ಹೊಸದಿಲ್ಲಿ : ರಾಜಸ್ಥಾನದ ಭಾರತ-ಪಾಕ್ ಗಡಿಯಲ್ಲಿ ಇಸ್ಲಾಮಿಕ್ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ಕಾರ್ಯಾಲಯ ಗಡಿ ಭದ್ರತಾ ಪಡೆಯಿಂದ (ಬಿಎಸ್‌ಎಫ್) ವಿಸ್ತೃತ ವರದಿಯನ್ನು ಕೇಳಿದೆ.
ರಾಜಸ್ಥಾನದಲ್ಲಿನ ಭಾರತ – ಪಾಕ್ ಗಡಿಯಲ್ಲಿ ರಾಡಿಕಲ್ ಇಸ್ಲಾಮಿಕ್ ಚಟುವಟಿಕೆಗಳನ್ನು ತೀವ್ರವಾಗಿ ನಡೆಯತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ವಿಸ್ತೃತ ಮಾಹಿತಿ ನೀಡುವಂತೆ ಬಿಎಸ್‌ಎಫ್ ಗೆ ಪ್ರಧಾನಿ ಕಾರ್ಯಾಲಯ ಸೂಚಿಸಿದೆ.
ಬಿಎಸ್‌ಎಫ್ ವರದಿಯ ಪ್ರಕಾರ 2000 ಇಸವಿಯ ವರೆಗೆ ಜೈಲಸಲ್ಮೇರ್ ದಕ್ಷಿಣ ಭಾಗದಲ್ಲಿ ಯಾವುದೇ ಮಸೀದಿಗಳು ಇರಲಿಲ್ಲ. ಆದರೆ ಕ್ರಮೇಣ ರಾಜಸ್ಥಾನ ಸರಕಾರದ ಭೂಮಿಯಲ್ಲಿ ಹಲವಾರು ಕಟ್ಟಡ ರಚನೆ ಕಾಮಗಾರಿಗಳು ನಡೆಯತೊಡಗಿದವು; ಈ ಪ್ರದೇಶದಲ್ಲಿನ ಹಳೇ ಮಸೀದಿಗಳನ್ನು ಕೆಡವಿ ಅವುಗಳ ಸ್ಥಾನದಲ್ಲಿ ಹೊಸ ಮಸೀದಿಗಳನ್ನು ನಿರ್ಮಿಸಲಾಗಿದೆ.
ಈ ದಿನಗಳಲ್ಲಿ ಮಾಂಡ್ಲಾ ಮಸೀದಿಗಳಲ್ಲಿ ಇಸ್ಲಾಮಿಕ್ ಚಟುವಟಿಕೆಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಬಿಎಸ್‌ಎಫ್ ತನ್ನ ವರದಿಯಲ್ಲಿ ಹೇಳಿದೆ.
ಪೀರ್ ಪಗಾರಾ ಅನುಯಾಯಿಗಳು ಈ ಮಸೀದಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ; ರಾಜಸ್ಥಾನ ಮತ್ತು ಗುಜರಾತ್ ನಿಂದಲೂ ಮುಸ್ಲಿಮರು ಈ ಮಸೀದಿಗಳಿಗೆ ಭೇಟಿ ಕೊಡುತ್ತಿದ್ದಾರೆ. ಈ ಮಸೀದಿಗಳು ಜೈಸಲ್‌ಮೇರ್‌ನ ಭಾರತ – ಪಾಕ್ ಗಡಿಯಿಂದ ಕೇವಲ 8 ಕಿ.ಮೀ ಒಳಭಾಗದಲ್ಲಿ ಇವೆ ಎಂದು ಬಿಎಸ್‌ಎಫ್ ಹೇಳಿದೆ.