Advertisement
ನಿಮ್ಮದೇ ಬ್ಯಾನರ್, ನೀವೇ ಹೀರೋ. ಈ ಬಗ್ಗೆ ಹೇಳಿ?ನಾನು ಹೀರೋ ಆಗೋಕೆ ಕಾರಣ, ನನ್ನ ಅಣ್ಣ ಸಿ.ಆರ್.ಮನೋಹರ್. ನನ್ನ ನೋಡಿದ ಬಹುತೇಕ ನಟ-ನಟಿಯರು-ನಿರ್ದೇಶಕರೆಲ್ಲರೂ ನಿನ್ನ ತಮ್ಮ ನೋಡೋಕೆ ಚೆನ್ನಾಗಿದ್ದಾನೆ, ಹೀರೋ ಮೆಟಿರೀಯಲ್, ನೀವೇಕೆ ಅವನನ್ನು ಹೀರೋ ಮಾಡಬಾರದು ಅಂತ ಹೇಳುತ್ತಿದ್ದರು. ಅವರೆಲ್ಲರ ಮಾತಿಗೆ ಅಣ್ಣ ಸ್ಮೈಲ್ ಕೊಡುತ್ತಲೇ ಸುಮ್ಮನಿದ್ದರು. ಒಂದು ದಿನ, ನನ್ನ ಬಳಿ ಬಂದು, “ನೀನು ಹೀರೋ ಆಗ್ತಾ ಇದೀಯಾ’ ಅಂದ್ರು. “ನೋಡೋಕೆ ಒಳ್ಳೇ ಹೈಟು, ಲುಕ್ಕು ಇದೆ. ತಯಾರಾಗು’ ಅಂದ್ರು. ನಮ್ಮದೇ ಬ್ಯಾನರ್‌ನಲ್ಲಿ ನನಗೆ ಹೀರೋ ಆಗೋ ಅವಕಾಶ ಸಿಕ್ತು.
ಭಯ ಮತ್ತು ಖುಷಿ ಎರಡೂ ಆಗ್ತಾ ಇದೆ. ನಮ್ಮದು ರೈತರ ಫ್ಯಾಮಿಲಿ. ನನ್ನ ಅಣ್ಣ ಕೃಷಿ ಮಾಡಿಕೊಂಡೇ ಈ ಮಟ್ಟಕ್ಕೆ ಬೆಳೆದವರು. ನನ್ನ ತಂದೆ ಈಗಲೂ ರೈತರೇ ಅಂತ ಹೆಮ್ಮೆಯಿಂದ ಹೇಳಿಕೊಳ್ತೀನಿ. ನಾನು ಶಾಲೆ ಓದುವಾಗಲೇ ಅಣ್ಣ ಕೃಷಿ ಮಾಡುತ್ತ, ಕಷ್ಟಪಟ್ಟು ಬೆಳೆದು, ನಮ್ಮನ್ನೆಲ್ಲ ಬೆಳೆಸಿದ್ದಾರೆ. ನಮ್ಮದು ದೊಡ್ಡ ಫ್ಯಾಮಿಲಿಯಾದರೂ, ಮಧ್ಯಮ ವರ್ಗದ ಕುಟುಂಬವೇ. ಅಣ್ಣನ ಹಾರ್ಡ್ ವರ್ಕ್ ಇವತ್ತು ನನಗೆ ದೊಡ್ಡ ಫ್ಲಾಟ್‌ಫಾರಂ ಹಾಕಿಕೊಟ್ಟಿದೆ. ತುಂಬಾ ಶ್ರದ್ಧೆಯಿಂದ ನಾನು ಇಲ್ಲಿ ಕೆಲಸ ಮಾಡಿದ್ದೇನೆ ಶೇ.200 ರಷ್ಟು ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ಮೇಲಿನ ನಿರೀಕ್ಷೆ ಹುಸಿ ಮಾಡುವುದಿಲ್ಲ. ನಿರೀಕ್ಷೆ ಇರದ ನನಗೆ ಹೀರೋ
ಆಗುವ ಅವಕಾಶ ಸಿಕ್ಕಿದ್ದೇ ದೊಡ್ಡ ಹೆಮ್ಮೆ. ಇದಕ್ಕಿಂತ ಖುಷಿ ಬೇರೊಂದಿಲ್ಲ. ಹೀರೋ ಆಗ್ತಿನಿ ಅಂದುಕೊಂಡಿದ್ರಾ?
ಖಂಡಿತ ಇಲ್ಲ. ನಾನು ನಟನಾಗಿ ಬರೋದು ಬೇಡ ಅಂದುಕೊಂಡಿದ್ದೆ. ನನ್ನ ತಂದೆ ಹಾಗೂ ತಂದೆಯ ಕೆಲಸ ನೋಡಿಕೊಂಡು ಇರೋಣ ಅಂತ ಡಿಸೈಡ್ ಮಾಡಿದ್ದೆ. ಆದರೆ, ಅಣ್ಣ ಬಂದು, ನೀನು ಹೀರೋ ಆಗ್ತಾ ಇದೀಯ, ಅದಕ್ಕೆ ಎಲ್ಲಾ ತಯಾರು ಮಾಡಿಕೋ ಅಂದಾಗ, ನನಗೂ ಎಲ್ಲೋ ಒಂದು ಕಡೆ ಇದೇ ರೈಟ್ ಚಾಯ್ಸ ಅಂತೆನಿಸಿತು. ಅಣ್ಣನ ಪ್ರೀತಿ ಹಾರೈಕೆ, ಮನೆಯವರ ಪ್ರೋತ್ಸಾಹದಿಂದ ಹೀರೋ ಆಗಿದ್ದೇನೆ.
Related Articles
ಪುರಿ ಜಗನ್ನಾಥ್ ಸರ್ ನನ್ನ ನೋಡಿದ ಹತ್ತೇ ನಿಮಿಷದಲ್ಲಿ, ಸಿನಿಮಾ ನಿರ್ದೇಶನ ಮಾಡೋಕೆ ಓಕೆ ಅಂದರು. ಅದಕ್ಕೆ ಕಾರಣ,
ನನ್ನ ಹೈಟು, ಲುಕ್ಕು. ಆಮೇಲೆ ಕಲಿತ ಬಗೆಯೇ ಬೇರೆ. ಉಪ್ಪಿ ಸರ್ ಜತೆ ಸಾಕಷ್ಟು ಟ್ರಾವೆಲ್ ಮಾಡಿದೆ. ಹಲವು ಸಲ ಅವರ ಸೆಟ್‌ಗೆ
ಹೋಗಿ ಒಂದಷ್ಟು ಕೆಲಸ ಕಲಿತಿದ್ದೇನೆ. ಅವರು ಸಾಕಷ್ಟು ಟಿಪ್ಸ್ ಕೊಟ್ಟಿದ್ದು ಸಹಾಯವಾಯ್ತು. “ವಜ್ರಕಾಯ’ವರೆಗೂ ನಾನು ಕೆಲಸ ನೋಡಿಕೊಂಡು ಇದ್ದೆ. ಅಣ್ಣ ಆಗ ವೈಜಾಕ್‌ಗೆ ನಟನೆ ತರಬೇತಿಗೆ ಕಳುಹಿಸಿದರು. ಪುರಿ ಸರ್, ಪ್ರತಿ ದಿನ ಏನೆಲ್ಲಾ ಆಯ್ತು ಅಂತ
ಮಾಹಿತಿ ಪಡೆಯುತ್ತಿದ್ದರು. ನನ್ನ ಮೇಲೆ ವಿಶ್ವಾಸ ಇಟ್ಟ ಪುರಿ ಸರ್ ಅವರ ನಂಬಿಕೆ ಉಳಿಸಿಕೊಳ್ಳಬೇಕು ಅಂತ ನಾನು ನಟನೆ,
ಡ್ಯಾನ್ಸ್, ಫೈಟು ಎಲ್ಲವನ್ನೂ ಕಲಿತೆ. “ರೋಗ್’ ಮೂಲಕ ದೊಡ್ಡ ಅನುಭವ ಆಗಿದೆ.
Advertisement
ಪುರಿ ಜಗನ್ನಾಥ್ ಬೇಕು ಅಂತ ನಿರ್ಧರಿಸಿದ್ದು ಯಾರು?ಪುರಿ ಸರ್‌ಗೆ ಒಬ್ಬ ಹೊಸ ಹೀರೋನ ಹೇಗೆ ರೀಚ್ ಮಾಡಬೇಕು ಅಂತ ಗೊತ್ತು. ಅವರ ಮೇಕಿಂಗ್ ಸ್ಟೈಲ್ ನಲ್ಲೇ ಹೀರೋ ಕ್ಲಿಕ್ ಆಗುವಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ. ಒಬ್ಬ ಹೊಸ ಹೀರೋನನ್ನು ತೋರಿಸುವ ವಿಧಾನ ಅವರಿಗೆ ಗೊತ್ತು. ಅಣ್ಣ ನನ್ನ ಬಳಿ ಬಂದು ಯಾವ ನಿರ್ದೇಶಕ ಬೇಕು ಅಂದಾಗ, ಪುರಿ ಜಗನ್ನಾಥ್ ಅಂತ ಹೇಳಿದೆ. ಅಣ್ಣನಿಗೂ ಅವರೇ ಇಷ್ಟವಾಗಿದ್ದರು. ಪುರಿ ಸರ್ ಸಿನಿಮಾದಲ್ಲಿ ಹೀರೋ ಯಾವತ್ತೂ ಸೋಲಲ್ಲ. ನಾನು ಸ್ಟಾಂಡ್ ಆಗೋಕೆ ಪುರಿ ಅವರಿಗಿಂತ ಬೇರೆ ಆಯ್ಕೆ ಇರಲಿಲ್ಲ. ನನಗೆ ಇಷ್ಟವಾದ ನಿರ್ದೇಶಕ ಅವರು. ಅವರ ಎಲ್ಲಾ ಸಿನಿಮಾಗಳನ್ನು ನಾನು ನೋಡಿದ್ದೇನೆ. ನಾನು ಹೇಳಿದ ಕೂಡಲೇ ಅಣ್ಣ ಮೀಟಿಂಗ್ ಅರೇಂಜ್ ಮಾಡಿ, ಮಾತುಕತೆ ನಡೆಸಿ, ಫಿಕ್ಸ್ ಮಾಡಿದರು. ನನ್ನಂತಹ ಹೊಸಬನನ್ನು ಹೀರೋ ಮಾಡಲು ಒಪ್ಪಿಕೊಂಡ ಪುರಿ ಸರ್ ಗ್ರೇಟ್. ಪುರಿ ಜಗನ್ನಾಥ್ ಅವರ ಬಗ್ಗೆ?
ಅವರು ತುಂಬಾ ಸಿಂಪಲ್. ನನ್ನಮಟ್ಟಿಗೆ ಅವರು ಸೂಪರ್ ಸ್ಟಾರ್ ನಿರ್ದೇಶಕರು. ನಾನು ಅವರಿಂದ ಸಾಕಷ್ಟು ಕಲಿತಿದ್ದೇನೆ.
ನನ್ನ ನೋಡಿದಾಗ, ಹಿಂದೆ ಮುಂದೆ ಯೋಚಿಸದೆ ಹೀರೋ ಮಾಡೋಕೆ ಒಪ್ಪಿದರು. ಅವರು ನನ್ನನ್ನು ದೊಡ್ಡ ಮಗನಂತೆ ಕಂಡು, ಎಲ್ಲವನ್ನೂ ಪ್ರೀತಿಯಿಂದ ಕಲಿಸಿಕೊಟ್ಟರು. ತುಂಬಾ ಫ್ರಿಡಂ ಕೊಟ್ಟರು. ಅವರ ಅನುಭವ ಶೇರ್ ಮಾಡಿಕೊಳ್ಳುತ್ತಿದ್ದರು. ಕೆಲ ಸೀನ್‌ನಲ್ಲಿ
ನಟನೆ ಮಾಡಿ ತೋರಿಸುತ್ತಿದ್ದರು. ಅವರೊಂದು ಲೈಬ್ರರಿ ಇದ್ದಂತೆ. ನನ್ನ ಜತೆ ಮಾತಾಡುವಾಗ, ನನ್ನ ವಯಸ್ಸಿಗೆ ತಕ್ಕಂತೆಯೇ
ಮಾತಾಡುತ್ತಿದ್ದರು. ನನ್ನ ಭವಿಷ್ಯಕ್ಕೆ ಮುನ್ನುಡಿ ಬರೆದವರು ಅವರು. ಅವರ ಬಗ್ಗೆ ಎಷ್ಟೇ ಹೇಳಿದರೂ ಸಾಲದು. ಅವರ ಸಿನಿಮಾ ಟೈಟಲ್‌ಗಳೆಲ್ಲಾ ನೆಗೆಟಿವ್ ಆಗಿವೆಯಲ್ಲ?
ಹೌದು, ಸಿನಿಮಾ ಟೈಟಲ್ ನೆಗೆಟಿವ್ ಆಗಿದ್ದರೂ, ಕಥೆ, ಪಾತ್ರಗಳಲ್ಲಿ ಪಾಸಿಟಿವ್ ಅಂಶಗಳಿವೆ. ಅವರ ಎಲ್ಲಾ ಸಿನಿಮಾಗಳ
ಹೆಸರನ್ನೂ ಅವರು ಟ್ಯಾಟೋ ಹಾಕಿಸಿಕೊಂಡಿದ್ದಾರೆ. “ರೋಗ್’ ಅವರಿಗೆ ಇಷ್ಟವಾದ ಹೆಸರು ಮತ್ತು ಕಥೆ. ಅದನ್ನೂ ಸಹ ಅವರ ಅಂಗೈ ಕೆಳಗೆ ಟ್ಯಾಟೋ ಹಾಕಿಸಿಕೊಂಡಿದ್ದಾರೆ. “ರೋಗ್’ ಪಾತ್ರ ಸರ್‌ಗೆ ಇಷ್ಟ. ಅವರು ಕಥೆ ಬರೆದಾಗ, “ಇಶಾನ್ ನನಗೆ ಇಷ್ಟವಾದ ಕಥೆ ಇದು. ನೀನು ನನ್ನ ನಿರೀಕ್ಷೆ ಸುಳ್ಳು ಮಾಡಬಾರದು’ ಅಂತ ಹೇಳಿ ಹೈದರಾಬಾದ್‌ನಲ್ಲಿ ಒಂದು ಸಲ, ಅಣ್ಣನ ಜತೆಯಲ್ಲೊಂದು ಸಲ,
ಬ್ಯಾಂಕಾಕ್‌ನಲ್ಲೊಂದು ಸಲ ಹೀಗೆ ಮೂರು ಬಾರಿ ನನಗೆ “ರೋಗ್’ ಸ್ಟೋರಿ ನರೇಟ್ ಮಾಡಿದ್ದರು. “ನಿನಗೆ ಕಥೆ ಮೇಲೆ
ಏನಾದರೂ ಡೌಟ್ ಇದ್ದರೆ ಕೇಳು, ಇಷ್ಟವಾಗದಿದ್ದರೆ ಹೇಳು, ನಿನಗಾಗಿ ಬೇರೆ ಕಥೆ ಮಾಡ್ತೀನಿ’ ಅಂತಾನೂ ಹೇಳಿದ್ದರು. “ರೋಗ್’ ನನ್ನ ಬದುಕಿಗೊಂದು ಹೊಸ ಭಾಷ್ಯ ಬರೆಯುವ ಸಿನಿಮಾ ಎಂಬ ಗ್ಯಾರಂಟಿ ನನಗಿದೆ. “ರೋಗ್’ ಅಂದರೆ?
ಯಾರಿಗೂ ಹೆದರದ ಪಾತ್ರವದು. ಒಂದರ್ಥದಲ್ಲಿ “ಒಂಟಿ ಸಲಗ’ ಎನ್ನಬಹುದು. ರೆಬೆಲ್ ಆಗಿರುವಂತಹ ಹುಡುಗ. ತುಂಬಾ
ಜವಾಬ್ದಾರಿ ಇರುವಂತಹ ಪಾತ್ರ. ಹೇಗೆ ಅವನು ರೋಗ್ ಥರಾ ಆಗ್ತಾನೆ ಎಂಬುದು ಕಥೆ. ಇಲ್ಲಿ ರಿವೇಂಜ್ ಇಲ್ಲ. ಕ್ಯೂಟ್ ಲವ್
ಸ್ಟೋರಿ ಇದೆ. ಮುಂದೆ ಯಾವುದಾದ್ರೂ ಕಥೆ ಕೇಳಿದ್ದೀರಾ?
ಸದ್ಯ “ರೋಗ್’ ಫಲಿತಾಂಶಕ್ಕೆ ಕಾಯುತ್ತಿದ್ದೇನೆ. ಈಗಾಗಲೇ ಮೂರು ಕಥೆ ಕೇಳಿದ್ದೇನೆ. ಒಂದಷ್ಟು ಕಥೆಗಳೂ ಬರುತ್ತಿವೆ. ಈಗಲೇ ಯಾವುದನ್ನೂ ಹೇಳ್ಳೋಕ್ಕಾಗಲ್ಲ. ಅದಕ್ಕೆ ಸಮಯ ಬೇಕು. ವಿಜಯ್ ಭರಮಸಾಗರ