Advertisement

ಇಸ್ರೇಲ್‌ ಪಡೆಗೆ ಗುಜರಾತ್‌ ಯುವತಿ ಸಾಥ್‌

03:29 AM Jun 18, 2021 | Team Udayavani |

ಹೊಸದಿಲ್ಲಿ: ಕಳೆದ ತಿಂಗಳು ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ನಡುವೆ ಭಾರೀ ಹಣಾಹಣಿ ನಡೆದಿತ್ತು. ವಿಶ್ವದ ಇತರ ರಾಷ್ಟ್ರಗಳ ಮಧ್ಯಪ್ರವೇಶದಿಂದ 11 ದಿನಗಳು ಯುದ್ಧವಿರಾಮ ಸಂಭವಿ­ಸಿತ್ತು.

Advertisement

ಮಂಗಳವಾರದಿಂದ ಮತ್ತೆ ತಿಕ್ಕಾಟ ಶುರುವಾಗಿದೆ. ಇಸ್ರೇಲ್‌ ಸೇನೆ, ಗಾಜಾಪಟ್ಟಿಯಲ್ಲಿ ಹಮಾಸ್‌ ಉಗ್ರರ ನೆಲೆಯ ತೀವ್ರ ದಾಳಿ ಆರಂಭಿಸಿದೆ. ಆ ಕಾರ್ಯಾಚರಣೆಯಲ್ಲಿ ಗುಜರಾತ್‌ ಮೂಲದ 20 ವರ್ಷದ ಯುವತಿ ನಿತ್ಶಾ ಮುಲಿಯಶ ಮುಖ್ಯ ಪಾತ್ರ ವಹಿಸಿದ್ದಾರೆ ಎನ್ನುವುದು ಸದ್ಯ ಗಮನ ಸೆಳೆಯುತ್ತಿರುವ ಸುದ್ದಿ. ಇಸ್ರೇಲ್‌ ರಕ್ಷಣ ಪಡೆಗಳ ತಂಡದಲ್ಲಿ (ಐಡಿಎಫ್) ಆಕೆ ಆಧುನಿಕ ಶಸ್ತ್ರಪ್ರಯೋಗ ಹಾಗೂ ಯುದ್ಧದಲ್ಲಿ ಬಹು ಆಯಾಮದ ಕೌಶಲಗಳನ್ನು ಹೊಂದಿದ್ದಾರೆ.

ರಾಜ್‌ಕೋಟ್‌ನ ಮನವದಾರ್‌ ತಾಲೂಕಿನ ಕೊಥಾಡಿ ಎಂಬ ಹಳ್ಳಿಯಲ್ಲಿ ಆಕೆಯ ಜನನವಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ 2.4 ವರ್ಷದ ಕರ್ತವ್ಯ ನಿರ್ವಹಣೆ ಅವಧಿ­ಯಲ್ಲಿದ್ದಾರೆ. ಪ್ರಸ್ತುತ ಅವರು ಇಸ್ರೇಲ್‌-ಪ್ಯಾಲೆಸ್ತೀನ್‌ ಗಡಿಭಾಗವಾದ ಗಷ್‌ ಡಾನ್‌ನಲ್ಲಿ ನಿಯೋಜಿತಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next