Advertisement

Israel ವಾಯುದಾಳಿಗೆ ಬೈರುತ್ ನಲ್ಲಿ 22 ಮಂದಿ ಬಲಿ: ಹೆಜ್ಬುಲ್ಲಾ ಪ್ರಮುಖ ನಾಯಕ ಎಸ್ಕೇಪ್

05:07 PM Oct 11, 2024 | Team Udayavani |

ಬೈರುತ್: ಇಸ್ರೇಲ್ ಪಡೆಗಳು  ಉಗ್ರರನ್ನು ಗುರಿಯಾಗಿರಿಸಿಕೊಂಡು ವಾಯುದಾಳಿ ತೀವ್ರಗೊಳಿಸಿದ್ದು ಲೆಬನಾನ್ ರಾಜಧಾನಿ ಬೈರುತ್ ನಲ್ಲಿ ಶುಕ್ರವಾರ(ಅ11) 22 ಮಂದಿ ಸಾವನ್ನಪ್ಪಿದ್ದಾರೆ. ಈ ವೇಳೆ ಹೆಜ್ಬುಲ್ಲಾ ಉಗ್ರ ಸಂಘಟನೆಯ ನಾಯಕ ಸ್ಥಳದಿಂದ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ ಎಂದು ವರದಿಯಾಗಿದೆ.

Advertisement

ಇಸ್ರೇಲ್ ನಡೆಸಿದ ದಾಳಿಯಲ್ಲಿ 117 ಮಂದಿ ಗಾಯಗೊಂಡಿದ್ದಾರೆ. ಹೆಜ್ಬುಲ್ಲಾದ ಸಂಪರ್ಕ ಮತ್ತು ಸಮನ್ವಯ ಘಟಕದ ಮುಖ್ಯಸ್ಥ ವಫೀಕ್ ಸಫಾ ಪಾರಾಗಿದ್ದಾನೆ. ಹೆಜ್ಬುಲ್ಲಾದ ಅಲ್ ಮನರ್ ಟಿವಿ ಹತ್ಯೆಯ ಪ್ರಯತ್ನ ವಿಫಲವಾಗಿದೆ ಎಂದು ದೃಢಪಡಿಸಿದೆ. ದಾಳಿಯ ಸಮಯದಲ್ಲಿ ವಫೀಕ್ ಸಫಾ ಕಟ್ಟಡಗಳ ಒಳಗೆ ಇರಲಿಲ್ಲ ಎಂದೂ ಹೇಳಿದೆ.

ಹೆಜ್ಬುಲ್ಲಾದ ಭದ್ರತೆ ಮತ್ತು ರಾಜಕೀಯ ವಿಷಯಗಳನ್ನು ನಿರ್ವಹಿಸುತ್ತಿದ್ದ ವಫೀಕ್ ನನ್ನ ಗುರಿಯಾಗಿಸಿ ದಾಳಿ ನಡೆಸಿರುವುದು ಇಸ್ರೇಲ್ ಹುಡುಕಿ ಹುಡುಕಿ ಹತ್ಯೆಗೈಯುತ್ತಿರುವ ಕಾರ್ಯಾಚರಣೆ ಇನ್ನೊಂದು ಹಂತಕ್ಕೆ ತಲುಪಿರುವ ಸ್ಪಷ್ಟ ಸೂಚನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next