Advertisement

Strikes again; ಲೆಬನಾನ್‌,ಗಾಜಾ ಮೇಲೆ ಮತ್ತೆ ಮುಗಿಬಿದ್ದ ಇಸ್ರೇಲ್‌:40ಕ್ಕೂ ಹೆಚ್ಚು ಸಾ*ವು

01:19 AM Oct 04, 2024 | Team Udayavani |

ಜೆರುಸಲೇಂ/ಬೈರೂತ್‌: ಇಸ್ರೇಲ್‌ ಮತ್ತು ಮಧ್ಯ ಪ್ರಾಚ್ಯ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದ್ದು, ಲೆಬನಾನ್‌ ಮತ್ತು ಗಾಜಾ ಪಟ್ಟಿಯ ಮೇಲೆ ಗುರುವಾರ ಇಸ್ರೇಲ್‌ ಮುಗಿಬಿದ್ದಿದೆ. ಬೈರೂತ್‌ ಮೇಲೆ ಇಸ್ರೇಲ್‌ ವಾಯುದಾಳಿ ನಡೆಸಿದ್ದು, 40ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ.

Advertisement

ಇರಾನ್‌ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್‌ ದಾಳಿ ನಡೆಸಿದ್ದು ಲೆಬನಾನ್‌ ಹಾಗೂ ಗಾಜಾ ಪಟ್ಟಿಯ ಮೇಲೆ ಬಾಂಬ್‌ ಸುರಿಮಳೆ ಮಾಡಿದೆ. ಗಾಜಾ ಪಟ್ಟಿಯ ಮೇಲೂ ದಾಳಿ ನಡೆಸಿದ್ದು ಹಮಾಸ್‌ ಮುಖ್ಯಸ್ಥ ರಾವಿ ಮುಷ್ತಾಹನನ್ನು ಹತ್ಯೆ ಮಾಡಿದ್ದೇವೆ ಎಂದು ಇಸ್ರೇಲ್‌ ಸೇನೆ ಹೇಳಿದೆ. ಇಸ್ರೇಲ್‌ ನಡೆಸಿರುವ ದಾಳಿಯಿಂದಾಗಿ ಸುಮಾರು 12 ಲಕ್ಷ ಮಂದಿಯನ್ನು ಲೆಬನಾನ್‌ನಿಂದ ಸ್ಥಳಾಂತರಿಸಲಾಗಿದೆ ಎಂದು ಲೆಬನಾನ್‌ ಪ್ರಧಾನಿ ನಜೀಬ್‌ ಮಿಕಾತಿ ಹೇಳಿದ್ದಾರೆ.
ಹಮಾಸ್‌ ನಾಯಕನ ಹತ್ಯೆ: ಗಾಜಾ ಪಟ್ಟಿಯಲ್ಲಿ ಅಡಗಿಕೊಂಡಿರುವ ಹಮಾಸ್‌ ನಾಯಕರನ್ನು ಗುರಿ ಯಾಗಿಸಿ ಇಸ್ರೇಲ್‌ ವಾಯುದಾಳಿ ನಡೆಸಿದ್ದು, ಗಾಜಾ ಸರಕಾರದ ಮುಖ್ಯಸ್ಥ ರಾವಿ ಮುಷ್ತಾಹ ಹಾಗೂ ಇತರ ನಾಯಕರು ಹತ್ಯೆಗೀಡಾಗಿದ್ದಾರೆ. ಉತ್ತರ ಗಾಜಾದ ನೆಲಮಾಳಿಗೆಯಲ್ಲಿ ಇವರೆಲ್ಲರೂ ಅವಿತುಕೊಂಡಿದ್ದರು ಎಂದು ಇಸ್ರೇಲ್‌ ಸೇನೆ ಹೇಳಿದೆ.

ಮುಷ್ತಾಹನ ಜತೆಗೆ ಸಮಿ ಔದೇಶ್‌, ಸಮೇಹ್‌ ಅಲ್‌ ಸಿರಾಜ್‌ ಅವರನ್ನು ಹತ್ಯೆ ಮಾಡಲಾಗಿದ್ದು, ಇವರೆಲ್ಲರೂ ಕಳೆದ ಬಾರಿ ಇಸ್ರೇಲ್‌ ಮೇಲೆ ದಾಳಿ ಮಾಡಿದ್ದರು ಎನ್ನಲಾಗಿದೆ.

15 ಹೆಜ್ಬುಲ್ಲಾ ಉಗ್ರರ ಹತ್ಯೆ: ಲೆಬನಾನ್‌ನ ರಾಜಧಾನಿ ಬೈರೂತ್‌ ಮೇಲೆ ನಡೆದ ವಾಯುದಾಳಿಯ ಬಳಿಕ ಪ್ರತಿಕ್ರಿಯಿಸಿರುವ ಇಸ್ರೇಲ್‌ ಸೇನೆ ಕಳೆದ ಕೆಲವು ದಿನಗಳಲ್ಲಿ 15ಕ್ಕೂ ಹೆಚ್ಚು ಮಂದಿ ಹೆಜ್ಬುಲ್ಲಾ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿದೆ. ಅಲ್ಲದೇ ದಕ್ಷಿಣ ಲೆಬ ನಾನ್‌ನಲ್ಲಿರುವ 25 ಗ್ರಾಮಗಳನ್ನು ತೊರೆಯುವಂತೆ ಸೂಚಿಸಲಾಗಿದೆ. ಗಡಿ ಪ್ರದೇಶದಲ್ಲಿ ಇಸ್ರೇಲ್‌ ಜತೆ ಹೋರಾಟ ಮುಂದುವರಿಸುವುದಾಗಿ ಹೆಜ್ಬುಲ್ಲಾ ಹೇಳಿದೆ. ಕಳೆದ 1 ವರ್ಷದಲ್ಲಿ ಇದೇ ಮೊದಲ ಬಾರಿಗೆ ಲೆಬನಾನ್‌ ಸೇನೆ ಇಸ್ರೇಲ್‌ ಮೇಲೆ ದಾಳಿ ಮಾಡಿರು ವುದಾಗಿ ಹೇಳಿದೆ. ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಲೆಬನಾನ್‌ನ ಸೈನಿಕನೊಬ್ಬ ಮೃತಪಟ್ಟಿದ್ದು, ಇದಕ್ಕೆ ಪ್ರತೀ ಕಾರವಾಗಿ ಇಸ್ರೇಲ್‌ ಮೇಲೆ ಸೇನೆ ದಾಳಿ ಮಾಡಿದೆ.

ಟೆಲ್‌ ಅವೀವ್‌ ಮೇಲೆ ಹೌತಿ ಡ್ರೋನ್‌ ದಾಳಿ
ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ನಡೆಸಿದ ದಾಳಿಗೆ ಪ್ರತಿಯಾಗಿ ಯೆಮನ್‌ ಹೌತಿ ಉಗ್ರರು ಇಸ್ರೇಲ್‌ನ ಟೆಲ್‌ ಅವೀವ್‌ ಮೇಲೆ ಡ್ರೋನ್‌ ದಾಳಿ ನಡೆಸಿ ದ್ದಾರೆ. ಉಗ್ರರು ಲೆಬನಾನ್‌ ಮತ್ತು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುತ್ತಿದ್ದೇವೆ. ಇಸ್ರೇಲ್‌ನವರಿಗೆ ಈ ದಾಳಿಯನ್ನು ಗುರಿತಿಸಲು ಎಂದು ಹೇಳಿದ್ದಾರೆ.

Advertisement

ಭಯವಾಗುತ್ತಿದೆ: ಇಸ್ರೇಲ್‌ನಲ್ಲಿರುವ ಭಾರತೀಯರು
ಇಸ್ರೇಲ್‌ನಲ್ಲಿ ಬದುಕುವುದು ಕಷ್ಟವಾಗುತ್ತಿದೆ. ಈ ಮೊದಲಿಗಿಂತಲೂ ಈಗ ಇಲ್ಲಿ ಹೆಚ್ಚು ಭಯ ವಾಗುತ್ತಿದೆ’ ಎಂದು ತೆಲಂಗಾಣ ಮೂಲದ ವಿದ್ಯಾರ್ಥಿ ರಾಜೇಶ್‌ ಮೆಡಿಚೆರ್ಲಾ ಸಹಿತ ಹಲವು ಭಾರತೀಯರು ಹೇಳಿದ್ದಾರೆ.

ಇರಾಕ್‌ನಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ನಸ್ರಲ್ಲಾ ಹೆಸರು!
ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ ಸಾವಿನ ಬಳಿಕ ಇರಾಕ್‌ನಲ್ಲಿ 100ಕ್ಕೂ ಹೆಚ್ಚು ಮಕ್ಕಳಿಗೆ ನಸ್ರಲ್ಲಾ ಎಂದು ನಾಮಕರಣ ಮಾಡಲಾಗಿದೆ. ಇದು ಶಿಯಾ ಮುಸ್ಲಿಮರ ಮೇಲೆ ನಸ್ರಲ್ಲಾ ಬೀರಿದ್ದ ಪ್ರಭಾವವನ್ನು ತೋರಿಸುತ್ತದೆ ಎಂದು ಹೇಳಲಾಗಿದೆ. ಇರಾಕ್‌ನ ಪ್ರಧಾನಿ ಮೊಹಮ್ಮದ್‌ ಶಿಯಾ ಅಲ್‌ ಸುದಾನಿ ನಸ್ರಲ್ಲಾನನ್ನು ಹುತಾತ್ಮ ಎಂದಿದ್ದಾರೆ.

ಇರಾನ್‌ ಮೇಲೆ ಇಸ್ರೇಲ್‌ದಾಳಿ ಮಾಡಲ್ಲ: ಬೈಡೆನ್‌
ವಾಷಿಂಗ್ಟನ್‌: ಇರಾನ್‌ ಮೇಲೆ ಇಸ್ರೇಲ್‌ ಪ್ರತಿ ದಾಳಿ ನಡೆಸಲ್ಲ. ದಾಳಿಗೆ ಅವಕಾಶ ಮಾಡಿ ಕೊಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇಸ್ರೇಲ್‌ಗೆ ಅಮೆರಿಕ ಬುದ್ಧಿಮಾತು ಹೇಳಲಿದೆ ಎಂದು ಹೇಳಿದ್ದಾರೆ ಎಂದು ಶ್ವೇತಭವನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next