Advertisement

ಚಂದ್ರಪ್ಪಗೆ ಲಾಭ ಬಂತಪ್ಪ

12:41 AM May 16, 2017 | Karthik A |

ಸಮತಳ ಗ್ರಾಮದ ರೈತ ಬಿ.ಎಸ್‌.ಚಂದ್ರಪ್ಪ ಮನೆ ಎದುರಿನ ಹೊಲದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ರಾಗಿ ಕೃಷಿ ನಡೆಸಿ ಬಂಪರ್‌ ಫ‌ಸಲು ಪಡೆಯುತ್ತಿದ್ದಾರೆ. ಇವರದು ಕೇವಲ ಅರ್ಧ ಎಕರೆ ಜಮೀನು. ಇದೇ ಹೊಲದಲ್ಲಿ ಮಳೆಗಾಲದಲ್ಲಿ ಭತ್ತ ಬೆಳೆದಿದ್ದರು.

Advertisement

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸಮತಳ ಗ್ರಾಮದ ರೈತ ಬಿ.ಎಸ್‌.ಚಂದ್ರಪ್ಪ ಮನೆ ಎದುರಿನ ಹೊಲದಲ್ಲಿ ಪ್ರತಿವರ್ಷ ಬೇಸಿಗೆಯಲ್ಲಿ ರಾಗಿ ಕೃಷಿ ನಡೆಸಿ ಬಂಪರ್‌ ಫ‌ಸಲು ಪಡೆಯುತ್ತಿದ್ದಾರೆ. ಇವರದು ಕೇವಲ ಅರ್ಧ ಎಕರೆ ಜಮೀನು. ಇದೇ ಹೊಲದಲ್ಲಿ ಮಳೆಗಾಲದಲ್ಲಿ ಭತ್ತ ಬೆಳೆದಿದ್ದರು. ಭತ್ತದ ಕಟಾವಿನ ನಂತರ ಹೊಲವನ್ನು ಟ್ರ್ಯಾಕ್ಟರ್‌ನಿಂದ ಹದಗೊಳಿಸಿ ನೀರುಣಿಸಿ 6 ಕಿ.ಗ್ರಾಂ.ನಷ್ಟು ರಾಗಿ ಸಸಿಗಳನ್ನು ನಾಟಿ ಮಾಡಿದ್ದರು. ಸಗಣಿ ಗೊಬ್ಬರ ಮತ್ತು 19:19 ಕಾಂಪ್ಲೆಕ್ಸ್‌ ಗೊಬ್ಬರ ಮಿಶ್ರಣ ಮಾಡಿ ಹೊಲವನ್ನು ಹೂಟಿ ಮಾಡುವಾಗ ಭೂಮಿ ಫ‌ಲವತ್ತತೆ ಇರುವಂತೆ ನೋಡಿಕೊಂಡರು. ಇವರು 5 ಕಿ.ಗ್ರಾಂ.ನಷ್ಟು ರಾಗಿ ಬೀಜ ಬಿತ್ತಿ ನಾಟಿ ಸಸಿ ತಯಾರಿಸಿಕೊಂಡಿದ್ದರು. ಕೊಳವೆ ಬಾವಿಯ ನೀರನ್ನು ಹಾಯ್‌ ನೀರಿನ ಮೂಲಕ 10 ದಿನಕೊಮ್ಮೆ ಒದಗಿಸಿದ್ದಾರೆ. ನಾಟಿ ಮಾಡಿದ 15 ದಿನಕ್ಕೆ ಸಗಣಿ ಗೊಬ್ಬರ ಮತ್ತು ಡಿ.ಎ.ಪಿ. ಹಾಗೂ 20:20 ಕಾಂಪ್ಲೆಕ್ಸ್‌ ಗೊಬ್ಬರವನ್ನು ದ್ರವ ರೂಪದಲ್ಲಿ ನೀಡಿದರು. ರಾಗಿ ಸಸಿಗಳು ಚೆನ್ನಾಗಿ ಬೆಳೆದು ಏಪ್ರಿಲ್‌ 2 ನೇ ವಾರದಿಂದ ಫ‌ಸಲು ಆರಂಭವಾಗಿತ್ತು. ಒಟ್ಟು 3 ಸಲ ದ್ರವರೂಪದ ಗೊಬ್ಬರ ನೀಡಿದ್ದಾರೆ ಚಂದ್ರಪ್ಪ.

ಈಗ ಅರ್ಧ ಎಕರೆಯಲ್ಲಿ 13 ಕ್ವಿಂಟಾಲ್‌ ನಷ್ಟು ಫ‌ಸಲು ಪಡೆದಿದ್ದಾರೆ. ಮೇ ಮೊದಲವಾರ ಕಟಾವು ಮಾಡಿ, ಕ್ವಿಂಟಾಲ್‌ ಒಂದಕ್ಕೆ 2,500ರೂ.ಗೆ ಮಾರಾಟಮಾಡಿದ್ದಾರೆ. ಸಗಣಿ ಗೊಬ್ಬರವನ್ನು ಸ್ವಲ್ಪ ಹೆಚ್ಚಾಗಿ ಬಳಸಿ ರಾಗಿ ಬೆಳೆದ ಕಾರಣ ನೆರೆ ಗ್ರಾಮದವರೇ ಖರೀದಿಸಿದ್ದಾರೆ. ಮನೆ ಬಳಕೆಗೆ ಮೂರು ಕ್ವಿಂಟಾಲ್‌ ಇರಿಸಿಕೊಂಡು 10 ಕ್ವಿಂಟಾಲ್‌ ರಾಗಿ ಮಾರಿ ಇವರಿಗೆ ರೂ.25 ಸಾವಿರ ಆದಾಯ ದೊರೆತಿದೆ. ರಾಗಿ ಬೀಜ ಖರೀದಿ, ಬಿತ್ತನೆ,ನಾಟಿ ಕೆಲಸ ಕೂಲಿ ನಿರ್ವಹಣೆ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ಇವರಿಗೆ ರೂ.8000 ಖರ್ಚು ತಗುಲಿದೆ. ಮನೆಬಳಕೆಗೆ ರಾಗಿ ಉಳಿಸಿಕೊಂಡರೂ ರೂ.17 ಸಾವಿರ ಲಾಭ ದೊರೆತಿದೆ. ಮನೆ ಎದುರಿನ ಖಾಲಿ ಸ್ಥಳದಲ್ಲಿ ನಡೆಸಿದ ಕೃಷಿಯಿಂದ ದೊರೆತ ಲಾಭ ಇದಾಗಿದೆ. ಇದರ ಜೊತೆಗೆ ಮನೆ ಹಿಂಭಾಗದ ಖಾಲಿ ಸ್ಥಳದಲ್ಲಿ ಕಸಿ ಮಾವಿನ ಮರಗಳನ್ನು ಬೆಳೆಸಿದ್ದಾರೆ. ಒಟ್ಟು 20 ಮಾವಿನ ಮರಗಳಿದ್ದು, ಇದರ ಫ‌ಸಲನ್ನು ಹಣ್ಣಿನ ವ್ಯಾಪಾರಿಗೆ ಗುತ್ತಿಗೆ ಮೂಲಕ ಮಾರಾಟ ಮಾಡಿದ್ದಾರೆ. ತೋಟಕ್ಕೆ ಬಂದು ಮಾವು ಕೊಳ್ಳುವುದರಿಂದ ತಲೆ ಬೇನೆ ಇಲ್ಲ.

– ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next