Advertisement

Congress: ಈ ಬಾರಿ ಇವಿಎಂ ಬೇಡ, ಮತಪತ್ರವೇ ಇರಲಿ: ಇಸಿಗೆ ಕಾಂಗ್ರೆಸ್‌ ಮನವಿ?

09:24 PM Oct 15, 2024 | Team Udayavani |

ನವದೆಹಲಿ: ಹೆಜ್ಬುಲ್ಲಾ ಉಗ್ರರ ಪೇಜರ್‌ಗಳನ್ನೇ ಇಸ್ರೇಲ್‌ ಹ್ಯಾಕ್‌ ಮಾಡಿದೆ ಎಂದ ಮೇಲೆ ವಿದ್ಯುನ್ಮಾನ ಮತ ಯಂತ್ರಗಳು (ಇವಿಎಂ) ಯಾವ ಲೆಕ್ಕ ಎಂದು ಕಾಂಗ್ರೆಸ್‌ ನಾಯಕ ರಶೀದ್‌ ಅಳ್ವಿ ಪ್ರಶ್ನಿಸಿದ್ದು, ರಾಜಕೀಯ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಹಳೇ ಪಕ್ಷವು ಸೋಲನ್ನು ಒಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಶೀದ್‌ ಅಳ್ವಿ, ಮುಂಬರುವ ಮಹಾರಾಷ್ಟ್ರ, ಜಾರ್ಖಂಡ್‌ ಚುನಾವಣೆಯಲ್ಲಿ ಇವಿಎಂ ಬದಲಿಗೆ ಮತ ಪತ್ರದ ಮೂಲಕವೇ ಮತ ಚಲಾವಣೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ.

ಇಸ್ರೇಲ್‌ನವರು ಪೇಜರ್‌, ವಾಕಿ-ಟಾಕಿಗಳನ್ನು ಬಳಸಿ ಜನರನ್ನು ಕೊಲ್ಲಬಹುದಾದರೆ ಇವಿಎಂ ಯಾವ ಲೆಕ್ಕ? ಅಲ್ಲದೆ ಪ್ರಧಾನಿ ಮೋದಿ ಅವರು ಇಸ್ರೇಲ್‌ನೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಇಸ್ರೇಲ್‌ ಇಂತಹ ವಿಷಯಗಳಲ್ಲಿ ಪರಿಣಿತವಾಗಿದೆ. ಹೀಗಾಗಿ ಬಿಜೆಪಿ ಚುನಾವಣೆಗೆ ಮುಂಚೆ ಭಾರಿ ಆಟ ಆಡಬಹುದು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next