Advertisement
ಇಂಥವರಿಗೆ ಜೀವನದ ಬಗ್ಗೆ ದ್ವೇಷವಿರುವುದಿಲ್ಲ. ಬದುಕಲು ಹೆಮ್ಮರದ ಮಹತ್ವಾಕಾಂಕ್ಷೆ. ಆದರೆ, ಕ್ಲಿಷ್ಟ ಪರಿಸ್ಥಿತಿಯಲ್ಲಿ ದಿಕ್ಕು ತೋಚದೆ, ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಕುಟುಂಬ, ಸ್ನೇಹಿತರು ಮತ್ತು ಆಫೀಸಿನಲ್ಲಿ ಎಲ್ಲರ ಮುಂದೆಯೂ ಇವಳು ಭಾವನಾತ್ಮಕನಗ್ನತೆ (emotional nudity) ಒಳಗಾಗಿ ಈ ರೀತಿ ಪ್ರಲಾಪಿಸುತ್ತಾಳೆ. ಈಗ ಎಲ್ಲಾ ಕಳಕೊಂಡು ಶೂನ್ಯಭಾವ ಡಿಗ್ರಿಯಲ್ಲಿ ಚಿನ್ನದ ಪದಕ ಪಡೆದ ಬುದ್ಧಿವಂತೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಒಳ್ಳೆಯ ಕೆಲಸ ಸಿಕ್ಕಿತು. ಮನೆಯ ಸಾಲ ತೀರಿಸಲು ಯತ್ನಿಸುತ್ತಿದ್ದಳು. ಕೆಲಸದಲ್ಲಿ ಅಚ್ಚುಕಟ್ಟುತನ, ಚುರುಕು ಮತ್ತು ಕಲಾವಂತಿಕೆ ಸೇರಿ, ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಳು. ನಾಲ್ಕೈದು ವರ್ಷಗಳಲ್ಲಿ ಬಹಳ ಬೇಗ ಬೆಳೆದಿದ್ದಳು. ಮಧ್ಯಮ ವರ್ಗದ ಹುಡುಗಿ, ಮದುವೆ ಗೊತ್ತಾದರೆ ಎಷ್ಟು ಸಾಲ ಮಾಡಬೇಕು ಎಂಬ ಲೆಕ್ಕವನ್ನೂ
ಹಾಕಿಕೊಂಡಿದ್ದಳು.
ಯಶೋಗಾಥೆಯ ಕಥೆಗೆ ಕಿವಿಯಾದರು. ಇವಳಿಗೂ ಹುಮ್ಮಸ್ಸು ದುಪ್ಪಟ್ಟಾಯಿತು. ಪ್ರಾಜೆಕ್ಟ್ ಅನ್ನು ಯಶಸ್ವಿ ಮಾಡಿಕೊಟ್ಟಿದ್ದಕ್ಕೆ, ಚಿಕ್ಕ ಪ್ರೊಮೋಶನ್ ಕೂಡ ಸಿಕ್ಕಿತು. ಆಫೀಸಿನಲ್ಲಿ ಮ್ಯಾನೇಜರ್ ಜೊತೆಗೆ ವೈಯಕ್ತಿಕ ಪರಿಚಯ ಯಾವಾಗಲೂ ಒಳ್ಳೆಯದಲ್ಲ. ವೈಯಕ್ತಿಕ ವಿಚಾರಗಳಿಗೆ ಹೋದಷ್ಟೂ ಕಿರಿಕಿರಿ ಜಾಸ್ತಿ. ಇವಳಿಗೂ ಕಿರಿಕಿರಿಯಾಗಿದೆ. ಆಫೀಸಿನ ನಿಯಮದ ಪ್ರಕಾರ, ಮ್ಯಾನೇಜರ್ ಜೊತೆಗೆ ವೈಯಕ್ತಿಕ ಸಂಬಂಧ ಹೊಂದಬಾರದೆಂದು ಗೊತ್ತಿದ್ದೂ ಇವಳು ಆತ್ಮೀಯವಾಗಿದ್ದರಿಂದ, ಇವಳು ರಾಜೀನಾಮೆ ಕೊಡುವ ಪರಿಸ್ಥಿತಿ ಬಂದಾಗ, ಇವಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ.
Related Articles
ತೆಗೆದುಕೊಳ್ಳುವ ಮುಂಚೆ ಯೋಚಿಸಿ. ಪ್ರಾಜೆಕ್ಟ್ ಪಾರ್ಟಿಗಳಲ್ಲಿ ಕುಡಿಯಬೇಡಿ. ನಿಮ್ಮ ಆಫೀಸಿನ ನಿಯಮಾವಳಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ನಿಮ್ಮ ಪರಿಶ್ರಮದ ಹಿಂದೆ ನಿಮ್ಮ ಕುಟುಂಬವಿರುತ್ತದೆ. ಎಲ್ಲಾ ವಿಚಾರಗಳನ್ನೂ ಕುಟುಂಬದವರೊಂದಿಗೆ
ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ. ಆಫೀಸಿನಲ್ಲೇ ಇರುವ ಮನೋವಿಜ್ಞಾನಿಗಳ ಸಲಹೆಯನ್ನೂ ಪಡೆಯಿರಿ.
Advertisement
ಡಾ. ಶುಭಾ ಮಧುಸೂದನ್, ಚಿಕಿತ್ಸಾ ಮನೋವಿಜ್ಞಾನಿ