Advertisement

“ಛೋಟಾ ಭೀಮ್‌’ಸೇರಿ 31 ಉಪಗ್ರಹ ನಭಕ್ಕೆ

06:00 AM Nov 30, 2018 | Team Udayavani |

ಶ್ರೀಹರಿಕೋಟಾ: ಇಸ್ರೋ ಅಭಿವೃದ್ಧಿಪಡಿಸಿದ ಭೂ ಪರಿ ವೀಕ್ಷಣೆ ಉಪಗ್ರಹ ಸೇರಿದಂತೆ ವಿದೇಶದ 30 ಉಪಗ್ರಹ ಗಳನ್ನು ಗುರುವಾರ ಶ್ರೀಹರಿಕೋಟಾ ಉಡಾವಣೆ ಕೇಂದ್ರ ದಿಂದ ಉಡಾವಣೆ ಮಾಡಲಾಗಿದೆ. ಪಿಎಸ್‌ಎಲ್‌ವಿ ಸಿ43 ರಾಕೆಟ್‌ ಬಳಸಿ ಈ ಉಡಾವಣೆ ನಡೆದಿದ್ದು, ಒಟ್ಟು ಎಂಟು ದೇಶಗಳ ಉಪಗ್ರಹಗಳು ಕಕ್ಷೆ ಸೇರಿವೆ. ಬೆಳಗ್ಗೆ 9.57ಕ್ಕೆ ಸರಿಯಾಗಿ ರಾಕೆಟ್‌ ಉಡಾವಣೆಗೊಂಡಿದೆ. ಭಾರತದ ಎಚ್‌ವೈಎಸ್‌ಐಎಸ್‌ (ಹೈಪರ್‌ ಸ್ಪೆಕ್ಟ್ರಲ್‌ ಇಮೇಜಿಂಗ್‌ ಸೆಟಲೈಟ್‌) ಎನ್ನುವುದು ಹೈ ರೆಸೊಲ್ಯೂಷನ್‌ ಭೂ ಪರಿ ವೀಕ್ಷಣೆ ಉಪಗ್ರಹವಾಗಿದ್ದು, ಇದನ್ನು ಅನೌಪಚಾರಿಕವಾಗಿ “ಛೋಟಾ ಭೀಮ್‌) ಎಂದೂ ಕರೆಯಲಾಗುತ್ತಿದೆ.

Advertisement

ಬೃಹತ್‌ ಜಿಸ್ಯಾಟ್‌ 11 ಉಡಾವಣೆ ಡಿ. 5 ರಂದು:  ಭಾರತದ ಅತ್ಯಂತ ಭಾರದ ಉಪಗ್ರಹ ಜಿಸ್ಯಾಟ್‌ 11 ಅನ್ನು ಡಿ.5ರಂದು ಉಡಾವಣೆ ಮಾಡಲಾಗುತ್ತದೆ. ಫ್ರೆಂಚ್‌ ಗಯಾನ ದಿಂದ ಅಂದು ರಾತ್ರಿ 2.08 ಕ್ಕೆ ಉಡಾವಣೆ ಗೊಳ್ಳಲಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್‌ ಹೇಳಿದ್ದಾರೆ. ಮುಂದಿನ ತಿಂಗಳು ಜಿಎಸ್ಯಾಟ್‌ 7ಎ ಕೂಡ ಉಡಾವಣೆ ಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಹಲವು ಉಡಾವಣೆ ಯೋಜನೆಗಳು ಜಾರಿಯಲ್ಲಿವೆ ಎಂದು ಸಿವನ್‌ ಹೇಳಿದ್ದಾರೆ. ಮುಂದಿನ ವರ್ಷ ಚಂದ್ರಯಾನ 2 ಕೂಡ ನಡೆಯಲಿದೆ.

ಭೂಪರಿವೀಕ್ಷಣೆ ಉಪಗ್ರಹದ ಉಪಯೋಗಗಳು
ಕೃಷಿ, ಅರಣ್ಯ, ಮಣ್ಣು ಸಮೀಕ್ಷೆ, ಕರಾವಳಿ ವಲಯ ಅಧ್ಯಯನ 
ಒಳನಾಡು ನೀರು ಅಧ್ಯಯನ, ಪರಿಸರ ಹಾಗೂ ಮಾಲಿನ್ಯದ ಮೇಲೆ ನಿಗಾ
5 ವರ್ಷಗಳ ಬಾಳಿಕೆ ಅವಧಿ
ಭೂಮಿಯ ಸಮೀಪದ ಚಿತ್ರಣ ಪಡೆಯಲು ಸಾಧ್ಯ
ಅತ್ಯಾಧುನಿಕ ಹೈಪರ್‌ಸ್ಪೆಕ್ಟರಲ್‌ ಉಪಗ್ರಹದಲ್ಲಿದೆ ಇಮೇಜಿಂಗ್‌ ಡಿಟೆಕ್ಟರ್‌ ಚಿಪ್‌ 
ಉಪಗ್ರಹಕ್ಕೆ ಅಗತ್ಯವಾದ ಚಿಪ್‌ ದೇಶದಲ್ಲೇ ತಯಾರಿಕೆ

ಈ ಅದ್ಭುತ ಸಾಧನೆಗೈದ ಇಸ್ರೋ ತಂಡಕ್ಕೆ ನನ್ನ ಅಭಿನಂದನೆ ಗಳು. ದೇಶದಲ್ಲೇ ಇರುವಂಥ ಸೌಲಭ್ಯ ಬಳಸಿ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯನ್ನು ಎಷ್ಟು ಸಾಧ್ಯವೋ ಅಷ್ಟು ದೇಶೀಯವಾಗಿಸಲು ಪ್ರಯತ್ನಿಸುತ್ತಿದ್ದೇವೆ.
ಕೆ.ಸಿವನ್‌, ಇಸ್ರೋ ಮುಖ್ಯಸ್ಥ‌

Advertisement

Udayavani is now on Telegram. Click here to join our channel and stay updated with the latest news.

Next