Advertisement
ಒಂದೊಮ್ಮೆ ಬಿಜೆಪಿ ನಿರೀಕ್ಷಿಸಿದಷ್ಟು ಸ್ಥಾನಗಳು ಲೋಕಸಭಾ ಚುನಾವಣೆಯಲ್ಲಿ ದಕ್ಕಿದ್ದರೆ ರಾಜ್ಯ ಸರಕಾರವನ್ನು ಕೆಡಗುವ ಅಥವಾ ಅತಂತ್ರಗೊಳಿಸುವ ಅಥವಾ ಬೇರೆ ಕಾರಣಗಳಿಗಾಗಿ ಕಾಡುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ ಎನ್‌ಡಿಎ ಬಲ 300 ತಲುಪದೇ ಇರುವುದರಿಂದ ಯಾವುದೇ ರಾಜ್ಯ ಸರಕಾರವನ್ನು ಪತನಗೊಳಿ ಸುವ ಸಾಹಸಕ್ಕೆ ಬಿಜೆಪಿ ಕೈ ಹಾಕುವ ಸಾಧ್ಯತೆ ಕ್ಷೀಣವಾಗಿದೆ. ಮಹಾರಾಷ್ಟ್ರದ ಪ್ರಯೋಗವನ್ನು ಕರ್ನಾಟಕದಲ್ಲಿ ನಡೆಸುವುದಕ್ಕೆ ಸಂಘ-ಪರಿವಾರದ ಹಿರಿಯರು ಹಾಗೂ ಬಿಜೆಪಿ ವರಿಷ್ಠರು ಇನ್ನು ಮುಂದೆ ಒಪ್ಪಿಗೆ ನೀಡಲಿಕ್ಕಿಲ್ಲ.
ಹೀಗಾಗಿ ತನ್ನದೇ ಆದ ಸ್ವಯಂಕೃತಾ ಪರಾಧ ಗಳು ಕಾಂಗ್ರೆಸ್ ಸರಕಾರಕ್ಕೆ ಮುಳು ವಾಗಬಹುದೇ ವಿನಾ ಬಿಜೆಪಿಯಿಂದ ಸದ್ಯಕ್ಕಂತೂ ಅಪಾಯ ನಿರೀಕ್ಷೆ ಮಾಡುವಂತಿಲ್ಲ. ಆದರೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಮಾಡಿರುವ ಸಾಧನೆ ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಪಕ್ಷಕ್ಕೆ ಎಚ್ಚರಿಕೆ ಗಂಟೆ. ಒಕ್ಕಲಿಗ ಮತಗಳು ಕಾಂಗ್ರೆಸ್ ತೆಕ್ಕೆಯಿಂದ ಅಲ್ಪಾವಧಿಯಲ್ಲಿ ಜಾರಿದೆ ಎಂಬುದಕ್ಕೆ ಇದು ದೃಷ್ಟಾಂತವಾ ಗಿದ್ದು, ಹೊಸ ಸಮೀಕರಣ ಸಾಧ್ಯತೆಯ ಬಗ್ಗೆ ಕಾಂಗ್ರೆಸ್ ಚಿಂತನೆ ನಡೆಸಬೇಕಾಗಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 1 ಸ್ಥಾನವನ್ನು ಮಾತ್ರ ಗಳಿಸಿತ್ತು. ಆದರೆ ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿತ್ತು. ಆದರೆ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇದ್ದ ಸಂದರ್ಭದಲ್ಲಿ ಕಾಂಗ್ರೆಸ್ 9 ಸ್ಥಾನ ಗಳಿಸಿತ್ತು. ಇಡೀ ದೇಶದಲ್ಲಿ ಕಾಂಗ್ರೆಸ್‌ಗೆ ಲಭಿಸಿದ ದೊಡ್ಡ ವಿಜಯ ಇದಾಗಿತ್ತು.
Related Articles
Advertisement