Advertisement

Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…

08:43 AM Oct 26, 2024 | Team Udayavani |

ಟೆಹ್ರಾನ್: ಇರಾನ್ ನಡೆಸಿದ ದಾಳಿಗೆ ಪ್ರತಿಕಾರ ತೀರಿಸಲು ಇಸ್ರೇಲ್ ಮುಂದಾಗಿದ್ದು ಅದರಂತೆ ಇಂದು(ಅ. 26) ರಂದು ಮುಂಜಾನೆ ಇರಾನ್ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ಆರಂಭಿಸಿದೆ.

Advertisement

ಅಕ್ಟೋಬರ್ 1ರ ಕ್ಷಿಪಣಿ ದಾಳಿಗೆ ಪ್ರತಿಕ್ರಿಯೆ ನೀಡಿದ್ದ ಇಸ್ರೇಲ್‌ ಅಧ್ಯಕ್ಷ ಬೆಂಜಮಿನ್‌ ನೆತನ್ಯಾಹು ಇರಾನ್ ನಡೆಸಿದ ದಾಳಿಗೆ ಸರಿಯಾದ ಬೆಲೆ ತೆರಬೇಕಾಗುತ್ತದೆ, ಇರಾನ್ ನಡೆಸುವ ದಾಳಿಯನ್ನು ಎದುರಿಸಲು ನಾವು ತಯಾರಿದ್ದೇವೆ ಆದರೆ ನಮ್ಮ ದಾಳಿಯನ್ನು ಎದುರಿಸಲು ನೀವು ತಯಾರಿದ್ದೀರಾ ಎಂದು ಇರಾನ್ ಗೆ ಎಚ್ಚರಿಕೆ ನೀಡಿದ್ದರು ಅದರಂತೆ ಇಂದು ಬೆಳಿಗ್ಗೆ ಇರಾನ್​ನ ಟೆಹರಾನ್ ಸೇರಿದಂತೆ ಹಲವು ಪ್ರದೇಶಗಳಲ್ಲಿರುವ ಸೇನಾ ನೆಲಗಳನ್ನು ಗುರಿಯಾಗಿಸಿ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ.

ತಿಂಗಳ ಆರಂಭದಲ್ಲಿ ಇರಾನ್ ಇಸ್ರೇಲ್ ಮೇಲೆ 200ಕ್ಕೂ ಅಧಿಕ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಹಾರಿಸಿತ್ತು ಈ ವೇಳೆ ಹಲವರು ಮೃತಪಟ್ಟಿದ್ದರು. ಇದಾದ ಬಳಿಕ ಇಸ್ರೇಲ್ ಅಧ್ಯಕ್ಷರ ಸಮ್ಮುಖದಲ್ಲಿ ದಾಳಿಯ ಕುರಿತು ಸೇನಾ ಮುಖಂಡರ ಜೊತೆ ಗುಪ್ತ ಸಭಯನ್ನು ನಡೆಸಲಾಯಿತು, ಇದರ ಬೆನ್ನಿಗೆ ಇರಾನ್ ಮೇಲೆ ದಾಳಿಗೆ ಇಸ್ರೇಲ್ ಮುಂದಾಗಿದೆ.

 

Advertisement

Advertisement

Udayavani is now on Telegram. Click here to join our channel and stay updated with the latest news.

Next