Advertisement

ಗುಜರಾತ್‌ನಲ್ಲಿ ISKP ಜಾಲ ಬಯಲು: ಪೋರ್‌ಬಂದರ್‌, ಸೂರತ್‌ನಲ್ಲಿ ATS ಶೋಧ

08:43 PM Jun 10, 2023 | Team Udayavani |

ಅಹಮದಾಬಾದ್‌: ಗುಜರಾತ್‌ನ ಉಗ್ರ ನಿಗ್ರಹ ದಳ (ಎಟಿಎಸ್‌) ಪೋರಬಂದರ್‌ ಮತ್ತು ಸೂರತ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಆಫ್ ಖೊರೊಸಾನ್‌ ಪ್ರಾವಿನ್ಸ್‌ (ಐಎಸ್‌ಕೆಪಿ)ನ ಜಾಲವನ್ನು ಛೇದಿಸಿದೆ. ಆ ಸಂಘಟನೆಯ ಜತೆಗೆ ಸಂಪರ್ಕ ಇದ್ದವರು ಎಂದು ಹೇಳಲಾಗಿರುವ ಮಹಿಳೆ ಹಾಗೂ ಮೂವರು ಪುರುಷರನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿಜಿಪಿ ವಿಕಾಸ್‌ ಸಹಾಯ್‌ ಹೇಳಿದ್ದಾರೆ.

Advertisement

ಖಚಿತ ಸುಳಿವಿನ ಮೇರೆಗೆ ಈ ಶೋಧ ಕಾರ್ಯ ನಡೆಸಲಾಗಿದೆ ಮತ್ತು ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯ ಅನ್ವಯ ನಾಲ್ವರ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಸಹಾಯ್‌ ವಿವರಿಸಿದ್ದಾರೆ. ವಶಕ್ಕೆ ಪಡೆದ ಪುರುಷರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರು. ಮಹಿಳೆ ಸೂರತ್‌ನವಳು.

ಅವರೆಲ್ಲರೂ ವಿಧ್ವಂಸಕ ಕೃತ್ಯಗಳಲ್ಲಿ ತರಬೇತಿ ಪಡೆಯುವ ನಿಟ್ಟಿನಲ್ಲಿ ಅಫ್ಘಾನಿಸ್ತಾನಕ್ಕೆ ಪರಾರಿಯಾಗಲು ಮುಂದಾಗಿದ್ದರು. ಅದಕ್ಕಾಗಿ ಮೀನುಗಾರಿಕಾ ದೋಣಿಯನ್ನು ಬಳಕೆ ಮಾಡುವವರಿದ್ದರು. ಇದಕ್ಕೆಂದೇ ಪೋರ್‌ಬಂದರ್‌ನಲ್ಲಿದ್ದರು ಎಂದು ಖಚಿತವಾಗಿದೆ. ವಿಚಾರಣೆ ವೇಳೆ ಅವರು ಅಬು ಹಂಸ ಎಂಬ ಹ್ಯಾಂಡ್ಲರ್‌ನಿಂದ ತೆÌàಷಮಯ ಮಾಹಿತಿಯ ಮೂಲಕ ಮನಃ ಪರಿವರ್ತನೆಯ ತರಬೇತಿಯನ್ನೂ ಪಡೆದಿರುವುದಾಗಿ ಗೊತ್ತಾಗಿದೆ. ಜತೆಗೆ ಆತನ ಮೂಲಕವೇ ಬೋಟ್‌ ಅನ್ನು ಪಡೆದುಕೊಳ್ಳಲಿದ್ದರು. ದಾಳಿಯ ವೇಳೆ ಅವರ ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದ ದಾಖಲೆಗಳು, ಡಿಜಿಟಲ್‌ ಸಾಧನಗಳೂ ಪತ್ತೆಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next