ಮೆಲ್ಬರ್ನ್: ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಅವರು ಕಳೆದ ವಾರ ನಿಧನರಾಗಿದ್ದಾರೆ. ಥಾಯ್ಲೆಂಡ್ ಪ್ರವಾಸದಲ್ಲಿದ್ದ ಶೇನ್ ವಾರ್ನ್ ರ ಅನಿರೀಕ್ಷಿತ ಸಾವು ಕ್ರೀಡಾಭಿಮಾನಿಗಳಿಗೆ ಆಘಾತ ನೀಡಿದೆ. ಹೃದಯಾಘಾತದಿಂದ ವಾರ್ನ್ ಅಸುನೀಗಿದ್ದಾರೆ ಎಂದು ವರದಿ ಹೇಳಿದೆ.
ಆದರೆ ವಾರ್ನ್ ಸಾವಿಗೆ ಅವರ ಅತಿಯಾದ ಡಯಟ್ ಕೂಡಾ ಕಾರಣ ಎನ್ನಲಾಗಿದೆ. ವಾರ್ನ್ ಅವರು ಇತ್ತೀಚೆಗೆ ತಮ್ಮ ತೂಕ ಇಳಿಸಲು ನಿರ್ಧರಿಸಿದ್ದು, ಅದಕ್ಕಾಗಿ ಲಿಕ್ವಿಡ್ ಡಯಟ್ ಮೊರೆ ಹೋಗಿದ್ದರು.
ಈ ಬಗ್ಗೆ ವಾರ್ನ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು. “ಆಪರೇಷನ್ ಷ್ರೆಡ್ ಪ್ರಾರಂಭವಾಗಿದೆ (10 ದಿನಗಳಲ್ಲಿ) ಜುಲೈ ವೇಳೆಗೆ ಕೆಲವು ವರ್ಷಗಳ ಹಿಂದಿನ ಈ ಆಕಾರಕ್ಕೆ ಮರಳುವುದು ನನ್ನ ಗುರಿ ” ಎಂದು ಟ್ವೀಟ್‌ನಲ್ಲಿ ಹೇಳಿದ್ದರು.
ಶೇನಾ ವಾರ್ನ್ ಅವರು ತಮ್ಮ ತೂಕ ಕಡಿಮೆ ಮಾಡಲು ಬಯಸಿದ್ದರು. ತಮ್ಮ ಹಿಂದಿನ ದೇಹಾಕಾರ ಹೊಂದುವ ಕಾರಣ ಅವರು ಲಿಕ್ವಿಟ್ ಡಯಟ್ ನಲ್ಲಿದ್ದರು ಎಂದು ಬಹುಕಾಲದಿಂದ ವಾರ್ನ್ ಮ್ಯಾನೇಜರ್ ಆಗಿದ್ದ ಜೇಮ್ಸ್ ಎರ್ಸ್ಕಿನ್ ಹೇಳಿದ್ದಾರೆ.
ಇದನ್ನೂ ಓದಿ:ಇವಿಎಂ ಸ್ಟ್ರಾಂಗ್ ರೂಮ್ ಕಾಯಲು ಎಸ್ ಪಿ ಕಾರ್ಯಕರ್ತರ ಮೂರು ಪಾಳಿಗಳ ಕೆಲಸ !
ವಾರ್ನ್ ಅವರು 14 ದಿನಗಳ ಡಯಟ್ ಕೋರ್ಸ್ ಮಾಡುತ್ತಿದ್ದರು. ಇದರಲ್ಲಿ ವಾರ್ನ್ ಯಾವುದೇ ಘನ ಆಹಾರ ಸೇವಿಸುವಂತಿರಲಿಲ್ಲ. ಕೇವಲ ದ್ರವಾಹಾರ ಮಾತ್ರ ಸೇವಿಸಬೇಕಿತ್ತು. ವಾರ್ನ್ ಅವರು ನಿಧನಕ್ಕೂ ಮೊದಲು ಅತೀಯಾಗಿ ಬೆವರುತ್ತಿದ್ದರು ಎಂದು ವರದಿ ಹೇಳಿದೆ.
ಈ ದ್ರವ ಆಹಾರಗಳು ದೇಹದಲ್ಲಿ ಕ್ಯಾಲೋರಿ ಕೊರತೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿದ್ದು, ಅದು ಹೆಚ್ಚುವರಿ ಕೊಬ್ಬನ್ನು ಸೇವಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಕಾರಣವಾಗುತ್ತದೆ.