Advertisement

Pakistan: ಇಮ್ರಾನ್‌ ಪತ್ನಿಗೂ ಭ್ರಷ್ಟಾಚಾರದ ಉರುಳು ?

11:31 PM Nov 11, 2023 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಭ್ರಷ್ಟಾ ಚಾರದ ಉರುಳು ಸುತ್ತಿಕೊಂಡಿರು ವಂತೆಯೇ ಇದೀಗ ಅವರ ಪತ್ನಿ ಬುಶ್ರಾ ಬೀಬಿಗೂ ಭ್ರಷ್ಟಾಚಾರ ಪ್ರಕರಣದ ಕಂಟಕ ಎದು ರಾಗಿದ್ದು, ಆಕೆಯೂ ಮುಂದಿನ ದಿನಗಳಲ್ಲಿ ಜೈಲುವಾಸ ಅನುಭವಿಸುವ ಸಾಧ್ಯತೆಗಳಿದೆ ಎಂದು ಪಾಕ್‌ ಮಾಧ್ಯಮಗಳು ವರದಿ ಮಾಡಿವೆ.

Advertisement

ಬುಶ್ರಾಬೀಬಿ ಅವರು ಅಕ್ರಮವಾಗಿ ಹಣಸ್ವೀಕರಿ ಸು ವ ಆರೋಪಕ್ಕೆ ಸಂಬಂಧ ಪಟ್ಟಂತೆ ಕೆಲವು ಸಾಕ್ಷಿಗಳನ್ನು ರಾಷ್ಟ್ರೀಯ ಅಕೌಂಟೆಬಲಿಟಿ ಬ್ಯೂರೋ (ಎನ್‌ಎಬಿ) ಪರಿಶೀಲಿಸುತ್ತಿದೆ, ಹೊಸ ಸಾಕ್ಷಿಗಳು ಎನ್‌ಎಬಿಗೆ ಲಭ್ಯವಾಗಿವೆ ಎನ್ನಲಾಗುತ್ತಿದೆ ಈ ನಿಟ್ಟಿನಲ್ಲಿ ಆಕೆಯನ್ನು ಶೀಘ್ರವೇ ಅಧಿಕಾರಿಗಳು ಬಂಧಿಸ ಬಹುದು ಎನ್ನಲಾಗುತ್ತಿದೆ.

ಏತನ್ಮಧ್ಯೆ, ಇಮ್ರಾನ್‌ ಪಕ್ಷದ ಮಾಜಿ ಸದಸ್ಯ ಫ‌ಹಾದ್‌ ಚೌಧರಿ ತಮ್ಮ ಅಧಿಕಾರಾವಧಿಯಲ್ಲಿನ ದ್ವಿಪಥ ವಿಚಾರದಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮನ್ಸ್‌ ಜಾರಿಗೊಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next