Advertisement

Gaza ಇಸ್ರೇಲ್‌ ದಾಳಿ ವಿಸ್ತರಣೆ : ರಾತೋರಾತ್ರಿ 200 ಉಗ್ರನೆಲೆಗಳ ನಾಶ

12:17 AM Dec 05, 2023 | Team Udayavani |

ಜೆರುಸಲೇಂ: ಹಮಾಸ್‌- ಇಸ್ರೇಲ್‌ ನಡುವಿನ ಕದನವಿರಾಮ ಮುಗಿಯುತ್ತಿದ್ದಂತೆ ಹಮಾಸ್‌ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವ ಇಸ್ರೇಲ್‌ ಕಾರ್ಯಾಚರಣೆ ಬಿರುಸಾಗಿದ್ದು ಒಂದೇ ರಾತ್ರಿಯಲ್ಲಿ 200 ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದೆ. ಇದರೊಂದಿಗೆ ಉತ್ತರ ಗಾಜಾದಲ್ಲಿನ ತನ್ನ ಕಾರ್ಯಾಚರಣೆ ಬಹುತೇಕ ಪೂರ್ಣಗೊಂಡಿದೆ ಎಂಬುದಾಗಿಯೂ ತಿಳಿಸಿದೆ.

Advertisement

ಇಸ್ರೇಲ್‌ ಸೇನೆ ನೀಡಿರುವ ಮಾಹಿತಿ ಪ್ರಕಾರ, ಹಮಾಸ್‌ ಉಗ್ರರ ಮೂಲಸೌಕರ್ಯಗಳಿರುವ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಉಗ್ರರು ಶಾಲೆಗಳಲ್ಲಿ ಸುರಂಗಗಳನ್ನು ನಿರ್ಮಿಸಿ ಅವುಗಳ ಮೂಲಕ ಉಗ್ರ ಚಟುವಟಿಕೆ ನಡೆಸುತ್ತಿದ್ದರು ಈ ಹಿನ್ನೆಲೆಯಲ್ಲಿ ಶಾಲೆಗಳನ್ನೂ ಪುಡಿಗಟ್ಟಲಾಗಿದ್ದು, ಬಹುತೇಕ ಕಾರ್ಯಾಚರಣೆ ಪೂರ್ಣಗೊಂಡಿದೆ. ಮುಂದೆ ದಕ್ಷಿಣ ಭಾಗದಲ್ಲಿರುವ ಹಮಾಸ್‌ ಸೌಕರ್ಯಗಳನ್ನು ಗುರಿಯಾಗಿಸಲು ಯೋಜಿಸಿರುವುದಾಗಿ ಹೇಳಿದೆ. ಇಸ್ರೇಲ್‌ ಪಡೆಗಳ ಈ ಹೇಳಿಕೆ ದಕ್ಷಿಣ ಗಾಜಾದ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ.

ಏತನ್ಮಧ್ಯೆ ಇತ್ತೀಚೆಗಷ್ಟೇ ನೂರಾರು ಮಂದಿ ಪ್ಯಾಲೆಸ್ತೀನಿಯರು ಆಶ್ರಯ ಪಡೆದಿರುವ ದಕ್ಷಿಣದ ಪಟ್ಟಣ ಖಾನ್‌ ಯೂನಿಸ್‌ನಿಂದ ಎಲ್ಲರೂ ಸಾಮೂಹಿಕವಾಗಿ ಸ್ಥಳಾಂತರಗೊಳ್ಳಿ ಎಂದು ಇಸ್ರೇಲ್‌ ಪಡೆಗಳು ಕರೆ ನೀಡಿವೆ. ಗಾಜಾದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಿಕರಿಗೆ ತೊಂದರೆ ಆಗಬಾರದೆಂಬ ಉದ್ದೇಶಕ್ಕೆ ಈ ಕರೆ ನೀಡಿರುವುದಾಗಿ ಹೇಳಿದೆ. ಆದರೆ ನೆಲೆ ಕಳೆದುಕೊಂಡಿರುವ ಪ್ಯಾಲೆಸ್ತೀನಿಯರಿಗೆ ಎಲ್ಲಿಗೆ ಹೋಗುವುದು ಎಂದು ದಿಕ್ಕು ತೋಚದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next