Advertisement

ಸೇನೆಗೆ ಜಿಸ್ಯಾಟ್‌ ಬಲ​​​​​​​

06:00 AM Dec 20, 2018 | Team Udayavani |

ಶ್ರೀಹರಿಕೋಟಾ/ಹೊಸದಿಲ್ಲಿ: ಭಾರತೀಯ ವಾಯುಪಡೆ (ಐಎಎಫ್)ಗೆ ನೆರವಾಗುವ ನಿಟ್ಟಿನಲ್ಲಿ ಜಿಸ್ಯಾಟ್‌-7ಎ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಬುಧವಾರ ಯಶಸ್ವಿಯಾಗಿ ಉಡಾಯಿಸಲಾಗಿದೆ. ಸಂಜೆ 4.10ಕ್ಕೆ ಉಡಾವಣೆಯನ್ನು ಜಿಎಸ್‌ಎಲ್‌ವಿ-ಎಫ್11 ವಾಹಕದ ಮೂಲಕ 2,250 ಕೆಜಿ ತೂಕದ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಈ ಉಪಗ್ರಹದಿಂದಾಗಿ ಐಎಎಫ್ಗೆ ವಿಶೇಷ ವಾಗಿ ಸಂಪರ್ಕ ಮತ್ತು ಸಂವಹನ ನಡೆಸಲು ಅನುಕೂಲಗಳಾಗಲಿವೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ರೋ ಅಧ್ಯಕ್ಷ ಕೆ.ಶಿವನ್‌ ಜಿಎಸ್‌ಎಲ್‌ವಿ ಇದುವರೆಗೆ ನಡೆಸಿದ ಉಡಾವಣೆಯಲ್ಲಿ ಅತ್ಯಂತ ಭಾರದ ಉಪಗ್ರಹವಾಗಿದೆ. 35 ದಿನಗಳ ಅವಧಿಯಲ್ಲಿ ನಡೆಸಲಾಗಿರುವ ಮೂರನೇ ಉಡಾವಣೆ ಇದು ಎಂದು ಹೇಳಿದ್ದಾರೆ. ದೇಶಿಯವಾಗಿ ಸಿದ್ಧಪಡಿಸಲಾಗಿರುವ ಕ್ರಯೋ ಜನಿಕ್‌ ಹಂತವನ್ನು ಇದು ಹೊಂದಿದೆ. ಎಂಟು ವರ್ಷಗಳ ಕಾಲ ಈ ಉಪಗ್ರಹ ಐಎಎಫ್ಗೆ ನೆರವಾಗಲಿದೆ ಎಂದು ಶಿವನ್‌ ಹೇಳಿದ್ದಾರೆ. ಉಪಗ್ರಹದ ಸೌರ ಪ್ಯಾನೆಲ್‌ಗ‌ಳನ್ನು ಅನಾವರಣಗೊಳಿಸುವುದು ಮತ್ತು ಕಕ್ಷೆಗೆ ಏರಿಸುವುದನ್ನು ಬೆಂಗ ಳೂರಿನಿಂದ ನಡೆಸಲಾಗುತ್ತದೆ ಎಂದೂ ಶಿವನ್‌ ಹೇಳಿದ್ದಾರೆ.

7ನೇ ಉಡಾವಣೆ: ಶ್ರೀಹರಿಕೋಟಾದಿಂದ ಈ ವರ್ಷ ಏಳನೇ ಉಡಾವಣೆಯಾಗಿದ್ದರೆ, ಜಿಎಸ್‌ಎಲ್‌ವಿ-ಎಫ್11 ಉಡಾವಣಾವಾಹಕಕ್ಕೆ 69ನೇ ಉಡಾವಣೆಯಾಗಿದೆ.

ಇಂಡಿಯನ್‌ ಆ್ಯಂಗ್ರಿ ಬರ್ಡ್‌: ಈ ಉಪಗ್ರಹವನ್ನು “ಇಂಡಿಯನ್‌ ಆ್ಯಂಗ್ರಿ ಬರ್ಡ್‌’ ಎಂದು ಹೆಸರಿಸಲಾಗಿದೆ. ಹೊಸ ಉಪಗ್ರಹ ಐಎಎಫ್ನ ವಿಮಾನಗಳು, ಮಿಲಿಟರಿ ವಿಮಾನ ನಿಲ್ದಾಣಗಳು, ಡ್ರೋನ್‌ಗಳು, ಭೂಮಿಯಲ್ಲಿರುವ ರಾಡಾರ್‌ ಕೇಂದ್ರಗಳ ನಡುವೆ ನಿಕಟ ಸಂಪರ್ಕಕ್ಕೆ ನೆರವಾಗಲಿವೆ. ಮಾನವ ರಹಿತ ವಿಮಾನ ಹಾರಾಟವನ್ನು ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳಲು ಹಾಗೂ ಯುದ್ಧ ಸಿದ್ಧತೆಯ ಬಗ್ಗೆ ನಿಖರ ಮಾಹಿತಿ ಗೆ ಈ ಉಪಗ್ರಹ ನೆರವಾಗಲಿದೆ. ವಿಶೇಷವಾಗಿ ವಿದೇಶಿ ಉಪಗ್ರಹಳ ಮೂಲಕ ಗರಿಷ್ಠ ಪ್ರಮಾಣದ ರಕ್ಷಣಾ ಮಾಹಿತಿ ವಿನಿಮಯ ಮತ್ತು ಮಾಹಿತಿ ಛೇದನದ ಮೇಲೆ ನಿಯಂತ್ರಣ ಹೇರಲು ಸಾಧ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next