Advertisement
ಅಹಿತಕರ ರುಚಿ (Disguesia)ಕೆಟ್ಟ ಉಸಿರು, ಬಾಯಿಯಲ್ಲಿ ರುಚಿ ಗ್ರಹಿಸಲು ಅಸಾಧ್ಯವಾಗದಿರುವುದು ಅಥವಾ ಅಹಿತಕರ ರುಚಿ ಕೊರೋನಾ ರೋಗಿಗಳಲ್ಲಿ ಕಂಡುಬರುವಂತಹ ಮೊತ್ತಮೊದಲ ಲಕ್ಷಣ.
(Xerostomia)
ಬಾಯಿ ಯನ್ನು ತೇವವಾಗಿ ಡಲು ಬೇಕಾದ ಲಾಲಾರಸದ ಕೊರತೆಯಿಂದ ಒಣ ಬಾಯಿಯ ಸಮಸ್ಯೆ ಉಂಟಾಗುತ್ತದೆ. ಇದು ಕೋವಿಡ್ -19ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಕೋವಿಡ್ ವೈರಾಣು ಲಾಲಾರಸ ಸ್ರವಿಸುವ ಗ್ರಂಥಿಗಳಿಗೆ ಸೋಂಕನ್ನು ಉಂಟುಮಾಡುತ್ತದೆ ಎಂದು ಇತ್ತೀಚೆಗಿನ ಅಧ್ಯಯನ ವರದಿ ಮಾಡಿದೆ. ಇದಲ್ಲದೆ ಕೆಲವರಿಗೆ ಸತತವಾಗಿ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆಯಾಗಿ ಬಾಯಿಯ ಮೂಲಕ ಶ್ವಾಸ ತೆಗೆದುಕೊಂಡಾಗ ಬಾಯಿಯಲ್ಲಿಯ ಲಾಲಾರಸ ಒಣಗಿ ಒಣ ಬಾಯಿಯ ಸಮಸ್ಯೆ ಉಂಟಾಗುತ್ತದೆ. ಬಾಯಿಯ ಹುಣ್ಣುಗಳು (Oral ulcers)
ಕೋವಿಡ್ ವೈರಾಣು ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಬಾಯಿಯ ಅಂಗಾಂಶದ ಸುತ್ತ ಇರುವ ರಕ್ತ ನಾಳಗಳನ್ನು ನಾಶ ಮಾಡಿ ಜೀವಕಣಗಳಿಗೆ ಆಮ್ಲಜನಕದ ಕೊರತೆ ಉಂಟುಮಾಡುತ್ತದೆ. ಇದರಿಂದ ನಾಲಗೆ ಹಾಗೂ ವಸಡುಗಳಲ್ಲಿ ಹುಣ್ಣುಗಳು ಕಂಡುಬರುತ್ತವೆ. ಹುಣ್ಣುಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಕೂಡಲೇ ತಜ್ಞ ದಂತ ವೈದ್ಯರಲ್ಲಿ ಸಮಾಲೋಚಿಸಬೇಕು.
Related Articles
ಕೆಂಪು ಮಚ್ಚೆಗಳು (COVID Tongue)
ಕೋವಿಡ್ -19 ಸೋಂಕಿಗೆ ಒಳಗಾದವರಲ್ಲಿ ನಾಲಗೆ ಮತ್ತು ಬಾಯಿಯ ಮೇಲ್ಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಂಡುಬರಬಹುದು. ಇದರಿಂದ ವಿಪರೀತ ನೋವು, ಸೋಂಕು ಹಾಗು ಸುಡುವ ಸಂವೇದನೆ ಉಂಟಾಗಬಹುದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.
Advertisement
ಹಲ್ಲಿನ ಸಂವೇದನೆ (Hypersensitivity)ಹಲ್ಲುಗಳನ್ನು ರಕ್ಷಿಸುವ ಗಟ್ಟಿಯಾದ ಹೊರಪದರ (ಎನಾಮಲ್) ದುರ್ಬಲಗೊಂಡಾಗ ಹಲ್ಲಿನ ಸಂವೇದನೆ ಉಂಟಾಗುತ್ತದೆ. ಇದರಿಂದ ತಣ್ಣನೆ ಅಥವಾ ಬಿಸಿ ಆಹಾರ ಪದಾರ್ಥಗಳ ಸೇವನೆಯಿಂದ ಸೂಕ್ಷ್ಮತೆ, ಸಿಹಿ ಮತ್ತು ಆಮ್ಲಿಯ ಆಹಾರದಿಂದ ಸಂವೇದನೆ ಕಂಡುಬರುತ್ತದೆ. ವಸಡಿನ ಉರಿಯೂತ (Gingivitis)
ಕೋವಿಡ್-19ನಿಂದ ದುರ್ಬಲಗೊಂಡು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಮೌಖೀಕ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗದೆ ಇದ್ದಾಗ ಹಲ್ಲಿನ ಸುತ್ತ ಪ್ಲೇಕ್ ಹಾಗೂ ಕ್ಯಾಲ್ಕುಲಸ್ (ಸೂಕ್ಷ್ಮಾಣುಯುಕ್ತ ಗಟ್ಟಿಯಾದ ಪದರ) ಬೆಳೆಯುತ್ತದೆ. ಇದರಿಂದ ಬಾಯಿಯ ದುರ್ವಾಸನೆ, ವಸಡಿನ ಉರಿಯೂತ, ಬ್ರಷ್ ಮಾಡಿದಾಗ ರಕ್ತ ಬರುವುದು, ವಸಡು ಕೆಂಪಾಗಿ ಊದಿಕೊಳ್ಳುವುದು ಕಂಡುಬರುತ್ತದೆ.ಕೋವಿಡ್-19 ಸೋಂಕುಪೀಡಿತ ವ್ಯಕ್ತಿಗೆ ಬಾಯಿಯ ಸಮಸ್ಯೆಗಳು ಬರುವ ಸಂಭವ ಹೆಚ್ಚು. ಹಾಗಾಗಿ ಈ ಮೇಲ್ಕಂಡ ಯಾವುದೇ ಸಮಸ್ಯೆ ಇದ್ದರೆ ಕೂಡಲೇ ದಂತವೈದ್ಯರಲ್ಲಿ ಸಲಹೆ ಪಡೆಯಬೇಕು. ದಿನನಿತ್ಯದ ಚಟುವಟಿಕೆಗಳನ್ನು ಆರಂಭಿಸುವ ತರಾತುರಿಯಲ್ಲಿ ಹಲ್ಲಿನ ಆರೋಗ್ಯವನ್ನು ನಾವು ನಿರ್ಲಕ್ಷಿಸಬಾರದು. ಬಾಯಿಯ ಸೋಂಕಿನಿಂದ ಸೂಕ್ಷ್ಮಾಣು ಜೀವಿಗಳು ನಮ್ಮ ರಕ್ತಸಂಚಾರಕ್ಕಿಳಿದು ಅನೇಕ ರೋಗಗಳು ಉಂಟಾಗಬಹುದು. ಹಲ್ಲು, ವಸಡುಗಳನ್ನು ಶುಚಿಯಾಗಿ, ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳುವುದು ದಿನನಿತ್ಯದ ಚಟುವಟಿಕೆಯಲ್ಲಿ ಅವಿಭಾಜ್ಯ ಅಂಗವಾಗಿರಬೇಕು. -ಡಾ| ನೀತಾ ಶೆಣೈ
ಉಪನ್ಯಾಸಕಿ, ಕನ್ಸರ್ವೇಟಿವ್ ಡೆಂಟಿಸ್ಟ್ರಿ ಮತ್ತು ಎಂಡೊಡಾಂಟಿಕ್ಸ್ ವಿಭಾಗ,
ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ