Advertisement

ಸಿಗುವುದಿಲ್ಲವೆಂದು ತಿಳಿದ ಮೇಲೂ ಪ್ರೀತಿಸುವುದು ಮೂರ್ಖತನವೇ?

01:17 PM May 16, 2017 | Team Udayavani |

ನಾವು ಪ್ರೀತಿಸುವವರು ಎಲ್ಲೇ ಇರಲಿ, ಹೇಗೇ ಇರಲಿ, ತುಂಬಾ ಸಂತೋಷದಿಂದಿರಲಿ ಎಂದು ಅವರ ಹಿತವನ್ನು ಬಯಸುವುದೇ ನಿಜವಾದ ಪ್ರೀತಿ ಎಂಬುದು ನಾನು ತಿಳಿದ ಅರ್ಥ. ನಮಗೆ ಸಿಗಲೇಬೇಕೆಂಬ ಆಸೆಯಿಂದ ಪ್ರೀತಿಸುವುದು ಸ್ವಾರ್ಥ. 

Advertisement

ಪ್ರೀತಿಯೆಂಬ ಎರಡಕ್ಷರಗಳ ಸಮುದ್ರದೊಳಗೆ ಧುಮುಕಿದ ಮೇಲೆ ಈಜು ಬಂದರೂ, ಬರದೇ ಇದ್ದರೂ ಭಾವನೆಗಳ ಸಮುದ್ರದೊಳಗೆ ಒ¨ªಾಡುವುದಂತೂ ಖಚಿತ. ಪ್ರೀತಿಯು ಯಾರಿಗೆ ಯಾರ ಮೇಲೆ, ಯಾವಾಗ ಹುಟ್ಟುತ್ತದೋ ಯಾರಿಗೂ ತಿಳಿಯದು. ಈ ಪ್ರೀತಿಯ ಬಲೆಗೆ ಸಿಲುಕದವರು ಬಹುಶಃ ಈ ಪ್ರಪಂಚದಲ್ಲೇ ಇಲ್ಲವೇನೋ! ಎಂಥ ಮಹಾನುಭಾವರಾದರೂ ಒಂದಲ್ಲಾ ಒಂದು ಬಾರಿ ಈ ಪ್ರೀತಿಯ ಸುಳಿಗೆ ಸಿಕ್ಕಿ ಒದ್ದಾಡಿರುತ್ತಾರೆ. 

ಇಂಥ ಪ್ರೀತಿಯ ಬಲೆಗೆ ನಾನು ಸಿಕ್ಕಿ ಒ¨ªಾಡುತ್ತಿ¨ªೆನೆಂದು ತಿಳಿದದ್ದು ಅವಳಿಂದ ನಾನು ದೂರವಾದಾಗ! ಜೊತೆಯಲ್ಲಿ¨ªಾಗ ಏನಂದುಕೊಳ್ಳುತ್ತಾಳ್ಳೋ ಎಂಬ ಸಂಕೋಚದಿಂದಲೇ ಮಾತನಾಡಿಸುತ್ತಿ¨ªೆ. ಹೀಗಾಗಿ ಸರಿಯಾಗಿ ಮಾತನಾಡುತ್ತಲೇ ಇರಲಿಲ್ಲ. ಅವಳು ನನ್ನ ಪಕ್ಕದಲ್ಲಿ ನಿಂತರೆ ಮೊದಲ ಸಿನಿಮಾನೇ ಶತದಿನೋತ್ಸವ ಪೂರೈಸಿದ ನಾಯಕ ನಟನಷ್ಟು ಸಂಭ್ರಮ! ಅವಳ ಓರೆಗಣ್ಣಿನ ಒಂದೇ ಒಂದು ನೋಟಕ್ಕಾಗಿ ಪ್ರತಿದಿನವೂ ಪರಿತಪಿಸುತ್ತಿ¨ªೆ. 

ಅವಳು ಕಾಲೇಜಿಗೆ ಒಂದು ದಿನ ಬರದಿದ್ದರೆ ನನ್ನ ಮನದಾಳದಲ್ಲಿ ಹಲವಾರು ಪ್ರಶ್ನೆಗಳ ಸರಮಾಲೆ ಮೂಡುತ್ತಿದ್ದವು. ಮನಸ್ಸಿನಲ್ಲಿ ಇಷ್ಟೆಲ್ಲಾ ತಳಮಳಗಳನ್ನು ಸೃಷ್ಟಿಸಿದ ಅವಳನ್ನು ನಾನು ಪ್ರೀತಿಸುತ್ತಿ¨ªೆನೆಂದು ನನಗೂ ತಿಳಿಯದೇ ಹೋಯಿತು. ಅವಳನ್ನು ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ¨ªೆ. ಅವಳನ್ನು ಈ ರೀತಿ ಹುಚ್ಚನಂತೆ ಪ್ರೀತಿಸಿದವನು ಅವಳ ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳದೆಯೇ ಇರುತ್ತೇನೆಯೇ? ಅವಳ ಹಿನ್ನೆಲೆಯನ್ನು ಅಲ್ಪಸ್ವಲ್ಪ ತಿಳಿದುಕೊಂಡಿ¨ªೆ!

ಆಮೇಲೊಂದು ದಿನ ಬರಸಿಡಿಲಿನಂತೆ ವಿಷಯವೊಂದು ತಿಳಿದುಬಂತು. ಅವಳಿಗೆ ಆಗಲೇ ಮದುವೆ ನಿಶ್ಚಯವಾಗಿದೆ ಎಂದು! ಆದರೂ ನಾನು ಅವಳನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಹೀಗೆ ಅವಳು ನನಗೆ ಸಿಗುವುದಿಲ್ಲವೆಂದು ಅರಿತ ಮೇಲೂ ಅವಳನ್ನು ಪ್ರೀತಿಸುತ್ತಿದ್ದುದರಿಂದ, ಸ್ನೇಹಿತರು ನನ್ನನ್ನು ಮೂರ್ಖ, ಹುಚ್ಚ ಎಂದು ಬಯ್ಯುತ್ತಿದ್ದರು.
ಈಗ ನನ್ನ ಮನದಲ್ಲಿ ಅನೇಕ ಪ್ರಶ್ನೆಗಳೆದ್ದವು. ಪ್ರೀತಿಸುವುದೆಂದರೆ ಮದುವೆಯಾಗುವುದೇ? ಪ್ರೀತಿಸುವುದೆಂದರೆ ಒಂದಾಗಿ ಬಾಳುವುದೇ? ಪ್ರೀತಿಸುವುದೆಂದರೆ ಯಾವಾಗಲೂ ನಾವು ಪ್ರೀತಿಸುತ್ತಿರುವವರ ಪಕ್ಕದಲ್ಲಿಯೇ ಇರುವುದೇ? ಇವೆಲ್ಲಾ ಪ್ರಶ್ನೆಗಳಿಗೆ ಉತ್ತರ ನನಗೂ ತಿಳಿಯದು. 

Advertisement

ನಾವು ಪ್ರೀತಿಸುವವರು ಎಲ್ಲೇ ಇರಲಿ, ಹೇಗೇ ಇರಲಿ, ತುಂಬಾ ಸಂತೋಷದಿಂದಿರಲಿ ಎಂದು ಅವರ ಹಿತವನ್ನು ಬಯಸುವುದೇ ನಿಜವಾದ ಪ್ರೀತಿ ಎಂಬುದು ನಾನು ತಿಳಿದ ಅರ್ಥ. ನಮಗೆ ಸಿಗಲೇಬೇಕೆಂಬ ಆಸೆಯಿಂದ ಪ್ರೀತಿಸುವುದು ಸ್ವಾರ್ಥ. ನಾವು ಪ್ರೀತಿಸಿದವರು ನಮಗೆ ಸಿಗುವುದಿಲ್ಲವೆಂದು ತಿಳಿದು ಇನ್ನೂ ಹೆಚ್ಚಾಗಿ ಅವರನ್ನು ಪ್ರೀತಿಸುವುದೇ ನಿಜವಾದ ಪ್ರೀತಿ. ಹೀಗಾಗಿ ಅವಳು ಸಿಕ್ಕದೇ ಇದ್ದರೂ ನನ್ನ ಪ್ರೀತಿಯೇನೂ ಕಡಿಮೆಯಾಗಲಿಲ್ಲ. “ಪ್ರೀತಿ ಮಧುರ ತ್ಯಾಗ ಅಮರ’ ಎಂದು ಹೇಳಿರುವುದು ನನ್ನಂಥ ಅಮರಪ್ರೇಮಿಗಳಿಗೇ ಅಂತ ಅನ್ನಿಸುತ್ತೆ. 

– ಗಿರೀಶ್‌ ಚಂದ್ರ ವೈ. ಆರ್‌.

Advertisement

Udayavani is now on Telegram. Click here to join our channel and stay updated with the latest news.

Next