Advertisement

Team India; ಇಂಗ್ಲೆಂಡ್ ಸರಣಿಗಾಗಿ ಇಶಾನ್ ಸಂಪರ್ಕಿಸಿದ್ದ ಬಿಸಿಸಿಐ; ಆಗಿದ್ದೇನು?

10:35 AM Mar 02, 2024 | Team Udayavani |

ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕಳೆದ ಬುಧವಾರ ರಾಷ್ಟ್ರೀಯ ವಾರ್ಷಿಕ ಗುತ್ತಿಗೆ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಿರೀಕ್ಷೆಯಂತೆ ಯುವ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಬಿಸಿಸಿಐ ಕೇಳಿಕೆಗೆ ಹೊರತಾಗಿಯೂ ರಣಜಿ ಪಂದ್ಯಗಳನ್ನು ಆಡದೆ ಇರುವುದು ಈ ಕ್ರಮಕ್ಕೆ ಕಾರಣವಾಗಿದೆ.

Advertisement

ಭಾರತೀಯ ತಂಡದ ಭಾಗವಾಗಿದ್ದ ಉಭಯ ಆಟಗಾರರು ಕಳೆದ ಏಕದಿನ ವಿಶ್ವಕಪ್ ನಲ್ಲಿಯೂ ಆಡಿದ್ದರು. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಏಕೆ ಕೈಬಿಡಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಕಾರಣವನ್ನು ನೀಡಲಾಗಿಲ್ಲವಾದರೂ, ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ಒಂದು ಸಾಲು ಬಲವಾದ ಸುಳಿವು ನೀಡುತ್ತದೆ. “ಎಲ್ಲ ಕ್ರೀಡಾಪಟುಗಳು ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸದ ಅವಧಿಯಲ್ಲಿ ದೇಶೀಯ ಕ್ರಿಕೆಟ್‌ ನಲ್ಲಿ ಭಾಗವಹಿಸಲು ಆದ್ಯತೆ ನೀಡುವಂತೆ ಬಿಸಿಸಿಐ ಶಿಫಾರಸು ಮಾಡಿದೆ” ಎಂದು ಅದು ಹೇಳಿದೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದ ಇಶಾನ್ ಟೂರ್ನಿ ಮಧ್ಯದಲ್ಲಿ ವೈಯಕ್ತಿಕ ಕಾರಣಗಳಿಂದ ಭಾರತಕ್ಕೆ ವಾಪಾಸಾಗಿದ್ದರು. ಇದರ ಬಳಿಕ ದೇಶಿಯ ಟೂರ್ನಿಯಲ್ಲಿ ಆಡಿ ತಂಡಕ್ಕೆ ಮರಳಿ ಬರುವಂತೆ ಕೋಚ್ ರಾಹುಲ್ ದ್ರಾವಿಡ್ ಅವರು ಎರಡು ಬಾರಿ ಹೇಳಿಕೆ ನೀಡಿದ್ದರು.

ಆದರೆ ರಣಜಿ ಟ್ರೋಫಿ ಕೂಟ ನಡೆಯುತ್ತಿದ್ದರೂ ಇಶಾನ್ ಕಿಶನ್ ಅವರು ತಮ್ಮ ರಾಜ್ಯದ ತಂಡದ ಪರವಾಗಿ ಆಡುತ್ತಿರಲಿಲ್ಲ. ಅಲ್ಲದೆ ತಮ್ಮ ಐಪಿಎಲ್ ಫ್ರಾಂಚೈಸಿ ನಾಯಕ ಹಾರ್ದಿಕ್ ಪಾಂಡ್ಯ ಜತೆಗೆ ಅಭ್ಯಾಸ ನಡೆಸುತ್ತಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೆ ಕಾರಣವಾಗಿತ್ತು.

ಶ್ರೇಯಸ್ ಅಯ್ಯರ್ ಗಾಯದ ಕಾರಣ ನೀಡಿ ರಣಜಿ ಟ್ರೋಫಿ ಪಂದ್ಯವೊಂದರಲ್ಲಿ ಅಲಭ್ಯರಾಗಿದ್ದರು. ಆದರೆ, ಅವರಿಗೆ ಯಾವುದೇ ಗಾಯಗಳಿಲ್ಲ ಎಂದು ಎನ್ ಸಿಎ ಬಿಸಿಸಿಐಗೆ ವರದಿ ನೀಡಿತ್ತು.

Advertisement

ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಗಾಗಿ ಇಶಾನ್ ಕಿಶನ್ ಅವರನ್ನು ಬಿಸಿಸಿಐ ಸಂಪರ್ಕಿಸಿತ್ತು ಎಂದು ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ. ಆದರೆ ನಾನು ಆಡಲು ಸಿದ್ದನಿಲ್ಲ ಎಂದು ಇಶಾನ್ ತಿಳಿಸಿದ್ದಾರೆಂದು ವರದಿ ತಿಳಿಸಿದೆ. ಇದಾದ ಬಳಿಕ ಬಿಸಿಸಿಐ ಯುವ ಕೀಪರ್ ಧ್ರುವ್ ಜುರೆಲ್ ಅವರನ್ನು ಆಯ್ಕೆ ಮಾಡಿತ್ತು. ಮೂರನೇ ಪಂದ್ಯಕ್ಕೆ ಅವಕಾಶ ಪಡೆದ ಜುರೆಲ್ ನಾಲ್ಕನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next