ಶ್ರೀಹರಿಕೋಟ: “ಬಾಹುಬಲಿ’ ಖ್ಯಾತಿಯ ದೇಶಿ ನಿರ್ಮಾಣದ ಅತ್ಯಂತ ಭಾರದ ರಾಕೆಟ್ ಜಿಎಸ್‌ಎಲ್‌ವಿ ಎಂಕೆ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಸಂವಹನ ಸ್ಯಾಟಲೈಟ್ ಜಿಎಸ್ಯಾಟ್ 29 ಹೊತ್ತು ನಭಕ್ಕೆ ಸಾಗಿದೆ. ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ 5.08ಕ್ಕೆ ಉಡಾವಣೆ ಮಾಡಲಾಯಿತು. ಈವರೆಗೆ ಭಾರತದಲ್ಲಿ 4 ಟನ್ ತೂಕದ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿರುವ ರಾಕೆಟ್ ಲಭ್ಯವಿರಲಿಲ್ಲ. ಇದೇ ಮೊದಲ ಬಾರಿಗೆ ಜಿಎಸ್‌ಎಲ್‌ವಿ ಎಂಕೆ-3 ಬಳಕೆ ಮಾಡಲಾಗಿದೆ. ಇನ್ನು ಇದಕ್ಕೂ ದೊಡ್ಡ ಸ್ಯಾಟಲೈಟ್‌ಗಳನ್ನೂ ಉಡಾವಣೆ ಸಾಧ್ಯ ಎಂದು ಇಸ್ರೋ ಹೇಳಿದೆ. ಇದೇ ರಾಕೆಟ್ ಬಳಸಿ ಚಂದ್ರಯಾನ-2 ಹಾಗೂ ಮಾನವ ಸಹಿತ ಗಗನಯಾನವನ್ನೂ ಕೈಗೊಳ್ಳಲಾಗುತ್ತದೆ. ಜಿ ಸ್ಯಾಟ್ 29 ಸ್ವದೇಶಿಯವಾಗಿ ನಿರ್ಮಿಸಿದ 33ನೇ ಉಪಗ್ರಹ ಎನ್ನುವುದು ಮತ್ತೂಂದು ಹೆಗ್ಗಳಿಕೆ.
ಜಿಸ್ಯಾಟ್ ವಿಶೇಷತೆ
3423 ಕಿಲೋ ತೂಕದ ಸ್ಯಾಟಲೈಟ್
ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಇಂಟರ್‌ನೆಟ್ ಸಂಪರ್ಕಕ್ಕೆ ಅನುಕೂಲ
ಉಡಾವಣೆ ಮಾಡಿದ 16 ನಿಮಿಷಗಳಲ್ಲಿ ನಿಗದಿತ ಕಕ್ಷೆ ತಲುಪಿದ ಸ್ಯಾಟಲೈಟ್ ಸ್ಯಾಟಲೈಟ್‌ನ ಆಯಸ್ಸು 10 ವರ್ಷಗಳು
ಜಿಎಸ್‌ಎಲ್‌ವಿ ಎಂಕೆ3 ವಿಶೇಷತೆ
641ಟನ್ ಒಟ್ಟು ತೂಕ
( ಸಂಪೂರ್ಣ ತುಂಬಿದ ನಾಲ್ಕು ಪ್ರಯಾಣಿಕ ವಿಮಾನಕ್ಕೆ ಸಮಾನ ತೂಕ )
43 ಮೀಟರ್ ಎತ್ತರದ ರಾಕೆಟ್.
(13 ಮಹಡಿಯ ಕಟ್ಟಡಕ್ಕೆ ಸಮಾನ/ ಅತ್ಯಂತ ಭಾರ ದಾದರೂ ಅತೀ ಸಣ್ಣ ರಾಕೆಟ್)
15 ವರ್ಷಗಳ ಅಧ್ಯಯನ, ಸಂಶೋಧನೆಯ ಫಲ
300: ಕೋಟಿ ರೂ. ವೆಚ್ಚದ ರಾಕೆಟ್
4 ಟನ್: ಸಂವಹನ ಸ್ಯಾಟಲೈಟ್ ಉಡಾವಣೆ ಮಾಡುವ ಸಾಮರ್ಥ್ಯ