Advertisement
ಈ ಕುರಿತು ಟ್ವೀಟ್ ಮಾಡಿರುವ ಇಸ್ರೋ, ಇದು ಭಾರತದ ಮೊತ್ತಮೊದಲ ಅನಲಾಗ್ ಸ್ಪೇಸ್ ಮಿಷನ್ ಎಂದಿದೆ. ಇಲ್ಲಿ ಚಂದ್ರ ಮತ್ತು ಮಂಗಳ ಗ್ರಹದ ಪರಿಸರವನ್ನೇ ಸಂಪೂರ್ಣ ಹೋಲುವಂಥ ಆವಾಸದ ಮಾದರಿಯೊಂದನ್ನು ನಿರ್ಮಿಸಲಾಗುತ್ತದೆ. ಇದರೊಳಗಿರುವ ಅನಲಾಗ್ ಗಗನಯಾತ್ರಿಗಳು ಬೇರೊಂದು ಗೃಹದಲ್ಲೇ ಇರುವಂತೆ ಇಲ್ಲಿ ವಾಸಿಸುತ್ತಾರೆ ಮತ್ತು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಭೂಮಿಯಾಚೆಗಿನ ಪರಿಸರದಲ್ಲಿ ಜೀವನ ಹೇಗಿರುತ್ತದೆ ಎಂಬುದನ್ನು ಅನುಕರಿಸುವುದು ಮತ್ತು ತೀವ್ರತರವಾದ ಹವಾಗುಣ ಹಾಗೂ ಏಕಾಂಗಿತನವು ಗಗನಯಾತ್ರಿಗಳ ಆರೋಗ್ಯ ಮತ್ತು ಕಾರ್ಯಕ್ಷಮತೆ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಅಧ್ಯಯನ ಮಾಡುವುದು ಇದರ ಉದ್ದೇಶ. ಇದು ದೀರ್ಘಾವಧಿಯ ಬಾಹ್ಯಾಕಾಶ ಯೋಜನೆಯ ವೇಳೆ ಅವರು ಎದುರಿಸಬೇಕಾದ ಮಾನಸಿಕ ಹಾಗೂ ಶಾರೀರಿಕ ಸವಾಲುಗಳ ಬಗ್ಗೆ ಬೆಳಕು ಚೆಲ್ಲಲಿದೆ.
ಲಡಾಖ್‌ನಲ್ಲಿ ಚಂದ್ರ, ಮಂಗಳ ಗ್ರಹದ ಪರಿಸರದ ಮಾದರಿ ನಿರ್ಮಾಣ
ಎಲ್ಲ ರೀತಿಯ ಹವಾಗುಣಕ್ಕೆ ಹೊಂದುವ ವಾತಾವರಣ ಇರುವಂತೆ ಮಾದರಿ
ಅದರೊಳಗೆ ಸಾದೃಶ್ಯ ಗಗನಯಾತ್ರಿ
(ಅನಲಾಗ್ ಆಸ್ಟ್ರೋನಾಟ್) ಇರಲಿದೆ.
ಪ್ರತೀದಿನ ಅಲ್ಲಿ ಇರುವವರ ಹೃದಯಬಡಿತ ಸೇರಿ ಎಲ್ಲ ಅಂಶಗಳ ದಾಖಲು
ಏಕಾಂಗಿತನ, ಗಂಭೀರತರವಾದ ಪರಿಸರಕ್ಕೆ ಮನುಷ್ಯ ಹೊಂದಿಕೊಳ್ಳುವ ಬಗ್ಗೆ ಅಧ್ಯಯನ ಲಡಾಖ್ ಆಯ್ಕೆ ಏಕೆ?
ಲಡಾಖ್ ಕಠಿನ ಹವಾಮಾನ, ವಿಶಿಷ್ಟವಾದ ಭೌಗೋಳಿಕ ಗುಣಲಕ್ಷಣ ಹೊಂದಿದೆ.
ಗಗನಯಾತ್ರಿಗಳುಎದುರಿಸುವ ಪರಿಸರೀಯ ಸವಾಲುಗಳನ್ನು ಅನುಕರಣೆ ಮಾಡಲು ಇದು ಸೂಕ್ತ ಪ್ರದೇಶ.
ಇಲ್ಲಿನ ಶುಷ್ಕ ಹವಾಮಾನ ಮತ್ತು ಬಂಜರು ಭೂದೃಶ್ಯವು ಚಂದಿರ ಮತ್ತು ಮಂಗಳ ಗ್ರಹದ ಪರಿಸ್ಥಿತಿಗೆ ಸರಿಯಾಗಿ ಹೋಲುತ್ತದೆ.
Related Articles
ಈ ಪ್ರಕ್ರಿಯೆಯಲ್ಲಿ ಕಂಡುಕೊಳ್ಳಲಾಗುವ ಅಂಶಗಳು ಭಾರತದ ಗಗನಯಾನ ಯೋಜನೆಗೆ ನೆರವಾಗಲಿದೆ. ಪ್ರತಿಕೂಲ ಹಾಗೂ ಕಠಿನ ವಾತಾವರಣದಲ್ಲಿ ಹಲವು ಪರೀಕ್ಷೆಗಳನ್ನು ನಡೆಸುವ ಮೂಲಕ ದೀರ್ಘಾವಧಿಯ ಬಾಹ್ಯಾಕಾಶ ಯಾನದ ವೇಳೆ ಗಗನಯಾತ್ರಿಗಳ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯಕ್ಷಮತೆ ಕುರಿತ ಒಳನೋಟವನ್ನು ಈ ಸಂಶೋಧನೆ ಒದಗಿಸಲಿದೆ.
Advertisement