರಕ್ಷಂದ, ಕೆ.ನಿಖೀತಾ ಮತ್ತು ಎ.ಪವಿತ್ರಾ ಅವರಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next