Advertisement

ಇನ್ನು ಆರು ತಿಂಗಳಲ್ಲಿ ಅಮೆರಿಕಕ್ಕೆ ಐಎಸ್‌ಕೆಪಿ ದಾಳಿ?

07:44 PM Oct 27, 2021 | Team Udayavani |

ವಾಷಿಂಗ್ಟನ್‌/ನ್ಯೂಯಾರ್ಕ್‌:”ಇನ್ನು ಆರು ತಿಂಗಳು ಅಥವಾ ಒಂದು ವರ್ಷದ ಅವಧಿಯಲ್ಲಿ ಇಸ್ಲಾಮಿಕ್‌ ಸ್ಟೇಟ್‌ ಖೊರೊಸಾನ್‌ ಪ್ರಾವಿನ್ಸ್‌- ಐಎಸ್‌ಕೆಪಿ ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಬಗ್ಗೆ ಗುಪ್ತಚರ ಸಂಸ್ಥೆಗಳು ನೀಡಿದ ಮುನ್ನೆಚ್ಚರಿಕೆ ವರದಿಯನ್ನು ಅಧ್ಯಯನ ನಡೆಸುತ್ತಿದ್ದೇವೆ’

Advertisement

– ಹೀಗೆಂದು ದೇಶದ ಸಂಸತ್‌ಗೆ ಅಮೆರಿಕದ ರಕ್ಷಣಾ ಖಾತೆ ಸಹಾಯಕ ಸಚಿವ ಕೊಲಿನ್‌ ಖಾಲ್‌ ಮಾಹಿತಿ ನೀಡಿದ್ದಾರೆ.

ಇದರಿಂದಾಗಿ 9/11ರ ದಾಳಿಯ ಬಳಿಕವೂ ಅಫ್ಘಾನಿಸ್ತಾನ ಮತ್ತೂಮ್ಮೆ ಜಗತ್ತಿನ ದೊಡ್ಡಣ್ಣನಿಗೆ ಮತ್ತೊಮ್ಮೆ ಬೆದರಿಕೆಯಾಗಿ ಪರಿಣಮಿಸುವ ಸಾಧ್ಯತೆಗಳು ಇವೆ ಎಂಬ ಅಂಶ ವೇದ್ಯವಾಗತೊಡಗಿದೆ.

2001ರಲ್ಲಿ ನಡೆದಿದ್ದ ದಾಳಿಯಲ್ಲಿ 2,996 ಮಂದಿ ಅಸುನೀಗಿದ್ದರು. ನಂತರ ಪ್ರತೀಕಾರವಾಗಿ ಅಫ್ಘಾನಿಸ್ತಾನದಲ್ಲಿರುವ ಅಲ್‌-ಖೈದಾ ನೆಲೆಗಳ ಮೇಲೆ ಅಮೆರಿಕ ಪಡೆ ದಾಳಿ ನಡೆಸಿತ್ತು.

ಇದನ್ನೂ ಓದಿ:ಕನ್ನಡಕ್ಕಾಗಿ ಲಾಠಿ ಏಟು ತಿಂದು 15 ದಿನ ಆಸ್ಪತ್ರೆಯಲ್ಲಿದ್ದೆ: ಸಚಿವ ಆರ್.ಅಶೋಕ್

Advertisement

ಆಗಸ್ಟನ್‌ನಲ್ಲಿ ಅಮೆರಿಕ ಆ ದೇಶದಿಂದ ಇಪ್ಪತ್ತು ವರ್ಷಗಳ ಬಳಿಕ ಅಮೆರಿಕ ಪೂರ್ಣ ಪ್ರಮಾಣದಲ್ಲಿ ವಾಪಸ್‌ ಪಡೆದ ಬಳಿಕ ಆಡಳಿತವನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಂಡಿದ್ದಾರೆ. ಇದೀಗ ಆ ದೇಶದಲ್ಲಿ ತಾಲಿಬಾನ್‌ ವಿರುದ್ಧ ಐಎಸ್‌ಕೆಪಿ ಉಗ್ರರೂ ಮುಗಿ ಬಿದ್ದಿದ್ದಾರೆ. ಆದರೆ, ಖಾಲ್‌ ಅಮೆರಿಕದ ಸಂಸತ್‌ಗೆ ನೀಡಿದ ಮಾಹಿತಿ ಪ್ರಕಾರ ಅಲ್‌ ಖೈದಾ ಉಗ್ರ ಸಂಘಟನೆ ಕೂಡ ಮತ್ತೂಮ್ಮೆ ದೇಶದ ಮೇಲೆ ದಾಳಿ ನಡೆಸುವ ಸಿದ್ಧತೆಯಲ್ಲಿದೆ ಎಂದು ಹೇಳಿದ್ದಾರೆ.

9/11 ದಾಳಿಯ ಬಳಿಕ ಮತ್ತೊಮ್ಮೆ ಅಮೆರಿಕದ ಮೇಲೆ ದಾಳಿ ಎಸಗಲು ತಾಲಿಬಾನ್‌ ಸಮರ್ಥವಾಗಿದೆಯೇ ಎಂಬ ಬಗ್ಗೆ ಖಚಿತಪಟ್ಟಿಲ್ಲವೆಂದಿದ್ದಾರೆ.

ತಾಲಿಬಾನ್‌ ಮತ್ತು ಐಸ್‌ಕೆಪಿ ಪರಮ ಶತ್ರುಗಳು. ಹೀಗಾಗಿ ತಾಲಿಬಾನ್‌, ಆ ಸಂಘಟನೆ ವಿರುದ್ಧ ಹೋರಾಟ ನಡೆಸುವ ಸಾಧ್ಯತೆಗಳಿವೆ ಮತ್ತು ಆ ಸಾಮರ್ಥ್ಯವೂ ಇದೆ. ಐಎಸ್‌ಕೆಪಿ ಸಾವಿರಾರು ಮಂದಿ ಸದಸ್ಯರು ಇರುವ ಸಾಧ್ಯತೆ ಇದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next