Advertisement

Hamas: ಸಿನ್ವರ್‌ ಮರಣ ಬಳಿಕ ಕದನ ವಿರಾಮಕ್ಕೆ ಹಮಾಸ್‌ ಯತ್ನ?

11:17 PM Oct 30, 2024 | Team Udayavani |

ನವದೆಹಲಿ: ಹಮಾಸ್‌ ನಾಯಕ ಯಹ್ಯಾ ಸಿನ್ವರ್‌ ಮರಣದ 1 ವಾರದ ಬಳಿಕ ಕದನ ವಿರಾಮ ಮಾತುಕತೆಗೆ ಉಗ್ರ ಸಂಘಟನೆಯ ನಾಯಕರು ಇಂಗಿತ ವ್ಯಕ್ತಪಡಿಸಿದ್ದಾರೆ. ಹಲವು ಪಾಶ್ಚಿ ಮಾತ್ಯ ರಾಷ್ಟ್ರಗಳು ಸಹ ಕದನ ವಿರಾಮ ಘೋಷಣೆಗೆ ಪ್ರಯತ್ನ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

Advertisement

ಈ ಬಗ್ಗೆ ಮಾತನಾಡಿದ ಹಮಾಸ್‌ ಸಂಘಟನೆಯ ಸಮಿ ಅಬು ಜುಹ್ರಿ, ಗಾಜಾ ಪಟ್ಟಿಯಲ್ಲಿ ನಮ್ಮ ಜನರಿಗಾಗು ತ್ತಿರುವ ಸಮಸ್ಯೆಯನ್ನು ತಪ್ಪಿಸಲು, ಗಾಜಾದಲ್ಲಿ ಇಸ್ರೇಲ್‌ನ ಅತಿಕ್ರಮಣವನ್ನು ಹಿಂತೆಗೆಯಲು ಯಾವುದೇ ಒಪ್ಪಂದಕ್ಕೆ ನಾವು ಸಿದ್ಧರಾಗಿದ್ದೇವೆ’ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇಸ್ರೇಲ್‌ ಗಾಜಾ ಪಟ್ಟಿಯಲ್ಲಿರುವ ಹಮಾಸ್‌ ಉಗ್ರರ ಮೇಲೆ ನಿರಂತರವಾಗಿ ಕೈಗೊಳ್ಳುತ್ತಿರುವ ದಾಳಿಯನ್ನು ತಪ್ಪಿಸಲು ಅಮೆರಿಕ ಮುಂದಾಗಿದ್ದು, ಸದ್ಯಕ್ಕೆ ತಾತ್ಕಾಲಿಕ ಒಪ್ಪಂದ ಮಾಡಿಕೊಳ್ಳಲು ಇಸ್ರೇಲ್‌ಗೆ ಸಲಹೆ ನೀಡಿದೆ. ಮುಂದಿನ ದಿನಗಳಲ್ಲಿ ಇದು ಶಾಶ್ವತ ಪರಿಹಾರಕ್ಕೆ ಕಾರಣವಾಗಬ ಹುದು ಎಂದು ಅಮೆರಿಕದ ಅಧಿಕಾರಿಗಳು ಭಾವಿಸಿದ್ದಾರೆ ಎನ್ನಲಾಗಿದೆ. ದೋಹಾದಲ್ಲಿ ಕಳೆದ 1 ವಾರದಿಂದ ನಡೆದ ವಿವಿಧ ಸಭೆಗಳು ಸೋಮವಾರ ಮುಕ್ತಾಯವಾಗಿದ್ದು, ಕದನ ವಿರಾಮದ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next