Advertisement
ಕೇಂದ್ರ ಸರಕಾರದ ಅಧೀನದಲ್ಲಿರುವ “ಸಿಬಂದಿ ಆಯ್ಕೆ ಆಯೋಗ’ (ಎಸ್‌ಎಸ್‌ಸಿ) ಕೇಂದ್ರ ಸರಕಾರದ ವಿವಿಧ ಇಲಾಖೆಗಳ ಗ್ರೂಪ್ ಬಿ ಹುದ್ದೆಗಳ ನೇಮಕಾತಿಗಾಗಿ ಹಲವಾರು ಪರೀಕ್ಷೆಗಳನ್ನು ನಡೆಸಿ ಆಯಾ ಇಲಾಖೆಗೆ ಬೇಕಾದ ಅಭ್ಯರ್ಥಿಗಳನ್ನು ಪ್ರತ್ಯೇಕ ವಾಗಿ ಆಯ್ಕೆ ಮಾಡುತ್ತಿದೆ. ಆ ಎಲ್ಲ ಪರೀಕ್ಷೆಗಳನ್ನು ಕೈಬಿಟ್ಟು, ಗ್ರೂಪ್ ಬಿ (ಪತ್ರಾಂಕಿತಯೇತರ) ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಒಂದೇ ಸಿಇಟಿ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಹಾಗೂ ಆ ಸಿಇಟಿ ಹೊಣೆಯನ್ನು ಹೊಸದಾಗಿ ಸ್ಥಾಪಿಸಲಾಗುವ ವಿಶೇಷ ಪ್ರಾಧಿಕಾರಕ್ಕೆ ನೀಡಬೇಕು ಎಂಬುದು ಪ್ರಸ್ತಾವನೆಯ ಮೂಲ ತಿರುಳು.
– ಒಂದೇ ಸಿಇಟಿಯಿಂದ ಪ್ರತಿ ಇಲಾಖೆಗೂ ಪ್ರತ್ಯೇಕ ಪರೀಕ್ಷೆ ನಡೆಸುವ ಕಿರಿಕಿರಿಯಿಂದ ಮುಕ್ತಿ.
– ಹಲವು ಪರೀಕ್ಷೆಗಳ ಬದಲು ಒಂದೇ ಪರೀಕ್ಷೆ ಜಾರಿಯಾದರೆ ಖರ್ಚಿಗೆ ಕಡಿವಾಣ.
– ಒಂದು ಪರೀಕ್ಷೆಗೆ ಮಾತ್ರ ಸಿದ್ಧತೆ ಬೇಕಿರುವುದರಿಂದ ಅಭ್ಯರ್ಥಿಗಳೂ ನಿರಾಳ.