Advertisement
ಇಸ್ರೋದ ಪಿಎಸ್ಎಲ್ವಿ ರಾಕೆಟ್ ಮೂಲಕ ಸೋಮವಾರ ರಾತ್ರಿ 10 ಗಂಟೆಗೆ ಚೇಸರ್ ಮತ್ತು ಟಾರ್ಗೆಟ್ ಎಂಬ 2 ಉಪಗ್ರಹಗಳನ್ನು ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಯಿತು. ಬಳಿಕ 2 ಉಪಗ್ರಹಗಳನ್ನು 476 ಕಿ.ಮೀ. ದೂರದ ಕಕ್ಷೆಯಲ್ಲಿ ಯಶಸ್ವಿಯಾಗಿ ನಿಯೋಜನೆ ಮಾಡಲಾಯಿತು. ಈ ಯೋಜನೆಗೆ ಸ್ಪೇಡ್ಎಕ್ಸ್ ಎಂದು ಹೆಸರಿಡಲಾಗಿದ್ದು, ಈ 2 ಪ್ರಮುಖ ಉಪಗ್ರಹಗಳ ಜತೆಗೆ 24 ಇತರ ಪೇಲೋಡ್ಗಳನ್ನು ಕೂಡ ಉಡಾವಣೆ ಮಾಡಲಾಗಿದೆ.
2 ಉಪಗ್ರಹಗಳು ಕಕ್ಷೆ ಸೇರಿದ ಬಳಿಕ ಜನವರಿಯಲ್ಲಿ ಡಾಕಿಂಗ್ ಕಾರ್ಯ ನಡೆಸಲಾಗುತ್ತದೆ. ಡಾಕಿಂಗ್ ಯಶಸ್ವಿಯಾದರೆ ಬಳಿಕ 2 ಉಪಗ್ರಹಗಳ ನಡುವೆ ವಿದ್ಯುತ್ ಹರಿಸುವ ಪರೀಕ್ಷೆ ನಡೆಸಲಾಗುತ್ತದೆ. ಇದಾದ ಬಳಿಕ 2 ವರ್ಷಗಳ ಕಾಲ ಈ ಉಪಗ್ರಹಗಳು ಬಾಹ್ಯಾಕಾಶದಲ್ಲಿ ಕಾರ್ಯನಿರ್ವಹಿಸಲಿವೆ. ಪ್ರಸ್ತುತ ಅಮೆರಿಕ, ರಷ್ಯಾ ಮತ್ತು ಚೀನಗಳು ಮಾತ್ರ ಬಾಹ್ಯಾಕಾಶ ಡಾಕಿಂಗ್ನಲ್ಲಿ ಯಶಸ್ವಿಯಾಗಿವೆ. ಏಕೆ ಈ ಉಡಾವಣೆ?
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೀತಿಯಲ್ಲೇ ಇಸ್ರೋ ಕೂಡ ತನ್ನದೇ ಆದ ಸ್ವದೇಶಿ ಭಾರತೀಯ ಅಂತರಿಕ್ಷ ನಿಲ್ದಾಣ ಸ್ಥಾಪಿಸಲು ಸಿದ್ಧತೆ ನಡೆಸಿದೆ. ಇದಲ್ಲದೆ ಚಂದ್ರನ ಮೇಲ್ಮೆ„ನಿಂದ ಮಣ್ಣು ತರುವ ಪ್ರಯೋಗಕ್ಕೂ ಡಾಕಿಂಗ್ನಲ್ಲಿ ಯಶಸ್ಸು ಸಾಧಿಸುವುದು ಅನಿವಾರ್ಯವಾಗಿದೆ.
Related Articles
ಭೂಮಿಗಿಂತ 470 ಕಿ.ಮೀ. ದೂರದ ವೃತ್ತಾಕಾರದ ಕಕ್ಷೆಗೆ ಉಪಗ್ರಹಗಳ ಸೇರ್ಪಡೆ
ಈ 2 ಉಪಗ್ರಹಗಳನ್ನು 5 ಕಿ.ಮೀ. ಅಂತರದಲ್ಲಿ ನಿಯೋಜನೆ ಮಾಡಲಾಗುತ್ತದೆ.
ಬಳಿಕ ಸುಮಾರು 14 ದಿನಗಳ ಬಳಿಕ ಇಸ್ರೋ ಇವುಗಳನ್ನು 3 ಮೀ. ಅಂತರಕ್ಕೆ ತರಲಿದ್ದು, ಇವು ಪರಸ್ಪರ ಜೋಡಣೆಯಾಗಲಿವೆ.
ಸ್ಪೇಡ್ಎಕ್ಸ್ನಲ್ಲಿ ಹೈ ರೆಸಲ್ಯೂಶನ್ ಕೆಮರಾಗಳನ್ನು ಅಳವಡಿಸಲಾಗಿದೆ
ಇವು ಉತ್ತಮ ಗುಣಮಟ್ಟದ ಚಿತ್ರಗಳನ್ನು ಭೂಮಿಗೆ ರವಾನಿಸಲಿವೆ.
Advertisement