ಹುಮನಾಬಾದ: ಮತ್ತೆ ಜೆಡಿಎಸ್ ವಿರುದ್ಧ ಮುಗಿಬಿದ್ದಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದಲ್ಲಿನ ಜನತಾದಳ ಸೆಕ್ಯುಲರ್ ಪಕ್ಷವೋ ಅಥವಾ ಸಂಘ ಪರಿವಾರಕ್ಕೆ ಬೆಂಬಲ ನೀಡುತ್ತಿ ದೆಯೋ ಎಂಬುದರ ಕುರಿತು ಉತ್ತರಿಸಬೇಕು.
ಬಿಜೆಪಿ ಜೊತೆ ಇದ್ದರೂ ಕೂಡ ಅದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಬೀದರ್ ಜಿಲ್ಲೆ ಹುಮನಾಬಾದನಲ್ಲಿ ಗುರುವಾರ
ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ರಾಹುಲ್, ಜೆಡಿಎಸ್ ವಿರುದಟಛಿ ವಾಗಾಟಛಿಳಿ ಮುಂದುವರಿಸಿದರು. ಬಳಿಕ, ಮೋದಿ ವಿರುದ್ಧ ವಾಗ್ಧಾಳಿ ನಡೆಸಿ, ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಅನೇಕ ಸುಳ್ಳು ಭರವಸೆಗಳನ್ನು ನೀಡಿದೆ. ರೈತರ ನೆರವಿಗೆ ಧಾವಿಸುವುದಾಗಿ ಹೇಳಿದ ಬಿಜೆಪಿ, ರೈತರ ಸಂಕಷ್ಟದಲ್ಲಿ ಕೈ ಹಿಡಿಯುವ ಕೆಲಸ ಮಾಡಿಲ್ಲ. ನಾನು ಮೋದಿ ಅವರ ಕಚೇರಿಗೆ ಹೋಗಿದ್ದೆ. “ಮೊದಿಜೀ ಭಾರತದ ರೈತರು ಸಾಲ ಮನ್ನಾ ಮಾಡುವಂತೆ ಕೇಳುತ್ತಿದ್ದಾರೆ’ ಎಂದು ತಿಳಿಸಿದೆ. ಆದರೆ, ಈವರೆಗೂ ಮೋದಿ ಅವರು ಉತ್ತರ ನೀಡಿಲ್ಲ ಎಂದರು.
ಇದೇ ಪ್ರಶ್ನೆಯನ್ನು ನಾನು ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಕೇಳಿದೆ.ಕರ್ನಾಟಕದ ರೈತರ ಸಾಲ ಮನ್ನಾ ಮಾಡಲು ಸಾಧ್ಯವೇ ಎಂದು ಕೇಳಿದ ಕೇವಲ 10 ದಿನಗಳಲ್ಲಿ 8 ಸಾವಿರ ಕೋಟಿ ರೂ.ರೈತರ ಸಾಲ ಮನ್ನಾ ಮಾಡಿದ್ದಾರೆ.
ಆದರೆ, ಕೇಂದ್ರ ಸರ್ಕಾರ ಒಂದು ರೂ.ಕೂಡ ನೆರವಾಗುವ ನಿಟ್ಟಿನಲ್ಲಿ ಕೆಲಸ ಮಾಡಿಲ್ಲ ಎಂದರು. ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರದ ವಿರುದಟಛಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಕರ್ನಾಟಕದ ಬಿ.ಎಸ್.ಯಡಿಯೂರಪ್ಪ ಹಾಗೂ ನಾಲ್ವರು ಸಚಿವರು ಜೈಲು ಊಟ ಮಾಡಿ ಬಂದಿದ್ದು, ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಗೆ ಘೋಷಣೆ ಮಾಡಿದ್ದಿರಿ? ಮೋದಿ ನನ್ನ ವಿರುದ್ಧ ಏನು ಬೇಕಾದರೂ ಮಾತನಾಡಬಹುದು. ಯಾವ ಪದಗಳನ್ನು ಬೇಕಾದರೂ ಬಳಸಬಹುದು. ಆದರೆ ನಾನು ಅವರ ವಿರುದ್ಧ ಒಂದು ಶಬ್ದ ಕೂಡ ಮಾತನಾಡುವುದಿಲ್ಲ ಎಂದರು.